Live kidney donation to stranger: 10 ವರ್ಷ ಕಾನೂನು ಹೋರಾಟ ನಡೆಸಿ ಅಪರಿಚಿತೆಗೆ ಸ್ವತಃ ಕಿಡ್ನಿದಾನ ಮಾಡಿದ ವೈದ್ಯೆ | Doctor Thankam S Donates Kidney To Stranger After 10 Years Of Legal Struggle

Live kidney donation to stranger: 10 ವರ್ಷ ಕಾನೂನು ಹೋರಾಟ ನಡೆಸಿ ಅಪರಿಚಿತೆಗೆ ಸ್ವತಃ ಕಿಡ್ನಿದಾನ ಮಾಡಿದ ವೈದ್ಯೆ | Doctor Thankam S Donates Kidney To Stranger After 10 Years Of Legal Struggle



Live kidney donation to stranger: 10 ವರ್ಷ ಕಾನೂನು ಹೋರಾಟ ನಡೆಸಿ ಅಪರಿಚಿತೆಗೆ ಸ್ವತಃ ಕಿಡ್ನಿದಾನ ಮಾಡಿದ ವೈದ್ಯೆ | Doctor Thankam S Donates Kidney To Stranger After 10 Years Of Legal Struggle

ಬೆಂಗಳೂರಿನ ವೈದ್ಯೆ ಡಾ. ಥಂಕಮ್ ಎಸ್ ಅವರು, ಅಪರಿಚಿತರಿಗೆ ಕಿಡ್ನಿ ದಾನ ಮಾಡಲು ಇದ್ದ ಕಾನೂನಿನ ಅಡೆತಡೆಗಳ ವಿರುದ್ಧ 10 ವರ್ಷಗಳ ಕಾಲ ಹೋರಾಟ ನಡೆಸಿದ್ದಾರೆ. ಅಂತಿಮವಾಗಿ ಹೈಕೋರ್ಟ್ ಅನುಮತಿ ಪಡೆದು, 56 ವರ್ಷದ ಅಪರಿಚಿತ ಮಹಿಳೆಗೆ ತಮ್ಮ ಕಿಡ್ನಿಯನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅಪರಿಚಿತೆಗೆ ಸ್ವತಃ ಕಿಡ್ನಿದಾನ ಮಾಡಿದ ವೈದ್ಯೆ

ಬೆಂಗಳೂರು: ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಅಂದರೆ ವೈದ್ಯರು ನಾರಾಯಣನ ಸಮಾನ ಎಂಬುದು. ಹೌದು ಇಲ್ಲೊಬ್ಬರು ವೈದ್ಯೆಯ ವಿಚಾರದಲ್ಲಿ ಇದು ನಿಜವಾಗಿದೆ. ವೈದ್ಯೆಯೊಬ್ಬರು ಸ್ವತಃ 10 ವರ್ಷಗಳ ಕಾನೂನು ಹೋರಾಟದ ನಂತರ ಅಪರಿಚಿತ ಮಹಿಳೆಗೆ ತಮ್ಮ ಕಿಡ್ನಿ ದಾನ ಮಾಡುವ ಮೂಲಕ ಇತಿಹಾಸ ಬರೆದಿದ್ದಾರೆ.

ಸಾಮಾನ್ಯವಾಗಿ ಜೀವಂತವಾಗಿರುವಾಗಲೇ ಕಿಡ್ನಿ ದಾನ ಮಾಡುವುದಾದರೆ ಕಿಡ್ನಿ ದಾನ ಪಡೆಯುವವರು ಸಂಬಂಧಿಕರು, ಪರಿಚಿತರು ಆಗಿರಬೇಕು. ಪೋಷಕರು, ಒಡಹುಟ್ಟಿದವರು, ಮಕ್ಕಳು ಆಗಿರಬೇಕು ಎಂಬ ನಿಯಮವಿತ್ತು. ಹೀಗಾಗಿ ಅಪರಿಚಿತರಿಗೆ ಕಿಡ್ನಿ ದಾನ ಮಾಡುವುದು ಸಾಧ್ಯವಿರಲಿಲ್ಲ. ಆದರೆ ಇದರ ವಿರುದ್ಧ ಕಾನೂನು ಹೋರಾಟ ಮಾಡಿ ವೈದ್ಯೆಯೊಬ್ಬರ ಯಶಸ್ವಿಯಾಗಿದ್ದಲ್ಲದೇ, ಸ್ವತಃ ತಮ್ಮ ಕಿಡ್ನಿಯನ್ನು ಅಪರಿಚಿತ ಮಹಿಳೆಯೊಬ್ಬರಿಗೆ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣ ಔಷಧ ತಜ್ಞೆಯಾಗಿರುವ ಡಾ. ಥಂಕಮ್ ಎಸ್ ಎಂಬುವವರೇ ಈ ಸಾಧನೆ ಮಾಡಿದ ವೈದ್ಯೆ. ಕಿಡ್ನಿದಾನ ಮಾಡಲು 10 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ ಇವರು ಈ ಹೋರಾಟದಲ್ಲಿ ಯಶಸ್ವಿಯಾಗಿದ್ದು, ಕಡೆಗೂ ತಮ್ಮ ಕಿಡ್ನಿಯನ್ನು ಅಪರಿಚಿತರಿಗೆ ದಾನ ಮಾಡಿದ್ದಾರೆ. ತಮ್ಮ ದೇಹದ ಒಂದು ಅಂಗವನ್ನು ಅಪರಿಚಿತರಿಗೆ ಕೊಟ್ಟು ಜೀವ ಉಳಿಸಿದ್ದಾರೆ. ಕಾನೂನು ಹೋರಾಟ ನಡೆಸಿ ಹೈಕೋರ್ಟ್ ಅನುಮತಿ ಬಳಿಕ ಅವರು ಅಪರಿಚಿತ ಮಹಿಳೆಗೆ ಕಿಡ್ನಿ ದಾನ ಮಾಡಿದ್ದಾರೆ.

ಇದನ್ನೂ ಓದಿ: ವಾರಸುದಾರರಿಲ್ಲದ 60 ಕೋಟಿ ಆಸ್ತಿ ಬಿಟ್ಟು ಹೋದ ವೈದ್ಯೆ: ಸಾವಿನ ಬಗ್ಗೆ ನೂರೆಂಟು ಅನುಮಾನ

2014 ರಲ್ಲಿ ಡಾ. ಥಂಕಮ್ ಎಸ್ ಅವರು ಮರಣೋತ್ತರವಾಗಿ ಅಂಗಾಂಗ ದಾನ ಮಾಡಲು ಸಹಿ ಹಾಕಿದ್ದರು. ಆದರೆ ಮೃತರ ಅಂಗಾಗಳನ್ನು ದಾನ ಮಾಡಿದರೆ ಅದರ ಪರಿವರ್ತನಾ ದರ ಕಡಿಮೆಯಾಗಲಿದೆ ಎಂದು ತಿಳಿದ ಅವರು ಜೀವಂತಾವಾಗಿರುವಾಗಲೇ ತಮ್ಮ ಕಿಡ್ನಿಯನ್ನು ದಾನ ಮಾಡುವ ಮೂಲಕ ‘ಜೀವಂತ ಅಂಗಾಗದಾನಿ’ ಎನಿಸಿದ್ದಾರೆ. ಆದರೆ ಅಪರಿಚಿತರಿಗೆ ಜೀವಂತವಾಗಿರುವಾಗಲೇ ಕಿಡ್ನಿದಾನ ಮಾಡುವುದಕ್ಕೆ ಕಾನೂನಿನಲ್ಲಿ ಅನೇಕ ಅಡೆತಡೆಗಳಿದ್ದವು.

ಹೀಗಾಗಿ 2025ರ ಜೂನ್‌ ತಿಂಗಳಿನಲ್ಲಿ ಹೈಕೋರ್ಟ್‌ ಮೊರೆ ಹೋದ ಡಾ. ಥಂಕಮ್ ಎಸ್ ಅವರು ಅಲ್ಲಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ ಡಿಸೆಂಬರ್‌ 2025ರಲ್ಲಿ ಕಿಡ್ನಿದಾನ ಮಾಡಲು ಅನುಮತಿ ನೀಡಿತು. ಹೀಗಾಗಿ ಐದು ದಿನದ ಹಿಂದೆ 56 ವರ್ಷದ ಮಹಿಳೆಗೆ ಅವರು ಕಿಡ್ನಿ ದಾನ ಮಾಡಿ ಯಶಸ್ವಿಯಾಗಿದ್ದಾರೆ. ಫೆ.10ರಂದು ಯಶಸ್ವಿಯಾಗಿ ಅವರ ಕಿಡ್ನಿಯನ್ನು ದಾನ ಮಾಡಲಾಗಿದ್ದು, ಈಗ ಅವರು ಮತ್ತೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇದನ್ನೂ ಓದಿ: ಒಬ್ಬನೇ ಒಬ್ಬ ಮಗ ಅಪಘಾತದಲ್ಲಿ ಸಾವು: ನೋವು ತಾಳಲಾರದೇ ಸಾವಿಗೆ ಶರಣಾದ ದಂಪತಿ

ಅವರ ಈ ಉದಾತ್ತ ಕಾರ್ಯಕ್ಕೆ ಈಗ ಶ್ಲಾಘನೆ ವ್ಯಕ್ತವಾಗ್ತಿದೆ.



Source link

Leave a Reply

Your email address will not be published. Required fields are marked *