Maryade Ramanna Serial Kannada: ಇತ್ತೀಚೆಗೆ ಹೊಸ ಧಾರಾವಾಹಿಗಳು ಆರಂಭ ಆಗುತ್ತಿವೆ. ಜಗದ್ಧಾತ್ರಿ ಹಾಗೂ ಕೃಷ್ಣರುಕ್ಕು ಧಾರಾವಾಹಿಗಳು ಬರಲಿವೆ ಎನ್ನಲಾಗಿತ್ತು. ಈಗ ಇನ್ನೊಂದು ಸೀರಿಯಲ್ ಕೂಡ ಬರಲಿದ್ದು, ಪ್ರೋಮೋ ರಿಲೀಸ್ ಆಗಿದೆ. ಹಾಗಾದರೆ ಯಾವ ಧಾರಾವಾಹಿ ಅಂತ್ಯ ಆಗಲಿದೆ.

ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಮರ್ಯಾದೆ ರಾಮಣ್ಣ’ ಎನ್ನುವ ಧಾರಾವಾಹಿ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋ ಅಂತೂ ಭಾರೀ ಕುತೂಹಲ ಮೂಡಿಸಿದೆ. ಕನ್ನಡ ಧಾರಾವಾಹಿಗಳಲ್ಲಿ ಇದು ವಿಭಿನ್ನವಾಗಿ ಮೂಡಿ ಬಂದಿದೆ.

ಈ ಹಿಂದೆ ಜೋಡಿಹಕ್ಕಿ ಧಾರಾವಾಹಿಯಲ್ಲಿ ಪೈಲ್ವಾನ್ ಕಥೆ ಇತ್ತು. ಇಲ್ಲಿ ಕೂಡ ಪೈಲ್ವಾನ್ ಕಥೆ ಇರಲಿದೆ. ಆದರೆ ಕಥೆಯ ಎಳೆ ಮಾತ್ರ ಬೇರೆ ಇರಲಿದೆ. ತಾಯಿಯಾಗಿ ಬ್ರಹ್ಮಚೈರ್ಯ ಪಾಲಿಸುವ ಪೈಲ್ವಾನ್ ರಾಮಣ್ಣನ ಕಥೆ ಇಲ್ಲಿದೆ.

ಪೈಲ್ವಾನ್ ರಾಮಣ್ಣನ ಪಾತ್ರದಲ್ಲಿ ಯಾರು ನಟಿಸುತ್ತಿದ್ದಾರೆ ಎಂದು ರಿವೀಲ್ ಮಾಡಿಲ್ಲ. ಆದರೆ ವೀಕ್ಷಕರು ಮಾತ್ರ ಚೇತನ್ ಚಂದ್ರ ಅವರು ನಟಿಸುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಚೇತನ್ ಚಂದ್ರ ಅವರು ಈ ಹಿಂದೆ ‘ಸತ್ಯಂ ಶಿವಂ ಸುಂದರಂ’ ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸೀರಿಯಲ್ ಅಂತ್ಯವಾಗಿ ವರ್ಷಗಳೇ ಉರುಳಿವೆ. ಈಗ ಮರ್ಯಾದೆ ರಾಮಣ್ಣ ಎನ್ನುವ ಸೀರಿಯಲ್‌ನಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ.

ಮರ್ಯಾದೆ ರಾಮಣ್ಣ ಧಾರಾವಾಹಿ ಪ್ರಸಾರ ಆಗಲಿದೆ ಎಂದಾದರೆ, ಇನ್ನೊಂದು ಸೀರಿಯಲ್ ಅಂತ್ಯ ಆಗಬೇಕಿದೆ. ಸ್ನೇಹದ ಕಡಲಲ್ಲಿ, ನೀ ಇರಲು ಜೊತೆಯಲ್ಲಿ ಧಾರಾವಾಹಿಗಳ ಮಧ್ಯೆ ಒಂದು ಸೀರಿಯಲ್ ಅಂತ್ಯ ಆಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವಾಹಿನಿ ಅಧಿಕೃತ ಮಾಹಿತಿ ಕೊಡಬೇಕಿದೆ.

Source link
ಹೊಸ ಸೀರಿಯಲ್ ಮರ್ಯಾದೆ ರಾಮಣ್ಣ ಪ್ರಸಾರ; ಹಾಗಿದ್ರೆ ಯಾವ ಧಾರಾವಾಹಿ ಅಂತ್ಯ ಆಗುತ್ತೆ?