parents forget child in taxi: ನಿದ್ರಿಸುತ್ತಿದ್ದ 4 ವರ್ಷದ ಮಗುವನ್ನು ಕ್ಯಾಬಲ್ಲೇ ಬಿಟ್ಟು ಹೋದ ಬೆಂಗಳೂರು ಪೋಷಕರು | Bengaluru Parents Forget Sleeping 4 Year Old Child In Cab

parents forget child in taxi: ನಿದ್ರಿಸುತ್ತಿದ್ದ 4 ವರ್ಷದ ಮಗುವನ್ನು ಕ್ಯಾಬಲ್ಲೇ ಬಿಟ್ಟು ಹೋದ ಬೆಂಗಳೂರು ಪೋಷಕರು | Bengaluru Parents Forget Sleeping 4 Year Old Child In Cab



parents forget child in taxi: ನಿದ್ರಿಸುತ್ತಿದ್ದ 4 ವರ್ಷದ ಮಗುವನ್ನು ಕ್ಯಾಬಲ್ಲೇ ಬಿಟ್ಟು ಹೋದ ಬೆಂಗಳೂರು ಪೋಷಕರು | Bengaluru Parents Forget Sleeping 4 Year Old Child In Cab

parents forget child in taxi: ಬೆಂಗಳೂರಿನಲ್ಲಿ ಪೋಷಕರು ತಮ್ಮ 4 ವರ್ಷದ ಮಗುವನ್ನು ಕ್ಯಾಬ್‌ನಲ್ಲಿ ಮರೆತು ಮನೆಗೆ ಬಂದಿದ್ದಾರೆ. ಮಗು ಗಾಡಿಯಲ್ಲಿ ನಿದ್ರಿಸುತ್ತಿದ್ದು, ಪೋಷಕರು ಇಳಿಯುವಾಗ ಗಮನಿಸಿರಲಿಲ್ಲ. ನಂತರ ಪೊಲೀಸರ ಸಹಾಯದಿಂದ ಒಂದು ಗಂಟೆಯೊಳಗೆ ಮಗು ಸುರಕ್ಷಿತವಾಗಿ ಪೋಷಕರನ್ನು ಸೇರಿದೆ.

ನಿದ್ರಿಸುತ್ತಿದ್ದ ಮಗುವನ್ನು ಕ್ಯಾಬ್‌ನಲ್ಲೇ ಬಿಟ್ಟು ಹೋದ ಪೋಷಕರು:

ಬೆಂಗಳೂರು: ಪುಟ್ಟ ಮಕ್ಕಳಿದ್ದ ಪೋಷಕರು ಎಷ್ಟು ಜಾಗರೂಕರಾಗಿದ್ದರೂ ಸಾಲದು ಸ್ವಲ್ಪ ಕಣ್ಣು ತಪ್ಪಿದರು ಅನಾಹುತವಾಗಿ ಬಿಡುವುದು. ಆದರೆ ಇಲ್ಲೊಂದು ಕಡೆ ಪುಟ್ಟ ಮಗುವಿನ ಪೋಷಕರು ತಮ್ಮ ಬೇಜವಾಬ್ದಾರಿಯಿಂದ ನಿದ್ರಿಸುತ್ತಿದ್ದ ಪುಟ್ಟ ಮಗುವನ್ನೇ ಕ್ಯಾಬ್‌ನಲ್ಲಿ ಬಿಟ್ಟು ಬಂದಿದ್ದಾರೆ. ಮಕ್ಕಳು ಜೊತೆಗಿರುವಾಗ ಪೋಷಕರು ಕಣ್ಣು ಕಿವಿ ಎರಡನ್ನು ಸ್ಪಷ್ಟವಾಗಿಟ್ಟಿರಬೇಕು. ಆದರೆ ಇಲ್ಲಿ ಈ ಪೋಷಕರು ಅದೇನ್ ಮಾಡ್ತಿದ್ರೋ ಗೊತ್ತಿಲ್ಲ, ನಿದ್ರಿಸುತ್ತಿದ್ದ ಮಗುವನ್ನೇ ಗಾಡಿಯಲ್ಲಿ ಬಿಟ್ಟು ಬಂದಿದ್ದಾರೆ. ಅದೃಷ್ಟವಶಾತ್ ಅವರ ಗ್ರಹಚಾರ ಚೆನ್ನಾಗಿತ್ತೇನೋ ಒಂದು ಗಂಟೆಯೊಳಗೆ ಮಗು ಪೋಷಕರ ಕೈ ಸೇರಿದೆ.

ಹೌದು ವಾಹನದಿಂದ ಇಳಿದ ನಂತರ ಕುಟುಂಬದವರಿಗೆ ಮಗು ಇಲ್ಲದೇ ಇರುವುದು ಗೊತ್ತಾಗಿದ್ದು, ಬಳಿಕ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪರಿಣಾಮ ಒಂದು ಗಂಟೆಯೊಳಗೆ ಮಗು ಸಿಕ್ಕಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಬೆಂಗಳೂರಿನ ಪೊನ್ನಪ್ಪ ಲೇಔಟ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ಗೆ ಕುಟುಂಬದೊಂದಿಗೆ ಹಿಂತಿರುಗುವಾಗ ವಾಹನದೊಳಗೆ ಮಗು ನಿದ್ರಿಸಿತ್ತು. ಕ್ಯಾಬ್‌ನಿಂದ ಇಳಿಯುವಾಗ ಮಗು ನಿದ್ರಿಸುತ್ತಿರುವುದನ್ನು ಕುಟುಂಬದವರು ಗಮನಿಸಲಿಲ್ಲ ಪರಿಣಾಮ ನಿದ್ರಿಸುತ್ತಿದ್ದ ಮಗುವನ್ನು ಎಬ್ಬಿಸಿ ಕರೆದೊಯ್ದಿಲ್ಲ. ಇತ್ತ ಟ್ಯಾಕ್ಸಿ ಚಾಲಕನೂ ಇದನ್ನು ಗಮನಿಸಿದೇ ಆ ಕುಟುಂಬವನ್ನು ಡ್ರಾಪ್ ಮಾಡಿ ಅಲ್ಲಿಂದ ಹೊರಟು ಹೋಗಿದ್ದಾನೆ.

ಇದನ್ನೂ ಓದಿ: 10 ವರ್ಷ ಕಾನೂನು ಹೋರಾಟ ನಡೆಸಿ ಅಪರಿಚಿತೆಗೆ ಸ್ವತಃ ಕಿಡ್ನಿದಾನ ಮಾಡಿದ ವೈದ್ಯೆ

ಮನೆಯೊಳಗೆ ತಲುಪಿದ ನಂತರವೇ ಕುಟುಂಬದವರಿಗೆ 4 ವರ್ಷದ ಮಗು ಇಲ್ಲದೇ ಇರುವುದು ಗಮನಕ್ಕೆ ಬಂದಿದೆ. ಕೂಡಲೇ ಮನೆಯಲ್ಲಿ ಹುಡುಕಾಡಿದ ಅವರು ಬಳಿಕ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದ್ದಾರೆ. ನಂತರ ಪೊಲೀಸರು ವಾಹನವನ್ನು ಪತ್ತೆ ಹಚ್ಚಿ ಚಾಲಕನನ್ನು ಸಂಪರ್ಕಿಸಿ ಆತನ ಕಾರಿನಲ್ಲಿ ಮಗುವೊಂದು ನಿದ್ರಿಸುತ್ತಿರುವುದರ ಬಗ್ಗೆ ಚಾಲಕನಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಯವರೆಗೂ ಚಾಲಕನಿಗೆ ಕಾರಿನಲ್ಲಿ ಮಗು ಇರುವುದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ನಂತರ ಚಾಲಕನಿಗೆ ಮರಳಿ ಪೊನ್ನಪ್ಪ ಲೇಔಟ್‌ಗೆ ಬಂದು ಮಗುವನ್ನು ಡ್ರಾಪ್ ಮಾಡುವಂತೆ ಕೇಳಲಾಯ್ತು.

ನಂತರ ಪೋಷಕರಿಗೆ ಮಗುವನ್ನು ಹಸ್ತಾಂತರಿಸಲಾಯ್ತು. ಈ ಘಟನೆ ಚರ್ಚೆಗೆ ಗ್ರಾಸವಾಗಿದೆ. ಪುಟ್ಟ ಮಕ್ಕಳಿರುವ ಪೋಷಕರು ಜೊತೆಗೆ ಅವರನ್ನು ಕರೆದೊಯ್ಯುವಾಗ ಸಾಕಷ್ಟು ಜಾಗರೂಕರಾಗಿರಬೇಕು. ಆದರೆ ಇಲ್ಲಿ ಪೋಷಕರು ಬೇಜವಾಬ್ದಾರಿ ತೋರಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: 

ವಾರಸುದಾರರಿಲ್ಲದ 60 ಕೋಟಿ ಆಸ್ತಿ ಬಿಟ್ಟು ಹೋದ ವೈದ್ಯೆ: ಸಾವಿನ ಬಗ್ಗೆ ನೂರೆಂಟು ಅನುಮಾನ



Source link

Leave a Reply

Your email address will not be published. Required fields are marked *