Keep food hot without microwave: ಮೈಕ್ರೋವೇವ್ ಸೌಲಭ್ಯವಿಲ್ಲದ ಕಡೆಗಳಲ್ಲಿ ಊಟವನ್ನು ಬಿಸಿಯಾಗಿ ಇಟ್ಟುಕೊಳ್ಳುವುದು ಒಂದು ದೊಡ್ಡ ಸವಾಲು. ಆದರೆ ಕೆಲವು ಸಣ್ಣ ಬದಲಾವಣೆ ಮಾಡಿಕೊಂಡರೆ ಬಿಸಿಬಿಸಿಯಾದ ಅಡುಗೆಯನ್ನು ಸಂಜೆಯವರೆಗೂ ಹಾಗೆಯೇ ಇಟ್ಟುಕೊಳ್ಳಬಹುದು.

ಮಧ್ಯಾಹ್ನ ಊಟದ ಬಾಕ್ಸ್ ಒಪನ್ ಮಾಡಿದಾಗ ಬಿಸಿಬಿಸಿಯಾದ ಅನ್ನ, ಸಾರು ಅಥವಾ ರೈಸ್ ಬಾತ್ ಸುವಾಸನೆ ಬಂದರೆ ಆ ಖುಷಿಯೇ ಬೇರೆ. ಆದರೆ ಮೈಕ್ರೋವೇವ್ ಇಲ್ಲ ಅಂದ್ರೆ ಊಟ ಬಿಸಿಯಾಗಿಡುವುದು ಒಂದು ಸವಾಲು. ಆದರೂ ಇದನ್ನು ಸುಲಭವಾಗಿಸಲು ಇಲ್ಲಿದೆ ಸೂಪರ್ ಐಡಿಯಾ. ಅದಕ್ಕೂ ಮುನ್ನ ಬಿಸಿ ಊಟ ಸೇವನೆಯಿಂದಾಗುವ ಪ್ರಯೋಜನಗಳನ್ನ ನೋಡೋಣ..

*ಭಾರತೀಯ ಖಾದ್ಯಗಳು ಬಿಸಿಯಾಗಿದ್ದಾಗಲೇ ರುಚಿ. ತಣ್ಣಗಾದರೆ ಸಾರು ಗಟ್ಟಿಯಾಗುತ್ತದೆ ಮತ್ತು ಮಸಾಲೆಗಳ ರುಚಿ ಕಡಿಮೆಯಾಗುತ್ತದೆ.*ಆಯುರ್ವೇದದ ಪ್ರಕಾರ ಬಿಸಿ ಆಹಾರ ಸೇವನೆ ಜೀರ್ಣಶಕ್ತಿಗೆ ಒಳ್ಳೆಯದು.*ಬಿಸಿ ಊಟ ಸೇವಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

1. ಸರಿಯಾದ ಡಬ್ಬಿ ಆರಿಸಿಪ್ಲಾಸ್ಟಿಕ್ ಅಥವಾ ಸಾಮಾನ್ಯ ಸ್ಟೀಲ್ ಬಾಕ್ಸ್ ಬದಲಿಗೆ ‘ಇನ್ಸುಲೇಟೆಡ್ ಸ್ಟೇನ್ಲೆಸ್ ಸ್ಟೀಲ್’ (Insulated Steel) ಅಥವಾ ಥರ್ಮಲ್ ಲಂಚ್ ಬಾಕ್ಸ್ ಬಳಸಿ. ಇದು 4-6 ಗಂಟೆಗಳ ಕಾಲ ಊಟವನ್ನು ಬಿಸಿಯಾಗಿಡುತ್ತದೆ.

ಊಟ ಹಾಕುವ ಮೊದಲು ಬಾಕ್ಸ್ಗೆ ಕುದಿಯುವ ನೀರನ್ನು ಹಾಕಿ 5 ನಿಮಿಷ ಬಿಡಿ. ನಂತರ ನೀರನ್ನು ಚೆಲ್ಲಿ ತಕ್ಷಣ ಬಿಸಿ ಅಡುಗೆಯನ್ನು ತುಂಬಿಸಿ. ಇದರಿಂದ ಡಬ್ಬಿ ಬಿಸಿಯಾಗಿರುತ್ತದೆ.

ಟಿಫಿನ್ ಬಾಕ್ಸ್ ಅನ್ನು ದಪ್ಪನೆಯ ಹತ್ತಿ ಬಟ್ಟೆ (Cotton Napkin) ಅಥವಾ ಉಣ್ಣೆಯ ಬಟ್ಟೆಯಿಂದ ಸುತ್ತಿಡಿ. ನಂತರ ಅದನ್ನು ಥರ್ಮಲ್ ಬ್ಯಾಗ್ನಲ್ಲಿ ಇರಿಸಿ.

ಡಬ್ಬಿಯಲ್ಲಿ ಖಾಲಿ ಜಾಗ ಬಿಡಬೇಡಿ. ಪೂರ್ತಿಯಾಗಿ ತುಂಬಿಸಿ. ಅನ್ನ ಮತ್ತು ಸಾರಿನ ಬಾಕ್ಸ್ಗಳನ್ನು ಅಕ್ಕಪಕ್ಕದಲ್ಲಿ ಇಡಿ. ಸಲಾಡ್ ಅಥವಾ ಮೊಸರಿನಂತಹ ತಂಪು ಪದಾರ್ಥಗಳನ್ನು ಪ್ರತ್ಯೇಕ ಬ್ಯಾಗ್ನಲ್ಲಿ ಇರಿಸಿ.

ರಾತ್ರಿ ಉಳಿದ ಅಡುಗೆಯನ್ನು ಪ್ಯಾಕ್ ಮಾಡುವುದಿದ್ದರೆ, ಅದನ್ನು ಒಲೆಯ ಮೇಲೆ ಚೆನ್ನಾಗಿ ಬಿಸಿ ಮಾಡಿ ನಂತರವೇ ಬಾಕ್ಸ್ಗೆ ತುಂಬಿಸಿ.

ತುಂಬಾ ಹೊತ್ತು ಊಟ ಬಿಸಿಯಾಗಿರಬೇಕೆಂದರೆ, ಬಿಸಿ ನೀರಿನಲ್ಲಿ ಕಾಯಿಸಿದ ಜೆಲ್ ಪ್ಯಾಕ್ಗಳನ್ನು (Gel Packs) ಟಿಫಿನ್ ಬ್ಯಾಗ್ನಲ್ಲಿ ಇರಿಸಬಹುದು.

ರಸಂ, ಬಿಸಿ ಸಾರು ಅಥವಾ ಸೂಪ್ಗಳನ್ನು ಪ್ಲಾಸ್ಟಿಕ್ ಡಬ್ಬಿಯ ಬದಲು ಸಣ್ಣ ಥರ್ಮಸ್ ಫ್ಲಾಸ್ಕ್ಗಳಲ್ಲಿ ಹಾಕಿದರೆ 6-8 ಗಂಟೆ ಬಿಸಿಯಾಗಿರುತ್ತದೆ.

ದಕ್ಷಿಣ ಭಾರತದ ಈ ಹಳೆಯ ಪದ್ಧತಿ ತುಂಬಾ ಪರಿಣಾಮಕಾರಿ. ಬಿಸಿ ಅಡುಗೆಯನ್ನು ಬಾಳೆ ಎಲೆಯಲ್ಲಿ ಸುತ್ತಿ ನಂತರ ಬಾಕ್ಸ್ನಲ್ಲಿ ಇಟ್ಟರೆ ಊಟದ ಸುವಾಸನೆ ಹೆಚ್ಚುತ್ತದೆ ಮತ್ತು ಬಿಸಿಯೂ ಇರುತ್ತದೆ.

ತುಂಬಾ ಬೇಗ ಪ್ಯಾಕ್ ಮಾಡಬೇಡಿ. ಮನೆಯಿಂದ ಹೊರಡುವ 10-15 ನಿಮಿಷಗಳ ಮೊದಲು ಆಗಷ್ಟೇ ಸಿದ್ಧವಾದ ಬಿಸಿ ಅಡುಗೆಯನ್ನು ಪ್ಯಾಕ್ ಮಾಡಿ ತಕ್ಷಣ ಮುಚ್ಚಳ ಮುಚ್ಚಿ.

ಕಿಚಡಿ, ರಾಜ್ಮಾ ಚಾವಲ್, ಪಲಾವ್ ಮತ್ತು ಗ್ರೇವಿ ಇರುವ ಪದಾರ್ಥಗಳು ಹೆಚ್ಚು ಹೊತ್ತು ಬಿಸಿ ಉಳಿಸಿಕೊಳ್ಳುತ್ತವೆ. ಒಣ ಸಬ್ಜಿಗಳು ಬೇಗ ತಣ್ಣಗಾಗುತ್ತವೆ.

ಬಿಸಿ ಮತ್ತು ತಂಪು ಪದಾರ್ಥಗಳನ್ನು ಒಂದೇ ಬಾಕ್ಸ್ನಲ್ಲಿ ಇಡಬೇಡಿ. ಊಟ ಮಾಡುವ ಮೊದಲು ಬಾಕ್ಸ್ ಅನ್ನು ಪದೇ ಪದೇ ತೆರೆಯಬೇಡಿ.

Source link
ಮೈಕ್ರೋವೇವ್ ಇಲ್ವಾ, ಚಿಂತೆನೇ ಬೇಡ.. ದಿನವಿಡೀ ನಿಮ್ಮ ಟಿಫಿನ್ ಬಿಸಿಯಾಗಿರಲು ಇಲ್ಲಿದೆ 10 ಐಡಿಯಾ