ಪಲ್ಲೆಕೆಲೆ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಆಘಾತಕಾರಿ ಫಲಿತಾಂಶ ಹೊರಬಿದ್ದಿದ್ದೆ. ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಪಂದ್ಯ ರದ್ದಾದ ಬೆನ್ನಲ್ಲೇ, ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯವಾದ ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಪಂದ್ಯವು ಮಳೆಯಿಂದ ರದ್ದಾಗಿದೆ. ಈ ಫಲಿತಾಂಶ 2021ರ ಟಿ20 ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಸೂಪರ್-8 ಪ್ರವೇಶದ ಕನಸನ್ನು ನುಚ್ಚುನೂರು ಮಾಡಿದೆ.

ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಪಂದ್ಯವು ಇಂದು ಮಧ್ಯಾಹ್ನ 3 ಗಂಟೆಯಿಂದ ನಿಗದಿಯಾಗಿತ್ತು. ಆದರೆ ಇಂದು ಬೆಳಗ್ಗೆಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆ ನಿಲ್ಲದ ಕಾರಣ ಮ್ಯಾಚ್ ರದ್ದಾಗಿದೆ ಎಂದು ಘೋಷಿಸಲಾಯಿತು.

ಹೌದು, ‘ಬಿ’ ಗುಂಪಿನಲ್ಲಿ ದಶುನ್ ಶನಕಾ ನೇತೃತ್ವದ ಶ್ರೀಲಂಕಾ ತಂಡವು ಆಡಿದ ಮೂರು ಪಂದ್ಯಗಳನ್ನು ಗೆದ್ದು ಅಧಿಕೃತವಾಗಿ ಸೂಪರ್-8 ಹಂತವನ್ನು ಪ್ರವೇಶಿಸಿತ್ತು. ಇಂದು ನಿಗದಿಯಾಗಿದ್ದ ಪಂದ್ಯದಲ್ಲಿ ಒಂದು ವೇಳೆ ಐರ್ಲೆಂಡ್ ಎದುರು ಜಿಂಬಾಬ್ವೆ ಸೋತಿದ್ದರೇ, ಆಸ್ಟ್ರೇಲಿಯಾ ತಂಡದ ಸೂಪರ್-8 ಕನಸು ಜೀವಂತವಾಗಿರುತ್ತಿತ್ತು.

ಯಾಕೆಂದರೆ ಜಿಂಬಾಬ್ವೆ ತಂಡವು ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇನ್ನೊಂದೆಡೆ ಆಸ್ಟ್ರೇಲಿಯಾ ತಂಡವು ಆಡಿದ ಮೂರು ಪಂದ್ಯಗಳ ಪೈಕಿ ಎರಡು ಸೋತು ಒಂದು ಗೆಲುವು ದಾಖಲಿಸಿತ್ತು. ಇದೀಗ ಐರ್ಲೆಂಡ್ ಹಾಗೂ ಜಿಂಬಾಬ್ವೆ ನಡುವಿನ ಪಂದ್ಯ ಮಳೆಯಿದ್ದ ರದ್ದಾಗಿದ್ದರಿಂದ ಉಭಯ ತಂಡಗಳು ಒಂದೊಂದು ಅಂಕ ಹಂಚಿಕೊಂಡವು.

ಇದರೊಂದಿಗೆ ಜಿಂಬಾಬ್ವೆ ತಂಡದ ಖಾತೆಗೆ ಒಂದು ಅಂಕ ಸೇರ್ಪಡೆಗೊಂಡಿದ್ದರಿಂದ ಒಟ್ಟಾರೆ ಜಿಂಬಾಬ್ವೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 5 ಅಂಕಗಳೊಂದಿಗೆ ಸೂಪರ್-8 ಹಂತಕ್ಕೆ ಅಧಿಕೃತ ಪ್ರವೇಶ ಪಡೆಯಿತು. ಇನ್ನೊಂದೆಡೆ ಆಸ್ಟ್ರೇಲಿಯಾ ಬಳಿ ಸದ್ಯ ಕೇವಲ 2 ಅಂಕಗಳಿದ್ದು, ಒಮಾನ್ ವಿರುದ್ದ ನಡೆಯಲಿರುವ ಪಂದ್ಯ ಗೆದ್ದರೂ ಕೇವಲ 4 ಅಂಕಗಳಾಗಲಿವೆ.

ಜಿಂಬಾಬ್ವೆ ತಂಡವು ಇದೀಗ ಸೂಪರ್-8 ಹಂತಕ್ಕೆ ಎಂಟ್ರಿ ಕೊಡುವುದರ ಜತೆಗೆ 2028ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಅರ್ಹತೆ ಪಡೆದಿದೆ. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್-8 ಹಂತ ಪ್ರವೇಶಿಸುವ ಎಲ್ಲಾ 8 ತಂಡಗಳು ನೇರವಾಗಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲಿವೆ.

Source link
ಜಿಂಬಾಬ್ವೆ-ಐರ್ಲೆಂಡ್ ಮ್ಯಾಚ್ ರದ್ದು! ಆಸ್ಟ್ರೇಲಿಯಾ ಟೂರ್ನಿಯಿಂದ ಅಧಿಕೃತವಾಗಿ ಔಟ್!