ಖ್ಯಾತ ಕ್ರಿಕೆಟಿಗನೊಬ್ಬ ತನ್ನ ಮನದ ಬಯಕೆ ಹೇಳಿದ್ದ, ಮೆಸೇಜ್ ರಿವೀಲ್ ಮಾಡಿದ ಪೂನಂ ಪಾಂಡೆ

ಖ್ಯಾತ ಕ್ರಿಕೆಟಿಗನೊಬ್ಬ ತನ್ನ ಮನದ ಬಯಕೆ ಹೇಳಿದ್ದ, ಮೆಸೇಜ್ ರಿವೀಲ್ ಮಾಡಿದ ಪೂನಂ ಪಾಂಡೆ

ಖ್ಯಾತ ಕ್ರಿಕೆಟಿಗನೊಬ್ಬ ತನ್ನ ಮನದ ಬಯಕೆ ಹೇಳಿದ್ದ, ಮೆಸೇಜ್ ರಿವೀಲ್ ಮಾಡಿದ ಪೂನಂ ಪಾಂಡೆ

ಖ್ಯಾತ ಕ್ರಿಕೆಟಿಗನೊಬ್ಬ ತನ್ನ ಮನದ ಬಯಕೆ ಹೇಳಿದ್ದ, ಡೈರೆಕ್ಟ್ ಮೆಸೇಜ್ ಮಾಡಿದ್ದ. ಕೆಲ ಸಮಯ ನನ್ನ ಜೊತೆ ಕಳೆಯಬಲು ಪ್ಲಾನ್ ಮಾಡಿಕೊಂಡಿದ್ದ. ಮುಂದೇನಾಯ್ತು ಅನ್ನೋದನ್ನು ಪೂನಂ ಪಾಂಡೆ ಹೇಳಿದ್ದಾರೆ.

ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಸದಾ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಪ್ರೇಮಿಗಳ ದಿನಾಚರಣೆಗೆ ಹೊಸ ಬಾಯ್‌ಫ್ರೆಂಡ್ ಜೊತೆ ಕಳೆದಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಪೂನಂ ಪಾಂಡೆ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಬಾರಿ ಖ್ಯಾತ ಕ್ರಿಕೆಟಿಗನೊಬ್ಬನ ಮೆಸೇಜ್ ಬಹಿರಂಗಪಡಿಸಿದ್ದಾರೆ.

ಪೂನಂ ಪಾಂಡೆ ಇತ್ತೀಚೆಗೆ ಫಿಲ್ಮ್‌ವಿಂಡೋಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಕೆಲ ಮಾಹಿತಿ ಬಹಿರಂಗಪಡಿಸಿದ್ದಾರೆ. ಖ್ಯಾತ ಕ್ರಿಕೆಟಿಗನೊಬ್ಬ ತನಗೆ ಸೋಶಿಯಲ್ ಮೀಡಿಯಾ ಮೂಲಕ ಡೈರೆಕ್ಟ್ ಮೆಸೇಜ್ ಮಾಡಿದ್ದ. ಬ್ಲೂ ಟಿಕ್ ಇದ್ದ ಹಲವರು ಮಸೇಜ್ ಮಾಡಿದ್ದಾರೆ. ಈ ಪೈಕಿ ಕ್ರಿಕೆಟಿಗ ತನ್ನ ಬಯಕೆ ಹೇಳಿಕೊಂಡಿದ್ದ. ಮೊದಲು ನೀನು ತುಂಬಾ ಕ್ಯೂಟ್ ಎಂದು ಮೆಸೇಜ್ ಮಾಡಿ ಆರಂಭಿಸಿದ್ದ ಎಂದಿದ್ದಾರೆ.

ಮೊದಲ ಮೆಸೆಜ್ ಕ್ಯೂಟ್‌ಗೆ ಸೀಮಿತವಾಗಿದ್ದರೆ, ಎರಡನೆ ಹಾಗೂ ನಂತರದ ಮೆಸೇದ್ ಬೇರೆಯೇ ಆಗಿತ್ತು. ಆದರೆ ಆತನ ಉದ್ದೇಶ ಕೆಲ ಹೊತ್ತು ನನ್ನ ಜೊತೆ ಕೆಳೆಯಬೇಕಿತ್ತು. ಅಷ್ಟೇ ಆತ ಪ್ರೀತಿಯ ನಾಟಕವಾಡಿದ್ದ. ಆತ ಸೀರಿಯಸ್ ಆಗಿರುವಂತೆ ತೋರಲಿಲ್ಲ. ಹೀಗಾಗಿ ಕ್ರಿಕೆಟಿನ ಬ್ಲಾಕ್ ಮಾಡಿದೆ ಎಂದು ಪೂನಂ ಪಾಂಡೆ ಹೇಳಿದ್ದಾರೆ.

ಪೂನಂ ಪಾಂಡೆಗೆ ಡಿಎಂ ಮಾಡಿ ಕ್ಯೂಟ್ ಎಂದೆಲ್ಲಾ ಹೇಳಿ ಬಳಿಕ ಒಂದು ದಿನ ಕಳೆಯಲು ಬಯಸಿದ್ದ ಕ್ರಿಕೆಟಿಗ ಯಾರು ಅನ್ನೋ ಪ್ರಶ್ನೆಯನ್ನು ಪೂನಂ ಪಾಂಡೆಗೆ ಕೇಳಲಾಗಿತ್ತು. ಈ ವೇಳೆ ಉತ್ತರ ನೀಡಿದ ಪೂನಂ ಪಾಂಡೆ ಆ ಕ್ರಿಕೆಟಿನ ಹೆಸರು ಬಯಲು ಮಾಡುವುದಿಲ್ಲ. ಹಲವರು ನನಗೆ ಮೆಸೇಜ್ ಮಾಡಿದ್ದಾರೆ. ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಬಹುತೇಕರನ್ನು ಬ್ಲಾಕ್ ಮಾಡಿದ್ದಾನೆ. ಆದರೆ ಅವರ ಗುರುತು ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ.

2011ರಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ವಿಶ್ವ ಕಪ್ ಗೆದ್ದರೆ ಬೆತ್ತಲಾಗುವುದಾಗಿ ಆಫರ್ ನೀಡಿದ್ದರು. ಈ ಮೂಲಕ ಭಾರಿ ವಿವಾಕ್ಕೆ ಗುರಿಯಾಗಿದ್ದರು. ಪದೇ ಪದೇ ಈ ರೀತಿಯ ಘೋಷಣೆ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಗರ್ಭಕಂಠ ಕ್ಯಾನ್ಸರ್ ಪ್ರಚಾರದ ಭಾಗವಾಗಿ ಪೂನಂ ನಿಧನ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಪ್ರಚಾರ ಪಡೆದಿದ್ದರು. ಈ ಮೂಲಕ ಹಲವು ದೂರುಗಳು ದಾಖಲಾಗಿತ್ತು.

ಕ್ರಿಕೆಟಿಗರಿಗಾಗಿ ಬೆತ್ತಲಾಗುವುದಾಗಿ ಹೇಳಿದ್ದ ಪೂನಂ

Source link

Leave a Reply

Your email address will not be published. Required fields are marked *