ಬೆಂಗಳೂರು, ಫೆ.17: ಬಸವನಗುಡಿ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಶಿಸ್ತು ಕಲಿಸಬೇಕಾದ ಗುರುಗಳೇ ತರಗತಿ ಕೊಠಡಿಯಲ್ಲಿ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ. ಶಾಲೆಯ ಪ್ರಿನ್ಸಿಪಾಲ್ ಉಮ್ಮಿಯ ಕುಲಸುಂ ಮತ್ತು ಶಿಕ್ಷಕಿ ರೇಷ್ಮಾ ನಡುವೆ ಈ ಗಲಾಟೆ ನಡೆದಿದೆ. ಶಿಕ್ಷಕಿ ರೇಷ್ಮಾ ಅವರ ಕಾರ್ಯವೈಖರಿಯನ್ನು ಮೆಚ್ಚಿ ಶಾಲಾ ಆಡಳಿತ ಮಂಡಳಿಯು ಅವರಿಗೆ ಬಡ್ತಿ ಮತ್ತು ಪ್ರಶಂಸನಾ ಪತ್ರ ನೀಡಿತ್ತು. ಇದು ಪ್ರಿನ್ಸಿಪಾಲ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದೆ. ಈ ವೇಳೆ ಪ್ರಿನ್ಸಿಪಾಲ್ ಕಡೆಯವರು ಹಾಗೂ ಶಿಕ್ಷಕಿಯ ಕಡೆಯವರು ವಿದ್ಯಾರ್ಥಿಗಳ ಸಮ್ಮುಖದಲ್ಲೇಹೊಡೆದಾಟದ ಹಂತಕ್ಕೆ ತಲುಪಿದ್ದಾರೆ. ಪ್ರಿನ್ಸಿಪಾಲ್ ಉಮ್ಮಿಯ ಕುಲಸುಂ ಅವರು ಇತರ ಜನರನ್ನು ಕರೆಸಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಶಿಕ್ಷಕಿ ರೇಷ್ಮಾ ಗಂಭೀರವಾಗಿ ಆರೋಪಿಸಿದ್ದಾರೆ. ಸದ್ಯ ಈ ಘಟನೆ ನಡೆದಿದ್ದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ