
ದೆಹಲಿಯಲ್ಲಿ 17 ವರ್ಷದ ಅಪ್ರಾಪ್ತ ವಯಸ್ಕನೋರ್ವ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು 23 ವರ್ಷದ ಯುವ ತರುಣ ಸಾವಿಗೀಡಾದ ಘಟನೆ ವಾರದ ಹಿಂದೆ ನಡೆದಿತ್ತು. ಆದರೆ ಘಟನೆ ನಡೆದ ಒಂದು ವಾರದಲ್ಲಿ ಆ ಅಪ್ರಾಪ್ತ ಬಾಲಕನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಅಪ್ರಾಪ್ತನ ಅಜಾಗರೂಕತೆಯ ಚಾಲನೆಗೆ ಯುವಕ ಬಲಿ
ದೆಹಲಿ: ದೆಹಲಿಯಲ್ಲಿ 17 ವರ್ಷದ ಅಪ್ರಾಪ್ತ ವಯಸ್ಕನೋರ್ವ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು 23 ವರ್ಷದ ಯುವ ತರುಣ ಸಾವಿಗೀಡಾದ ಘಟನೆ ವಾರದ ಹಿಂದೆ ನಡೆದಿತ್ತು. ಆದರೆ ಘಟನೆ ನಡೆದ ಒಂದು ವಾರದಲ್ಲಿ ಆ ಅಪ್ರಾಪ್ತ ಬಾಲಕನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಘಟನೆ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ದ್ವಾರಕಾ ಪ್ರದೇಶದಲ್ಲಿ 17 ವರ್ಷದ ಅಪ್ರಾಪ್ತ ವಯಸ್ಕನೊಬ್ಬ ಚಲಾಯಿಸುತ್ತಿದ್ದ ಎಸ್‌ಯುವಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 23 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದ.
ವೇಗವಾಗಿ ಬಂದ ಎಸ್‌ಯುವಿ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಾಹಿಲ್ ಧನೇಶ್ರಾ ಎಂಬ 23 ವರ್ಷದ ಯುವಕ ಮೃತಪಟ್ಟಿದ್ದ. ಮೊದಲಿಗೆ ಬೈಕ್‌ಗೆ ಡಿಕ್ಕಿ ಹೊಡೆದು ಬಳಿಕ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಾರಿಗೂ ಈ ಅಪ್ರಾಪ್ತ ತರುಣ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು. ಈ ವೇಳೆ ಸ್ಥಳದಲ್ಲಿದ್ದ ಅಜಿತ್ ಸಿಂಗ್ ಎಂಬ ಟಾಕ್ಸಿ ಚಾಲಕರು ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಹಿಂದೂ ಯುವತಿಯೊಂದಿಗೆ ಮಹಾಕಾಲನ ದರ್ಶನಕ್ಕೆ ಬಂದ ಮುಸ್ಲಿಂ ಯುವಕನಿಗೆ ಥಳಿತ
ಘಟನೆಯಿಂದಾಗಿ ಇದೊಬ್ಬ ಮಗನ ಕಳೆದುಕೊಂಡ ಒಂಟಿ ತಾಯಿ
ಘಟನೆಯಲ್ಲಿ ಮೃತಪಟ್ಟ 23ರ ಹರೆಯದ ಸಾಹಿಲ್ ಧನೇಶ್ರಾ ಅವರು ಅವರ ತಾಯಿಗೆ ಒಬ್ಬನೇ ಮಗನಾಗಿದ್ದು, ಒಂಟಿಯಾಗಿಯೇ ಮಗನನ್ನು ಬೆಳೆಸಿದ್ದರು. ಈಗ ಯಾರದೋ ತಪ್ಪಿಗೆ ಮಗನ ಕಳೆದುಕೊಂಡ ಅವರು ಘಟನೆಯನ್ನು ಅರಗಿಸಿಕೊಳ್ಳಲಾಗದೇ ವೀಡಿಯೋ ಮಾಡಿದ್ದು, ನೋಡುಗ ಕಣ್ಣಂಚನ್ನು ತೇವಗೊಳಿಸುತ್ತಿದೆ. ವೀಡಿಯೊದಲ್ಲಿ ಸಾಹಿಲ್‌ನ ತಾಯಿ ಅವನನ್ನು ಒಂಟಿಯಾಗಿಯೇ ಬೆಳೆಸಿದ್ದೆ ಆದರೆ ಯಾರದೋ ಅಜಾಗರೂಕ ಚಾಲನೆಗೆ ಆತನನ್ನು ಕಳೆದುಕೊಳ್ಳುವಂತಾಯ್ತು.
ಇದನ್ನೂ ಓದಿ: ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಗೆ ಮಾರ್ಚ್‌ನಲ್ಲಿ ಚುನಾವಣೆ ಘೋಷಣೆ
ನಾನು ನನ್ನ ಮಗುವನ್ನು 23 ವರ್ಷಗಳ ಕಾಲ ಒಬ್ಬಂಟಿಯಾಗಿ ಬೆಳೆಸಿದೆ. ಆದರೆ ಫೆಬ್ರವರಿ 3 ರಂದು ನಡೆದ ದುರಂತ ನನ್ನ ಮುಗ್ಧ ಮಗುವನ್ನು ನುಂಗಿ ಹಾಕಿತು. ನಾನು ಅಸಹಾಯಕ ತಾಯಿ ನನಗೆ ಮಾಧ್ಯಮಗಳು ಹಾಗೂ ದ್ವಾರಕಾದ ನಿವಾಸಿಗಳು ಸಹಾಯ ಮಾಡುವಂತೆ ಅವರು ಮನವಿ ಮಾಡಿದ್ದಾರೆ. ಇತ್ತ ಆರೋಪಿಯಾಗಿರುವ ಅಪ್ರಾಪ್ತ ತರುಣ ಅಜಾಗರೂಕತೆಯಿಂದ ಗಾಡಿ ಚಾಲಾಯಿಸಿದ್ದರಿಂದ ಈ ಅನಾಹುತ ಸಂಭವಿಸಿದ್ದಾಗಿ ವರದಿಯಾಗಿದ್ದು, ಆತ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸುವುದಕ್ಕಾಗಿ ಈ ವಾಹನಗಳ ಜೊತೆ ಸ್ಟಂಟ್ ಮಾಡ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣದ ಬಗ್ಗೆ ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Scroll to load tweet…
ತನಿಖೆಯ ಸಮಯದಲ್ಲಿ ಕಾರು ಚಾಲಕನನ್ನು 17 ವರ್ಷದ ಅಕ್ಷರ ಸಿಂಗ್ ಎಂದು ಗುರುತಿಸಲಾಗಿದ್ದು, ಆತನಿಗೆ ಚಾಲನಾ ಪರವಾನಗಿ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯ ಬಳಿಕ ಈ ಅಪ್ರಾಪ್ತ ವಯಸ್ಕನನ್ನು ಬಂಧಿಸಿ ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಯಿತು. ನ್ಯಾಯಮಂಡಳಿಯೂ ಆತನನ್ನು ವೀಕ್ಷಣಾ ಗೃಹಕ್ಕೆ ಕಳುಹಿಸಿತು. ಆದರೆ ಆತ 10 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಫೆಬ್ರವರಿ 10 ರಂದು ಪರೀಕ್ಷೆಗೆ ಹಾಜರಾಗಬೇಕಿತ್ತು ಎಂಬ ಕಾರಣಕ್ಕೆ ಮಧ್ಯಂತರ ಜಾಮೀನು ನೀಡಲಾಯಿತು ಎಂದು ವರದಿಯಾಗಿದೆ.