ಮೈಕ್ರೋವೇವ್‌ನಲ್ಲಿ ಪ್ಲಾಸ್ಟಿಕ್ ಡಬ್ಬಿ ಇಟ್ಟು ಫುಡ್ ಬಿಸಿ ಮಾಡ್ತೀರಾ? ಈ ಕಾಯಿಲೆಯೂ ವಕ್ಕರಿಸುತ್ತೆ ಹುಷಾರ್

ಮೈಕ್ರೋವೇವ್‌ನಲ್ಲಿ ಪ್ಲಾಸ್ಟಿಕ್ ಡಬ್ಬಿ ಇಟ್ಟು ಫುಡ್ ಬಿಸಿ ಮಾಡ್ತೀರಾ?  ಈ ಕಾಯಿಲೆಯೂ ವಕ್ಕರಿಸುತ್ತೆ ಹುಷಾರ್

ಮೈಕ್ರೋವೇವ್‌ನಲ್ಲಿ ಪ್ಲಾಸ್ಟಿಕ್ ಡಬ್ಬಿ ಇಟ್ಟು ಫುಡ್ ಬಿಸಿ ಮಾಡ್ತೀರಾ?  ಈ ಕಾಯಿಲೆಯೂ ವಕ್ಕರಿಸುತ್ತೆ ಹುಷಾರ್

Health risks of microwaving plastic: ಸಮಯ ಉಳಿಸಲು ಹೆಚ್ಚಿನ ಮನೆಗಳಲ್ಲಿ ಮೈಕ್ರೋವೇವ್ ಓವನ್‌ ಬಳಸುತ್ತಾರೆ. ಹಾಗೆಯೇ ಫ್ರಿಡ್ಜ್‌ನಲ್ಲಿಟ್ಟ ಆಹಾರವನ್ನು ಅನೇಕರು ಪ್ಲಾಸ್ಟಿಕ್ ಪಾತ್ರೆಯಲ್ಲೇ ಇಟ್ಟು ಓವನ್‌ನಲ್ಲಿ ಬಿಸಿ ಮಾಡುತ್ತಾರೆ. ಆದರೆ ಈ ಅಭ್ಯಾಸವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ.
ಪ್ಲಾಸ್ಟಿಕ್ ಪಾತ್ರೆಗಳನ್ನು ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಿದಾಗ, ಅವುಗಳ ರಚನೆ ದುರ್ಬಲವಾಗುತ್ತದೆ. ಆಗ, ನಮ್ಮ ಬರಿಗಣ್ಣಿಗೆ ಕಾಣದ ಮೈಕ್ರೋಪ್ಲಾಸ್ಟಿಕ್ ಕಣಗಳು ಆಹಾರದಲ್ಲಿ ಸೇರಿಕೊಳ್ಳುತ್ತವೆ. ಎಣ್ಣೆಯುಕ್ತ, ಖಾರ ಅಥವಾ ಆಮ್ಲೀಯ ಆಹಾರಗಳನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಬಿಸಿ ಮಾಡಿದಾಗ ಈ ರಾಸಾಯನಿಕ ಬದಲಾವಣೆ ಇನ್ನಷ್ಟು ವೇಗವಾಗಿ ಆಗುತ್ತದೆ.ನಾವು ನಂಬುವ ‘ಮೈಕ್ರೋವೇವ್ ಸೇಫ್’ ಲೇಬಲ್‌ನ ಅರ್ಥ, ಆ ಪಾತ್ರೆ ಬೇಗ ಕರಗುವುದಿಲ್ಲ ಅಂತ ಮಾತ್ರ. ಈ ಲೇಬಲ್ ಇರುವ ಪಾತ್ರೆಗಳು ಕೂಡ ಬಿಸಿಯಾದಾಗ ಸ್ವಲ್ಪ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಹೊರಹಾಕುತ್ತವೆ. ಗೀರುಗಳಿರುವ ಅಥವಾ ಹಳೆಯ ಪಾತ್ರೆಗಳು ಹೆಚ್ಚು ಅಪಾಯಕಾರಿ. ನಿರಂತರ ಬಳಕೆಯಿಂದ ‘ಸೇಫ್’ ಪಾತ್ರೆಗಳೂ ಅಸುರಕ್ಷಿತವಾಗುತ್ತವೆ.ಪ್ಲಾಸ್ಟಿಕ್ ಬೆರೆತ ಆಹಾರ ತಿಂದ ತಕ್ಷಣ ಯಾವುದೇ ಬದಲಾವಣೆ ಕಾಣಿಸುವುದಿಲ್ಲ. ಆದರೆ, ವರ್ಷಗಟ್ಟಲೆ ಇದೇ ಅಭ್ಯಾಸ ಮುಂದುವರೆಸಿದರೆ ಹಾರ್ಮೋನ್ ವ್ಯತ್ಯಾಸ, ಬಂಜೆತನ, ಥೈರಾಯ್ಡ್ ಸಮಸ್ಯೆಗಳು ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಗಾಜು/ಸೆರಾಮಿಕ್ ಬಳಸಿ: ಆಹಾರ ಬಿಸಿ ಮಾಡಲು ಯಾವಾಗಲೂ ಗಾಜು ಅಥವಾ ಸೆರಾಮಿಕ್ ಪಾತ್ರೆಗಳನ್ನು ಮಾತ್ರ ಬಳಸಿ. ಸ್ಟೀಲ್ ಪಾತ್ರೆಗಳು ಸಂಗ್ರಹಕ್ಕೆ ಮಾತ್ರ: ಫ್ರಿಡ್ಜ್‌ನಲ್ಲಿ ಆಹಾರ ಸಂಗ್ರಹಿಸಲು ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳನ್ನು ಬಳಸಿ. ಪಾರ್ಸೆಲ್ ಡಬ್ಬಿ ಬಳಸಬೇಡಿ: ಹೋಟೆಲ್‌ಗಳಿಂದ ತಂದ ಪ್ಲಾಸ್ಟಿಕ್ ಪಾತ್ರೆಗಳನ್ನು ಯಾವುದೇ ಕಾರಣಕ್ಕೂ ಮತ್ತೆ ಬಿಸಿ ಮಾಡಲು ಬಳಸಬೇಡಿ. ಹಳೆಯ ಪಾತ್ರೆಗಳನ್ನು ಎಸೆಯಿರಿ: ಗೀರುಗಳು ಅಥವಾ ಹಾನಿಗೊಳಗಾದ ಪ್ಲಾಸ್ಟಿಕ್ ಪಾತ್ರೆಗಳನ್ನು ತಕ್ಷಣವೇ ಬಿಸಾಡಿ.
ಒಮ್ಮೆ ಪ್ಲಾಸ್ಟಿಕ್ ಪಾತ್ರೆಯಲ್ಲಿ ಆಹಾರ ಬಿಸಿ ಮಾಡಿದ್ದರಿಂದ ದೊಡ್ಡ ಸಮಸ್ಯೆಯಾಗದು. ಆದರೆ, ಇದನ್ನೇ ಅಭ್ಯಾಸ ಮಾಡಿಕೊಂಡರೆ ಆರೋಗ್ಯಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಪ್ಲಾಸ್ಟಿಕ್ ಬದಲು ಗಾಜಿನ ಪಾತ್ರೆಗಳಿಗೆ ಬದಲಾಗುವುದು ಸರಳ ಮತ್ತು ಸುರಕ್ಷಿತ ಪರಿಹಾರವಾಗಿದೆ.

Source link

Leave a Reply

Your email address will not be published. Required fields are marked *