ಗಿಫ್ಟ್ ಕೊಡ್ಬೇಕಾಗಿಲ್ಲ, ಡಿನ್ನರ್ ಗೆ ಕರೀಬೇಕಾಗಿಲ್ಲ, ಜೆನ್ ಝೀಗಳಲ್ಲಿ ಹೆಚ್ಚಾಗ್ತಿದೆ ಅಫರ್ಡೇಟಿಂಗ್ | Gen Z New Relationship Status Called Affordating

ಗಿಫ್ಟ್ ಕೊಡ್ಬೇಕಾಗಿಲ್ಲ, ಡಿನ್ನರ್ ಗೆ ಕರೀಬೇಕಾಗಿಲ್ಲ, ಜೆನ್ ಝೀಗಳಲ್ಲಿ ಹೆಚ್ಚಾಗ್ತಿದೆ ಅಫರ್ಡೇಟಿಂಗ್ | Gen Z New Relationship Status Called Affordating



ಗಿಫ್ಟ್ ಕೊಡ್ಬೇಕಾಗಿಲ್ಲ, ಡಿನ್ನರ್ ಗೆ ಕರೀಬೇಕಾಗಿಲ್ಲ, ಜೆನ್ ಝೀಗಳಲ್ಲಿ ಹೆಚ್ಚಾಗ್ತಿದೆ ಅಫರ್ಡೇಟಿಂಗ್ | Gen Z New Relationship Status Called Affordating

Gen-Z Trend : ಜೆನ್ ಝೀಗಳ ಆಲೋಚನೆ ಭಿನ್ನವಾಗಿದೆ. ಜೇಬು ಖಾಲಿ ಆಗ್ದಂತೆ ಡೇಟಿಂಗ್ ಮಾಡೋದನ್ನು ಕಲಿತಿದ್ದಾರೆ. ಸದ್ಯ ಅಫರ್ಡೇಟಿಂಗ್ ಟ್ರೆಂಡ್ ಆಗ್ತಿದ್ದು, ಅದ್ರ ಡಿಟೇಲ್ಸ್ ಇಲ್ಲಿದೆ. 

ಡಿಜಿಟಲ್ ಯುಗದಲ್ಲಿ ಸಂಬಂಧಗಳ ವ್ಯಾಖ್ಯಾನ ವೇಗವಾಗಿ ಬದಲಾಗ್ತಿದೆ. ಅದ್ರಲ್ಲೂ ಜೆನ್ ಝೀ (Gen Z )ಗಳು ಹೊಸ ಹೊಸ ರಿಲೇಶನ್ಶಿಪ್ ವಿಧಾನಗಳನ್ನು ಫಾಲೋ ಮಾಡ್ತಿದ್ದಾರೆ. ದಿನಕ್ಕೊಂದು ಟ್ರೆಂಡ್ ಆಗ್ತಿದೆ. ಅದ್ರಲ್ಲಿ ಅಫರ್ಡೇಟಿಂಗ್ (Affordating) ಕೂಡ ಒಂದು.

ಅಫರ್ಡೇಟಿಂಗ್ ಅಂದ್ರೇನು?

ಅಫರ್ಡಿಂಗ್ ಕೇವಲ ಒಂದು ಟ್ರೆಂಡ್ ಅಲ್ಲ. ಬದಲಾಗ್ತಿರೋ ಜನರ ಮನಸ್ಥಿತಿಯನ್ನು ಸೂಚಿಸುತ್ತೆ. ಪ್ರೀತಿ ತೋರಿಸೋಕೆ ದುಬಾರಿ ಉಡುಗೊರೆ ಕೊಡಬೇಕು, ಫೈವ್ ಸ್ಟಾರ್ ಹೊಟೇಲ್ ನಲ್ಲಿ ಡಿನ್ನರ್ ಮಾಡ್ಬೇಕು ಅನ್ನೋದನ್ನು ಜೆನ್ ಜೀ ನಂಬ್ತಿಲ್ಲ. ನಿಜವಾದ ಪ್ರೀತಿಯಲ್ಲಿ ಇಬ್ಬರು ಒಟ್ಟಿಗೆ ಕಳೆಯುವ ಸಮಯ ಮತ್ತು ಭಾವನಾತ್ಮಕ ಕನೆಕ್ಷನ್ ಮುಖ್ಯ ಎನ್ನೋದು ಅವರ ನಂಬಿಕೆ. ಅಫರ್ಡಿಂಗ್ ಎಂಬುದು ಎರಡು ಪದಗಳಿಂದ ಮಾಡಲ್ಪಟ್ಟಿದೆ. ಅಫರ್ಡಿಂಗ್ + ಡೇಟಿಂಗ್. ಅಫರ್ಡಿಂಗ್ ಬಜೆಟ್ ಫ್ರೆಂಡ್ಲಿ ಡೇಟಿಂಗ್ ಟ್ರೆಂಡ್. ಇದು ಡೇಟಿಂಗ್ ಕಲ್ಚರ್ ಸೂಚಿಸುತ್ತದೆ. ಇದ್ರಲ್ಲಿ ದಂಪತಿ ದುಬಾರಿ ರೆಸ್ಟೋರೆಂಟ್ಗೆ ಹೋಗೋದಿಲ್ಲ, ದುಬಾರಿ ಗಿಫ್ಟ್ ನೀಡೋದಿಲ್ಲ. ಲಗ್ಜುರಿ ಡೇಟಿಂಗ್ ಬದಲು ಬಜೆಟ್ ಸ್ನೇಹಿ ಡೇಟಿಂಗ್ ಗೆ ಮಹತ್ವ ನೀಡ್ತಾರೆ. ಸಿಂಪಲ್ ಆಗಿ ಇಬ್ಬರೂ ದೀರ್ಘಕಾಲ ಸಮಯ ಕಳೀತಾರೆ.

ಭಾರತದಲ್ಲಿ ಈ ಬಾರಿ ಪ್ರೇಮಿಗಳ ದಿನಕ್ಕೆ ಹೂವಿಗಿಂತ ಕಾ0ಡೋಮ್ ಮಾರಾಟ ಹೆಚ್ಚು, ಹೊಸ ದಾಖಲೆ

ಇಂದು, ಹಣದುಬ್ಬರ ಮತ್ತು ಜೀವನಶೈಲಿ ಖರ್ಚು ವೇಗವಾಗಿ ಹೆಚ್ಚಾಗ್ತಿರೋದ್ರಿಂದ, ಜೆನ್ ಝೀಗಳು ತಮ್ಮ ಆಲೋಚನೆ ಬದಲಿಸಿಕೊಂಡಿದ್ದಾರೆ. ಪ್ರೀತಿ ತೋರಿಸೋಕೆ ಹಣ ಖರ್ಚು ಮಾಡೋ ಅಗತ್ಯ ಇಲ್ಲ ಅಂತಿದ್ದಾರೆ. ರಿಲೇಶನ್ಶಿಪ್ ಎಷ್ಟು ಆಳವಾಗಿದೆ ಎಂಬುದನ್ನು ಹಣಖರ್ಚು ಮಾಡಿ ತೋರಿಸ್ಬೇಕಾಗಿಲ್ಲ, ಸಮಯದಿಂದ ನಿರ್ಧರಿಸ್ಬೇಕು ಎಂಬ ತಾತ್ಪರ್ಯವನ್ನು ಇದು ಹೊಂದಿದೆ.

ಅಫರ್ಡೇಟಿಂಗ್ ನಲ್ಲಿ ಏನಿರುತ್ತೆ? : 

ಮೊದಲೇ ಹೇಳಿದಂಗೆ ಇವರು ಹೆಚ್ಚು ಖರ್ಚು ಮಾಡೋದಿಲ್ಲ. ಮನೆಯಲ್ಲೇ ಸಿನಿಮಾ ನೋಡೋದು, ಪಾರ್ಕ್ ಗಳಲ್ಲಿ ಸುತ್ತಾಡೋದು, ಸಣ್ಣ ಪಿಕ್ನಿಕ್, ಸ್ಟ್ರೀಟ್ ಫುಡ್ ಸೇವನೆ, ಫ್ರೀ ಪ್ರೋಗ್ರಾಂ ಅಥವಾ ಜಾತ್ರಾ ಮಹೋತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಬಜೆಟ್ ಫ್ರೆಂಡ್ಲಿ ಡೇಟಿಂಗ್ ಮಾಡ್ತಾರೆ. ಈ ಟ್ರೆಂಡ್, ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್ನಂತಹ ಸೋಶಿಯಲ್ ಮೀಡಿಯಾ ಫ್ಲಾಟ್ಫಾರ್ಮ್ ಗಳಲ್ಲಿ ವೈರಲ್ ಆಗಿದೆ. ಅಲ್ಲಿ ಬಳಕೆದಾರರು #Affortating ಎಂಬ ಹ್ಯಾಶ್ಟ್ಯಾಗ್ನೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

2ನೇ ಪತ್ನಿ, ಮೊದಲ ಪತ್ನಿ ಮಗಳು ಗೌರಿ ನಡುವಿನ ಸಂಬಂಧ ಹೇಗಿದೆ? ಎಸ್‌ ಮಹೇಂದರ್‌ ಮಾತು ಕೇಳಿದ್ರೆ ದಿಗ್ಬ್ರಮೆ ಆಗುತ್ತೆ

ಇದ್ರಿಂದ ಪ್ರಯೋಜ ಏನು? : 

ರೆಸ್ಟೋರೆಂಟ್, ಸಿನಿಮಾ, ಪ್ರವಾಸ ಹೆಚ್ಚು ದುಬಾರಿಯಾಗಿದ್ದು, ಅದ್ರ ಮೇಲೆ ಹೆಚ್ಚು ಹಣ ಖರ್ಚಾದ್ರೆ ಒತ್ತಡ ಹೆಚ್ಚಾಗುತ್ತದೆ. ಅದೇ ಈ ಬಜೆಟ್ ಸ್ನೇಹಿ ಡೇಟಿಂಗ್ ನಿಂದ ಹಣ ಉಳಿಯುತ್ತದೆ. ಜನರೇಷನ್ ಝಡ್ ಉಳಿತಾಯ ಮತ್ತು ಹೂಡಿಕೆಗೆ ಆದ್ಯತೆ ನೀಡೋದ್ರಿಂದ ಅವರಿಗೆ ಇದು ಇಷ್ಟವಾಗ್ತಿದೆ. ಅಲ್ದೆ ಮಿತವ್ಯಯದ ಸಂಬಂಧಗಳಲ್ಲಿ ಆರ್ಥಿಕ ಒತ್ತಡ ಕಡಿಮೆಯಾಗುತ್ತದೆ. ಇವರು ಭಾವನಾತ್ಮಕ ಸಂಪರ್ಕಕ್ಕೆ ಒತ್ತು ನೀಡೋದ್ರಿಂದ ಅಫರ್ಡೇಟಿಂಗ್ ಆಪ್ತವಾಗ್ತಿದೆ. ದಂಪತಿ ಇದ್ರಲ್ಲಿ ಹೊಸ ಬಜೆಟ್ ಸ್ನೇಹಿ ವಿಚಾರಗಳನ್ನು ಅನ್ವೇಷಿಸುತ್ತಾರೆ.

ಅಫರ್ಡೇಟಿಂಗ್ ನಿಂದ ನಷ್ಟ : 

ಇದು ಉತ್ಸಾಹದ ಕೊರತೆಗೆ ಕಾರಣವಾಗಬಹುದು. ಎಲ್ಲರಿಗೂ ಬಜೆಟ್ ಸ್ನೇಹಿ ಡೇಟಿಂಗ್ ಇಷ್ಟವಾಗೋದಿಲ್ಲ. ಇದು ಅವರನ್ನು ಬೋರಾಗಿಸಬಹುದು. ಐಷಾರಾಮಿ ಡೇಟಿಂಗ್ ಬಯಸುವವರು ಇದ್ರಿಂದ ಬೇಸಗೊಳ್ತಾರೆ. ಇಬ್ಬರೂ ಒಂದೇ ರೀತಿ ಆಲೋಚನೆ ಮಾಡ್ತಿದ್ದರೆ ಓಕೆ. ಸಂಗಾತಿಗಳ ಆಲೋಚನೆ ಭಿನ್ನವಾಗಿದ್ದಾಗ ಇದ್ರಿಂದ ಭಿನ್ನಾಭಿಪ್ರಾಯಬರುವ ಸಾಧ್ಯತೆ ಇದೆ. ಸಂಗಾತಿ ಆಲೋಚನೆ, ದೃಷ್ಟಿಕೋನ ಒಂದೇ ರೀತಿ ಇದ್ದಾಗ, ಹಣಕ್ಕಿಂತ ಭಾವನೆಗಳಿಗೆ ಹೆಚ್ಚು ಆದ್ಯತೆ ನೀಡಿದಾಗ ಈ ಅಫರ್ಡೇಟಿಂಗ್ ಯಶಸ್ವಿಯಾಗುತ್ತದೆ.



Source link

Leave a Reply

Your email address will not be published. Required fields are marked *