2014ರಲ್ಲಿ ಸೋನಿಯಾ ನಾನು ಸಿಎಂ ಆಗಬೇಕೆಂದು ಬಯಸಿದ್ದರು ಆದರೆ ರಾಹುಲ್ ಅಡ್ಡಿಯಾದರು : ಅಸ್ಸಾಂ ಸಿಎಂ | Assam Cm Himanta Biswa Sarma Thanked Rahul Gandhi For Blocking His Cm Path

2014ರಲ್ಲಿ ಸೋನಿಯಾ ನಾನು ಸಿಎಂ ಆಗಬೇಕೆಂದು ಬಯಸಿದ್ದರು ಆದರೆ ರಾಹುಲ್ ಅಡ್ಡಿಯಾದರು : ಅಸ್ಸಾಂ ಸಿಎಂ | Assam Cm Himanta Biswa Sarma Thanked Rahul Gandhi For Blocking His Cm Path



2014ರಲ್ಲಿ ಸೋನಿಯಾ ನಾನು ಸಿಎಂ ಆಗಬೇಕೆಂದು ಬಯಸಿದ್ದರು ಆದರೆ ರಾಹುಲ್ ಅಡ್ಡಿಯಾದರು : ಅಸ್ಸಾಂ ಸಿಎಂ | Assam Cm Himanta Biswa Sarma Thanked Rahul Gandhi For Blocking His Cm Path

2014ರಲ್ಲಿ ಸೋನಿಯಾ ಗಾಂಧಿಯವರ ಒಪ್ಪಿಗೆಯ ಹೊರತಾಗಿಯೂ, ರಾಹುಲ್ ಗಾಂಧಿಯವರ ಮಧ್ಯಪ್ರವೇಶದಿಂದಾಗಿ ತಮಗೆ ಅಸ್ಸಾಂ ಮುಖ್ಯಮಂತ್ರಿ ಹುದ್ದೆ ತಪ್ಪಿಹೋಯಿತು ಎಂದು ಹಿಮಂತ್ ಬಿಸ್ವಾ ಶರ್ಮಾ ಬಹಿರಂಗಪಡಿಸಿದ್ದಾರೆ.

ಅಸ್ಸಾಂ ಸೇರಿದಂತೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಭಾರತದ ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿದೆ. ಹೀಗಿರುವಾಗ ಇದೇ ಸಮಯದಲ್ಲಿ ಅಸ್ಸಾಂನ ಪ್ರಸ್ತುತ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರು 2014ರಲ್ಲಿನ ರಾಜಕೀಯ ಸ್ಥಿತಿ ಹಾಗೂ ತಮಗೆ ಸ್ವಲ್ಪದರಲ್ಲೇ ತಪ್ಪಿ ಹೋದ ಸಿಎಂ ಹುದ್ದೆಯ ಬಗ್ಗೆ ಮಾತನಾಡಿದ್ದಾರೆ. ಆಗ ಹಿಮಂತ್ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್‌ನಲ್ಲಿದ್ದರು. 2014ರಲ್ಲಿ ಸೋನಿಯಾ ಗಾಂಧಿ ನಾನು ಅಸ್ಸಾಂ ಸಿಎಂ ಆಗಬೇಕು ಎಂದು ಬಯಸಿದ್ದರು ಆದರೆ ರಾಹುಲ್ ಗಾಂಧಿ ಅದಕ್ಕೆ ಅಡ್ಡಗಾಲು ಹಾಕಿದರು ಎಂದು ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಹಿಮಂತ್ ಬಿಸ್ವಾ ಶರ್ಮಾ, 2014 ರಲ್ಲಿ 58 ಕಾಂಗ್ರೆಸ್ ಶಾಸಕರು ತಮ್ಮನ್ನು ಬೆಂಬಲಿಸುತ್ತಿದ್ದಾಗ, ಆಗಿನ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರು ತನಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನಾಂಕವನ್ನು ನಿರ್ಧರಿಸಲು ಕೇಳಿಕೊಂಡಿದ್ದರು ಎಂದು ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, 2014 ರ ಜೂನ್‌ನಲ್ಲಿ ಕಾಮಾಕ್ಯ ದೇವಸ್ಥಾನದಲ್ಲಿ ನಡೆಯಬೇಕಿದ್ದ ಅಂಬುಬಾಚಿ ಮೇಳದ ಮರುದಿನ ಪ್ರಮಾಣ ವಚನ ಸ್ವೀಕರಿಸುವುದಾಗಿ ಸೋನಿಯಾ ಗಾಂಧಿಯವರಿಗೆ ತಿಳಿಸಿದ್ದೆ. ಆದರೆ, ಆ ಸಮಯದಲ್ಲಿ ಅಮೆರಿಕದಲ್ಲಿದ್ದ ರಾಹುಲ್ ಗಾಂಧಿ ಪಕ್ಷದ ನಾಯಕರಿಗೆ ಕರೆ ಮಾಡಿದರು ಮತ್ತು ರಾಹುಲ್ ಗಾಂಧಿ ಕರೆಯ ನಂತರ ಪರಿಸ್ಥಿತಿ ಬದಲಾಯಿತು ಎಂದು ಹೇಳಿದ್ದಾರೆ.

ಬಹುಶಃ ನಾನು ಆಗ ಸಿಎಂ ಆಗಿದ್ದರೆ ನನ್ನ ಇಮೇಜ್ ಹಾಳಾಗುತ್ತಿತ್ತು:

ನಂತರದಲ್ಲಿ ಹಿಮಂತ್ ಬಿಸ್ವಾ ಶರ್ಮಾ ಅವರು 2014 ರಲ್ಲಿ ಆಗಿನ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಸಂಪುಟಕ್ಕೆ ರಾಜೀನಾಮೆ ನೀಡಿದರು ಮತ್ತು 2015 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಅವರು 2021 ರಲ್ಲಿ ಅಸ್ಸಾಂ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಬಿಜೆಪಿಯಿಂದ ಮುಖ್ಯಮಂತ್ರಿಯಾಗಿಅಸ್ಸಾಂ ಮತ್ತು ಸನಾತನ ಧರ್ಮಕ್ಕೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು. ಆದರೆ ಕಾಂಗ್ರೆಸ್‌ನಲ್ಲಿದ್ದಾಗ ಅದು ಸಾಧ್ಯವಾಗಲಿಲ್ಲ. ಇದಕ್ಕಾಗಿ ರಾಹುಲ್ ಗಾಂಧಿಗೆ ಧನ್ಯವಾದ ಹೇಳುತ್ತೇನೆ ಎಂದು ಅವರು ತಮಾಷೆಯಾಗಿ ಹೇಳಿದ್ದಾರೆ.

ಇದನ್ನೂ ಓದಿ: ಕಾರು ಡಿಕ್ಕಿ ಹೊಡೆದು 23 ಹರೆಯದ ಯುವಕನ ಬಲಿ ಪಡೆದ ಅಪ್ರಾಪ್ತನಿಗೆ ಸಿಕ್ತು ವಾರದಲ್ಲೇ ಜಾಮೀನು

ಮಲ್ಲಿಕಾರ್ಜುನ ಖರ್ಗೆ ಅಸ್ಸಾಂಗೆ ಬಂದಾಗ 58 ಕಾಂಗ್ರೆಸ್ ಶಾಸಕರು ಅವರನ್ನು ಬೆಂಬಲಿಸಿದರು ಎಂದು ಶರ್ಮಾ ಹೇಳಿದರು. ಕೆಲವು ನಾಯಕರು ತಟಸ್ಥರಾಗಿದ್ದರು ಮತ್ತು ಕೇವಲ 12 ಶಾಸಕರು ಮಾತ್ರ ತರುಣ್ ಗೊಗೊಯ್ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಬಯಸಿದ್ದರು. ಆ ಸಮಯದಲ್ಲಿ ನನಗೆ ನ್ಯಾಯ ಸಿಗಲಿಲ್ಲ ಎಂದು ಅವರು ಹೇಳಿದರು, ಆದರೆ ಖರ್ಗೆ ನನ್ನ ವಿರೋಧಿಗಳಿಗೆ ನೀವು ಹಿಮಂತ ವಿರುದ್ಧ ಹೋರಾಡಿ, ಆದರೆ ಶಾಸಕರು ಅವರ ಜೊತೆಗಿದ್ದಾರೆ ಎಂದು ಹೇಳುತ್ತಿದ್ದರು. ಆದರೆ ಆಗ ಮುಖ್ಯಮಂತ್ರಿಯಾಗಿದ್ದರೆ ತಮ್ಮ ಇಮೇಜ್‌ಗೆ ಧಕ್ಕೆ ಬರುತ್ತಿತ್ತು ಎಂದು ಶರ್ಮಾ ಹೇಳಿದರು. ಈ ಘಟನೆಗಳಿಗೆ ಅನೇಕ ಜನರು ಸಾಕ್ಷಿಗಳಾಗಿದ್ದು, ಭವಿಷ್ಯದಲ್ಲಿ ತಾವು ಪುಸ್ತಕ ಬರೆದರೆ ಅವುಗಳ ಬಗ್ಗೆ ವಿವರವಾಗಿ ವಿವರಿಸಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ: ಹಿಂದೂ ಯುವತಿಯೊಂದಿಗೆ ಮಹಾಕಾಲನ ದರ್ಶನಕ್ಕೆ ಬಂದ ಮುಸ್ಲಿಂ ಯುವಕನಿಗೆ ಥಳಿತ



Source link

Leave a Reply

Your email address will not be published. Required fields are marked *