ಈಜಿಪ್ಟ್‌ನಲ್ಲಿ 2000 ವರ್ಷಗಳ ಹಿಂದಿನ ತಮಿಳು-ಬ್ರಾಹ್ಮಿ ಶಾಸನ ಪತ್ತೆ! ಮಹತ್ವದ ಬರಹವೂ ಉಲ್ಲೇಖ | 2000 Year Old Tamil Brahmi Inscriptions Discovered In Egypt Valley Of The Kings

ಈಜಿಪ್ಟ್‌ನಲ್ಲಿ 2000 ವರ್ಷಗಳ ಹಿಂದಿನ ತಮಿಳು-ಬ್ರಾಹ್ಮಿ ಶಾಸನ ಪತ್ತೆ! ಮಹತ್ವದ ಬರಹವೂ ಉಲ್ಲೇಖ | 2000 Year Old Tamil Brahmi Inscriptions Discovered In Egypt Valley Of The Kings



ಈಜಿಪ್ಟ್‌ನಲ್ಲಿ 2000 ವರ್ಷಗಳ ಹಿಂದಿನ ತಮಿಳು-ಬ್ರಾಹ್ಮಿ ಶಾಸನ ಪತ್ತೆ! ಮಹತ್ವದ ಬರಹವೂ ಉಲ್ಲೇಖ | 2000 Year Old Tamil Brahmi Inscriptions Discovered In Egypt Valley Of The Kings

ಈಜಿಪ್ಟ್‌ನ ಪ್ರಸಿದ್ಧ ವ್ಯಾಲಿ ಆಫ್ ದಿ ಕಿಂಗ್ಸ್ ಪ್ರದೇಶದಲ್ಲಿ ಸುಮಾರು 2000 ವರ್ಷಗಳಷ್ಟು ಹಳೆಯದಾದ ತಮಿಳು–ಬ್ರಾಹ್ಮಿ ಶಾಸನಗಳು ಪತ್ತೆಯಾಗಿವೆ. ಈ ಐತಿಹಾಸಿಕ ಅನ್ವೇಷಣೆಯು ಪ್ರಾಚೀನ ತಮಿಳು ವ್ಯಾಪಾರಿಗಳು ಈಜಿಪ್ಟ್‌ನೊಂದಿಗೆ ಹೊಂದಿದ್ದ ಜಾಗತಿಕ ವ್ಯಾಪಾರ, ಸಾಂಸ್ಕೃತಿಕ ಸಂಪರ್ಕವನ್ನು ದೃಢಪಡಿಸುತ್ತದೆ.

ಚೆನ್ನೈ: ಪ್ರಾಚೀನ ತಮಿಳು ನಾಗರಿಕತೆ ಮತ್ತು ಅದರ ಜಾಗತಿಕ ಸಂಪರ್ಕವನ್ನು ದೃಢಪಡಿಸುವ ಅತ್ಯಂತ ಮಹತ್ವದ ಪುರಾತತ್ವ ಸಾಕ್ಷ್ಯ ಇದೀಗ ಬೆಳಕಿಗೆ ಬಂದಿದೆ. ಈಜಿಪ್ಟ್ ‌ನ ಪ್ರಸಿದ್ಧ ವ್ಯಾಲಿ ಆಫ್ ದಿ ಕಿಂಗ್ಸ್ ಪ್ರದೇಶದಲ್ಲಿ, ಸುಮಾರು 2,000 ವರ್ಷಗಳಷ್ಟು ಹಳೆಯದಾದ ತಮಿಳು–ಬ್ರಾಹ್ಮಿ ಶಾಸನಗಳು ಪತ್ತೆಯಾಗಿವೆ. ಈ ಶಾಸನಗಳ ಪತ್ತೆಯಿಂದ, ಪ್ರಾಚೀನ ಕಾಲದಲ್ಲೇ ತಮಿಳು ವ್ಯಾಪಾರಿಗಳು ಹಾಗೂ ಪ್ರವಾಸಿಗರು ಈಜಿಪ್ಟ್‌ನಂತಹ ದೂರದ ದೇಶಗಳಿಗೆ ತೆರಳಿ ವ್ಯಾಪಾರ, ಸಂಶೋಧನೆ ಹಾಗೂ ಸಂಸ್ಕೃತಿಕ ಸಂಪರ್ಕಗಳನ್ನು ಹೊಂದಿದ್ದರು ಎಂಬ ಮಹತ್ವದ ವಿಚಾರ ದೃಢಪಟ್ಟಿದೆ.

ತಮಿಳು ಶಾಸನಶಾಸ್ತ್ರದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಬಹಿರಂಗ

ಈ ಐತಿಹಾಸಿಕ ಅನ್ವೇಷಣೆಯನ್ನು ಸ್ವಿಜರ್ಲೆಂಡ್‌ನ ಖ್ಯಾತ ಶಾಸನಶಾಸ್ತ್ರ ವಿದ್ವಾಂಸರಾದ ಪ್ರೊ. ಇಂಗೋ ಸ್ಟ್ರಾಚ್ ಅವರು ಚೆನ್ನೈನಲ್ಲಿ ಬುಧವಾರ ನಡೆದ ತಮಿಳು ಶಾಸನಶಾಸ್ತ್ರದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಸ್ತುತಪಡಿಸಿದರು. ತಮ್ಮ ಸಂಶೋಧನಾ ಪ್ರಬಂಧದಲ್ಲಿ ಮಾತನಾಡಿದ ಅವರು, “ಈಜಿಪ್ಟ್‌ನ ರಾಜವಂಶೀಯ ಸಮಾಧಿಗಳ ನಡುವೆ ಇರುವ ರಾಮೆಸ್ಸೆಸ್–6 ಸಮಾಧಿ ಪ್ರದೇಶದಲ್ಲಿ ಒಟ್ಟು 6 ತಮಿಳು–ಬ್ರಾಹ್ಮಿ ಶಾಸನಗಳು ಹಾಗೂ ಸುಮಾರು 30 ಪ್ರಾಕೃತ ಭಾಷೆಯ ಶಾಸನಗಳು ಪತ್ತೆಯಾಗಿವೆ,” ಎಂದು ವಿವರಿಸಿದರು.

ಹಲವು ಸ್ಥಳಗಳಲ್ಲಿ ‘ಚಿಕೈ ಕೊರ್ರನ್’ ತಮಿಳು ನಾಯಕರ ಹೆಸರು

ಶಾಸನಗಳಲ್ಲಿ ಕಂಡುಬಂದ ವಿಶಿಷ್ಟ ಹೆಸರಿನ ಬಗ್ಗೆ ಮಾಹಿತಿ ನೀಡಿದ ಪ್ರೊ. ಸ್ಟ್ರಾಚ್, ‘ಚಿಕೈ ಕೊರ್ರನ್’ ಎಂಬ ಹೆಸರು ಕನಿಷ್ಠ 8 ವಿಭಿನ್ನ ಸ್ಥಳಗಳಲ್ಲಿ ಉಲ್ಲೇಖವಾಗಿದೆ. ತಮಿಳಿನಲ್ಲಿ ‘ಚಿಕೈ’ ಎಂದರೆ ಕಿರೀಟ, ‘ಕೊರ್ರನ್’ ಎಂದರೆ ನಾಯಕ ಎಂಬ ಅರ್ಥ ನೀಡುತ್ತದೆ,” ಎಂದು ವಿವರಿಸಿದರು. ಒಂದು ಪ್ರಮುಖ ಶಾಸನದಲ್ಲಿ, ‘ಚಿಕೈ ಕೊರ್ರನ್ ವರ ಕಂತ’ ಎಂದು ಬರೆಯಲಾಗಿದ್ದು, ಇದರ ಅರ್ಥ ‘ಚಿಕೈ ಕೊರ್ರನ್ ಇಲ್ಲಿ ಬಂದು ನೋಡಿದ’ ಎಂದು ಆಗುತ್ತದೆ ಎಂದು ಅವರು ವಿವರಿಸಿದರು.

ಪ್ರಾಚೀನ ಭಾರತೀಯರ ಜಾಗತಿಕ ವ್ಯಾಪಾರ ಸಂಪರ್ಕಕ್ಕೆ ಸಾಕ್ಷಿ

ಈ ಶಾಸನಗಳ ಪತ್ತೆ, ಕ್ರಿ.ಪೂ. ಮತ್ತು ಕ್ರಿ.ಶ. ಆರಂಭಿಕ ಶತಮಾನಗಳಲ್ಲಿಯೇ ಭಾರತೀಯರು ವಿಶೇಷವಾಗಿ ತಮಿಳು ಪ್ರದೇಶದವರು ಸಮುದ್ರ ಮಾರ್ಗದ ಮೂಲಕ ಈಜಿಪ್ಟ್, ರೋಮ್ ಮತ್ತು ಪಶ್ಚಿಮ ಏಷ್ಯಾ ದೇಶಗಳಿಗೆ ವ್ಯಾಪಾರ, ಪ್ರವಾಸ ಹಾಗೂ ಸಂಸ್ಕೃತಿಕ ವಿನಿಮಯಕ್ಕಾಗಿ ತೆರಳುತ್ತಿದ್ದರು ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. “ಇದು ಕೇವಲ ವ್ಯಾಪಾರ ಸಂಬಂಧವಲ್ಲ, ತಮಿಳು ಸಂಸ್ಕೃತಿಯ ಜಾಗತಿಕ ಹಾಜರಾತಿಯೂ ಹೌದು,” ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ತಮಿಳು ನಾಗರಿಕತೆಯ ವೈಶಾಲ್ಯತೆಗೆ ಹೊಸ ಆಯಾಮ

ಈ ಪತ್ತೆ, ತಮಿಳು ನಾಗರಿಕತೆ ಸ್ಥಳೀಯ ಮಟ್ಟಕ್ಕೆ ಸೀಮಿತವಾಗಿರದೆ, ಅಂತಾರಾಷ್ಟ್ರೀಯ ವ್ಯಾಪ್ತಿ ಮತ್ತು ಪ್ರಭಾವ ಹೊಂದಿದ್ದ ಪ್ರಾಚೀನ ಸಂಸ್ಕೃತಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಶಾಸನಶಾಸ್ತ್ರ, ಪುರಾತತ್ವ ಮತ್ತು ಇತಿಹಾಸ ಕ್ಷೇತ್ರಗಳಿಗೆ ಇದು ಅತ್ಯಂತ ಮಹತ್ವದ ಸಂಶೋಧನಾ ಸಾಧನೆಯಾಗಿದ್ದು, ಮುಂದಿನ ಅಧ್ಯಯನಗಳಿಗೆ ಹೊಸ ದಿಕ್ಕು ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



Source link

Leave a Reply

Your email address will not be published. Required fields are marked *