ಹಾಸನ, (ಫೆಬ್ರವರಿ 17): ಹಾಸನ ಜಿಲ್ಲಾ ಒಕ್ಕಲಿಗರ ಸಂಘ (ಹಾಸನ ಒಕ್ಕಲಿಗರ ಸಂಘ) ನಿವೇಶನಕ್ಕೆ 4 ಕೋಟಿ ರೂಪಾಯಿ ಶುಲ್ಕ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಜಿಲ್ಲಾ ಹಾಸನ ಒಕ್ಕಲಿಗರ ಸಂಘ ಸುದ್ದಿಗೋಷ್ಠಿ ನಡೆಸಿದ್ದು, ನಿವೇಶನ ಖರೀದಿಗೆ ರಿಯಾಯಿತಿ ನೆರವು ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ. ಮೂರು ವರ್ಷಗಳ ಹಿಂದೆ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಸರ್ಕಾರ ಒಂದು ಭೂಮಿಯನ್ನು ನೀಡಿತ್ತು. ಇದಕ್ಕೆ ಭೂಮಿಯ ಶೇಕಡಾ 10 ದರ ನೀಡಿ ಖರೀದಿ ಮಾಡಿತ್ತು. ಈಗ ಈ ಒಂದು ನಿವೇಶನದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಿದೆ. ಹೀಗಾಗಿ ಒಕ್ಕಲಿಗರ ಸಂಘಕ್ಕೆ ನೆರವು ನೀಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.