ಹಾಸನದ ಎಸ್ಪಿ ಕಚೇರಿಗೆ ಬಂದು ದೂರು ನೀಡಿದ ಬಳಿಕ ಯಶ್ (ಯಶ್) ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ತೋರಿಸಿದ್ದಾರೆ. ನಿವೇಶನದ ಗಲಾಟೆಗೆ ಅವರು ದೂರು ನೀಡಿದ್ದಾರೆ. ‘ನಮ್ಮ ಬಳಿ ಇರುವ ಎಲ್ಲ ದಾಖಲೆಗಳನ್ನೂ ನೀಡಿದ್ದೇವೆ. ನಮ್ಮ ಮನೆಗೆ ಬಂದು ತೊಂದರೆ ಕೊಟ್ಟಿದ್ದಾರೆ. ಇದುವರೆಗೂ ಜೆಸಿಬಿ ಸೀಜ್ ಮಾಡಿಲ್ಲ. ಆ ಪೇಪರ್ಗೂ ನಮಗೂ ಸಂಬಂಧವಿಲ್ಲ. ಏಕಾಏಕಿ ಬಂದು ಒಡೆದಿದ್ದಾರೆ ಎಂದು ತಿಳಿಸಲಾಗಿದೆ. ಮಹಿಳೆಯಾಗಿ ನಾನು ಖದ್ದಾಗಿ ಬಂದಿದ್ದೇನೆ. ನಮಗೇ ಹೀಗೆ ಆದರೆ ಬೇರೆಯವರ ಕಥೆ ಏನು? ನಮಗೆ ತೊಂದರೆ ಕೊಟ್ಟವರನ್ನು ಯಾಕೆ ಬಂಧಿಸಿಲ್ಲ ಎಂದು ಕೇಳಿದ್ದಾರೆ. ರಾಘವೇಂದ್ರ ಭಾಗಿ ಆಗಿದ್ದಾರೆ. ಆದ್ದರಿಂದಲೇ ಇದು ಇಲ್ಲಿಯವರೆಗೆ ಬಂದಿದೆ. ನಮಗೆ ಭದ್ರತೆ ಬೇಕು. ಮನೆಯಲ್ಲಿ ಏನಾದರೂ ಹೆಚ್ಚೂ ಕಡಿಮೆ ಆದರೆ ನಿಮ್ಮ ಜವಾಬ್ದಾರಿ ಅಂತ ಹೇಳಿದ್ದೇನೆ’ ಎಂದ ಪುಷ್ಪಾ ಅರುಣ್ ಕುಮಾರ್ (ಪುಷ್ಪಾ ಅರುಣ್ ಕುಮಾರ್) ಅವರು ಮಾಹಿತಿ ಹಂಚಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.