ಈ ರಾಶಿಯವರಿಗೆ ಮಾರ್ಚ್​​ನಲ್ಲಿ ಆಗುವ ಗ್ರಹಗಳ ಸಂಯೋಗದಿಂದ ಏನೆಲ್ಲ ಪರಿಣಾಮ ಉಂಟಾಗುವುದು?

ಈ ರಾಶಿಯವರಿಗೆ ಮಾರ್ಚ್​​ನಲ್ಲಿ ಆಗುವ ಗ್ರಹಗಳ ಸಂಯೋಗದಿಂದ ಏನೆಲ್ಲ ಪರಿಣಾಮ ಉಂಟಾಗುವುದು?


ಜ್ಯೋತಿಷ್ಯ ಶಾಸ್ತ್ರವು ಗ್ರಹಗಳ ಸಂಯೋಜನೆಯಿಂದ ಮಾರ್ಚ್ ತಿಂಗಳ ಸಿಂಹ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿದ್ದು, ಗ್ರಹಗತಿಗಳ ಬದಲಾವಣೆಯು ಜೀವನದ ವಿವಿಧ ಆಯಾಮಗಳ ಮೇಲೆ ಬೇರೆ ಬೇರೆ ಪ್ರಭಾವಗಳನ್ನು ಬೀರಲಿದೆ. ಈ ತಿಂಗಳ ದಶೆ ಮತ್ತು ಫಲಗಳು ಇಂತಿವೆ. ​
ಉತ್ತಮ ಫಲಗಳು

ಈ ತಿಂಗಳು ನಿಮಗೆ ಕೆಲವು ಕ್ಷೇತ್ರಗಳಲ್ಲಿ ಅದೃಷ್ಟದ ಬೆಂಬಲ ಸಿಗಲಿದೆ.

ವೃತ್ತಿ ಮತ್ತು ಗೌರವ:

ಸೂರ್ಯನ ಸಂಚಾರವು ಹತ್ತನೇ ಮನೆಯಲ್ಲಿ ಪ್ರಬಲವಾಗಿರುವುದರಿಂದ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಬೀರಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆ ಹಾಗೂ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ.

ಧೈರ್ಯ ಮತ್ತು ಆತ್ಮವಿಶ್ವಾಸ:

ನೀವು ಎದುರಿಸುತ್ತಿರುವ ಹಳೆಯ ಸಮಸ್ಯೆಗಳನ್ನು ಪರಿಹರಿಸಲು ಈ ಸಮಯ ಆಯ್ಕೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ಉತ್ತಮವಾಗಿದೆ.

ಸಾಮಾಜಿಕ ಸ್ಥಾನಮಾನ:

ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ​
ಮಧ್ಯಮ ಫಲಗಳು

ಕೆಲಸ ವಿಷಯಗಳಲ್ಲಿ ನೀವು ಹೆಚ್ಚಿನ ಪರಿಶ್ರಮ ಹಾಕಿದರು, ಆಗ ಮಾತ್ರ ಸಾಧಾರಣ ಯಶಸ್ಸು ಸಾಧ್ಯ.

ಆರ್ಥಿಕ ಸ್ಥಿತಿ:

ಆದಾಯದ ಮೂಲಗಳು ಇವೆಯಾದರೂ, ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಹೂಡಿಕೆ ಮಾಡುವ ಮೊದಲು ಎರಡು ಬಾರಿ ಯೋಚಿಸುವುದು ಒಳಿತು.

ಕುಟುಂಬ ಜೀವನ:

ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಆದರೆ ಸಂವಹನದ ಮೂಲಕ ಇದನ್ನು ಸರಿಪಡಿಸಬಹುದು.

ಶಿಕ್ಷಣ:

ಏಕಾಗ್ರತೆಯ ಕೊರತೆ ಕಾಡಬಹುದು, ಆದರೆ ಸತತ ಪ್ರಯತ್ನದಿಂದ ಮಧ್ಯಮ ಮಟ್ಟದ ಸಾಧನೆ ಮಾಡಬಹುದು.

ಅಧಮ ಫಲಗಳು

ಈ ಕೆಳಗಿನ ವಿಷಯಗಳಲ್ಲಿ ನೀವು ಹೆಚ್ಚಿನ ಜಾಗರೂಕತೆಯನ್ನು ವಹಿಸುವುದು ಅತ್ಯಗತ್ಯ.

ಆರೋಗ್ಯ:

ರಾಹುವಿನ ಪ್ರಭಾವ ಅಥವಾ ಅಷ್ಟಮ ಶನಿಯ ದೃಷ್ಟಿಯಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು, ವಿಶೇಷವಾಗಿ ಕಣ್ಣು ಅಥವಾ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಬಹುದು. ಆಹಾರ ಕ್ರಮದ ಮೇಲೆ ನಿಯಂತ್ರಣವಿರಲಿ.

ಪ್ರೇಮ ಮತ್ತು ದಾಂಪತ್ಯ:

ಸಂಗಾತಿಯೊಂದಿಗೆ ಅನಗತ್ಯವಾದ ವಾದಗಳು ಮನಸ್ತಾಪಕ್ಕೆ ಕಾರಣ. ತಾಳ್ಮೆ ಕಳೆದುಕೊಳ್ಳಬೇಡಿ.

ಗುಪ್ತ ಶತ್ರುಗಳು:

ನಿಮ್ಮ ಪ್ರಗತಿಯನ್ನು ಸಹಿಸಿಕೊಂಡವರು ನಿಮ್ಮ ವಿರುದ್ಧ ಪಿತೂರಿ ನಡೆಸಬಹುದು. ಯಾರನ್ನೂ ಅತಿಯಾಗಿ ನಂಬಬೇಡಿ.

ಆದಿತ್ಯ ಹೃದಯ ಸ್ತೋತ್ರ ಪಠಿಸುವುದರಿಂದ ಆತ್ಮವಿಶ್ವಾಸ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ​
– ಲೋಹಿತ ಹೆಬ್ಬಾರ್



Source link

Leave a Reply

Your email address will not be published. Required fields are marked *