
ಮುಕುಂದ ಮಾಲಾ ಸ್ತೋತ್ರದ ಶ್ರವಣ ಅಥವಾ ಪಠಣವನ್ನು ಮಾಡಿ. ದೂರವಾದ ಸ್ನೇಹ- ಸಂಬಂಧ ಮತ್ತೆ ಸರಿಹೋಗುವುದಕ್ಕೆ ಹಾಗೂ ಉದ್ಯೋಗ, ವ್ಯಾಪಾರ- ವ್ಯವಹಾರಗಳಲ್ಲಿ ಯಶಸ್ಸು ಕಾಣಲು ಸಹಕಾರಿಯಾಗುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಪ್ರಾಪಂಚಿಕ ವಿಚಾರಗಳ ಬಗ್ಗೆ ಒಂದು ರೀತಿಯ ನಿರಾಸಕ್ತಿ ನಿಮ್ಮನ್ನು ಕಾಡಬಹುದು. ಯಾರಿಗೋ ಮುಖ್ಯ ಎಂದಿದ್ದು ನನಗೂ ಮುಖ್ಯ ವಿಷಯ ಏಕೆನಿಸಬಹುದು ಎಂಬಂಥ ಧೋರಣೆ ಈ ದಿನ ಇರುತ್ತದೆ. ವೃತ್ತಿಯೋ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಸಂಗತಿಗಳ ಚರ್ಚೆಯೋ ಇದ್ದಲ್ಲಿ ಅನಿಸಿದ್ದನ್ನೆಲ್ಲ ಹೇಳಿಬಿಡುತ್ತೇನೆ ಎಂಬ ಸನ್ನಿವೇಶದಿಂದ ಆಚೆ ಬನ್ನಿ. ಈಗ ನಿಮಗೆ ಅನಿಸುತ್ತಿರುವುದು ತಾತ್ಕಾಲಿಕ ಮಾತ್ರ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ನಿಮ್ಮಲ್ಲಿ ಕೆಲವರು ಡಿಶ್ ವಾಷರ್, ಮನೆಯನ್ನು ಕಸ ಗುಡಿಸುವಂಥ ರೋಬೋಟ್ ಅಥವಾ ಹೀಗೆ ಮನೆಯಿಂದ ಖರೀದಿಸಿದ ಯಂತ್ರವನ್ನು ಖರೀದಿಸುವ ಬಗ್ಗೆ ಆಲೋಚನೆಗಳನ್ನು ಮಾಡಲಾಗಿರುತ್ತದೆ. ಇನ್ನೂ ಕೆಲವು ಇಎಂಐ ಮಾಡಿಸಿ, ಖರೀದಿಸಿಯೇ ಬಿಡುವ ಸಾಧ್ಯತೆಯೂ ಇದೆ. ಸ್ನೇಹಿತರು ಯಾವುದಾದರೂ ಆಫರ್ ಗಳನ್ನು ತಂದರೆ ಏಕಾಏಕಿ ಒಪ್ಪು ಬಿಡಬೇಡಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ನಿಮಗೆ ಬಂದಿರುವ ಅವಕಾಶವೊಂದು ಅಥವಾ ಕೆಲಸ ಆರಂಭವಾಗಿದೆ ಎಂಬುದಕ್ಕೆ ಮಧ್ಯದಲ್ಲಿ ನಿಲ್ಲಿಸಬೇಕಾದ ಸನ್ನಿವೇಶವಿದೆ. ಒಂದು ವೇಳೆ ಹಣಕಾಸಿನ ವಿಚಾರದಲ್ಲಿ ಕಮಿತ್ ಆಗಿದ್ದಲ್ಲಿ, ಅಂದರೆ ಮಾತು ನೀಡಿದ್ದಲ್ಲಿ ಗಾಂಭೀರ್ಯ ಕಾಪಾಡಿ. ಹೇಗೋ ಸಂಭಾಳಿಸುತ್ತೀನಿ ಎಂಬ ಧೋರಣೆ ಬೇಡ. ಬಹಳ ಮುಖ್ಯವಾದ ದಿನ ಇದಾಗಿದೆ.
ಲೇಖನ- ಸ್ವಾತಿ ಎನ್.ಕೆ.