
ಇರಾನ್ ಸರ್ವೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಖಮೇನಿ, ‘ಇರಾನ್ ಅನ್ನು ನಿರ್ನಾಮ ಮಾಡುವುದು ಎಂದಿಗೂ ಸಸಾಧ್ಯವಿಲ್ಲ. ಅಮೆರಿಕ ಅತಿ ಬಲಿಷ್ಠ ಎಂದುಕೊಂಡಿರುವ ಅದರ ಸೇನೆ ಇನ್ನೊಮ್ಮೆ ಮೇಲೇಳದಂತೆ ಹೊಡೆಯುವ ಸಾಮರ್ಥ್ಯ ನಮಗಿದೆ’ ಎಂದು ಗುಡುಗಿದ್ದಾರೆ.
ಟೆಹ್ರಾನ್: ತನ್ನ ದೇಶದತ್ತ ವಿಶ್ವದ ಅತಿದೊಡ್ಡ ಯುದ್ಧ ನೌಕೆ ರವಾನಿಸಿದ ಅಮೆರಿಕದ ಕ್ರಮಕ್ಕೆ ತಿರುಗೇಟು ನೀಡಿರುವ ಇರಾನ್ ಸರ್ವೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಖಮೇನಿ, ‘ಇರಾನ್ ಅನ್ನು ನಿರ್ನಾಮ ಮಾಡುವುದು ಎಂದಿಗೂ ಸಸಾಧ್ಯವಿಲ್ಲ. ಅಮೆರಿಕ ಅತಿ ಬಲಿಷ್ಠ ಎಂದುಕೊಂಡಿರುವ ಅದರ ಸೇನೆ ಇನ್ನೊಮ್ಮೆ ಮೇಲೇಳದಂತೆ ಹೊಡೆಯುವ ಸಾಮರ್ಥ್ಯ ನಮಗಿದೆ’ ಎಂದು ಗುಡುಗಿದ್ದಾರೆ.
ಅಮೆರಿಕ ಸಮರ ಸಾರುವ ಆತಂಕದ ನಡುವೆ
ಅಮೆರಿಕ ಸಮರ ಸಾರುವ ಆತಂಕದ ನಡುವೆಯೇ ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ಸಮರತಾಲೀಮು ನಡೆಸುತ್ತಿದ್ದು, ಅದರ ನಡುವೆಯೇ ಈ ಎಚ್ಚರಿಕೆ ಬಂದಿದೆ.
ಭೀಕರ ಪರಿಣಾಮವನ್ನು ಎದುರಿಸಲು ಬಯಸುವುದಿಲ್ಲವೆಂದು ಭಾವಿಸಿದ್ದೇನೆ
ಕಳೆದ ವರ್ಷ ಇರಾನ್‌ನ ಅಣುಸ್ಥಾವರದ ಮೇಲೆ ಬಾಂಬರ್ ಬಳಸಿ ತಾವು ಮಾಡಿದ್ದ ದಾಳಿಯನ್ನು ನೆನಪಿಸಿ ಅಮೆರಿಕ ಅಧ್ಯಕ್ಷ ಟ್ರಂಪ್, ‘ಈಗ ಅಣು ಒಪ್ಪಂದ ಮಾಡಿಕೊಳ್ಳುವುದಕ್ಕೆ ಒಪ್ಪದೆ ಇರಾನ್ ಮತ್ತೆ ಅಂತಹ ಭೀಕರ ಪರಿಣಾಮವನ್ನು ಎದುರಿಸಲು ಬಯಸುವುದಿಲ್ಲವೆಂದು ಭಾವಿಸಿದ್ದೇನೆ’ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಖಮೇನಿ, ‘ಕಳೆದ 47 ವರ್ಷಗಳಿಂದ ಇರಾನ್ ಅನ್ನು ನಾಶಮಾಡಲು ನಮ್ಮಿಂದ ಸಾಧ್ಯವಾಗಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಅದನ್ನವರು ಮಾಡಲೂ ಸಾಧ್ಯವಿಲ್ಲ ಎಂದು ಹೇಳಲು ಬಯಸುತ್ತೇನೆ’ ಎಂದು ಹೇಳಿದ್ದಾರೆ. ಈ ಮೂಲಕ ಅಮೆರಿಕದ ದಾಳಿ ಬೆದರಿಕೆಗೆ ಬಗ್ಗದೆ, ಪ್ರತಿದಾಳಿಗೆ ಸಿದ್ಧರಿರುವುದಾಗಿ ಎಚ್ಚರಿಸಿದ್ದಾರೆ.
ಉಭಯ ದೇಶಗಳು ಪರಸ್ಪರ ಇಂಥ ಎಚ್ಚರಿಕೆಯ ನಡುವೆಯೇ ಮಾತುಕತೆ ಕೂಡಾ ನಡೆಸಿವೆ.