ಪ್ರೇಮಿಗಳ ದಿನದಂದು ಪತ್ನಿಯನ್ನು ಊಟಕ್ಕೆ ಕರೆದು ಕತ್ತು ಕೊಯ್ದ ಚಾರ್ಟರ್ಡ್​ ಅಕೌಂಟೆಂಟ್

ಪ್ರೇಮಿಗಳ ದಿನದಂದು ಪತ್ನಿಯನ್ನು ಊಟಕ್ಕೆ ಕರೆದು ಕತ್ತು ಕೊಯ್ದ ಚಾರ್ಟರ್ಡ್​ ಅಕೌಂಟೆಂಟ್


ಹರಿಯಾಣ, ಫೆಬ್ರವರಿ 18: ಪ್ರೇಮಿಗಳ ದಿನದಂದೇ ಪತಿ ತನ್ನ ಪತ್ನಿಯ ಕತ್ತು ಸೀಳಿ ಕೊಲೆ(ಕೊಲೆ) ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಅಂದು ರಾತ್ರಿ ಊಟಕ್ಕೆ ಆಕೆಯನ್ನು ಕರೆದು ಬಳಿಕ ಕೊಲೆ ಮಾಡಿದ್ದಾನೆ. ಆತ ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾನೆ. ಪ್ರೇಮಿಗಳ ದಿನ ಗಂಡ ಹೊರಗೆ ಊಟ ಕೊಡಿಸ್ತಾನೆ ಎಂದು ಖುಷಿಯಿಂದ ಕುಣಿದಾಡುತ್ತಾ ಹೋಗಿದ್ದ ಪತ್ನಿ ಶವವಾಗಿದ್ದಾಳೆ.

ಆಕೆಯನ್ನು ಕೊಲೆ ಮಾಡಿ ಬಳಿಕ ದರೋಡೆ ಕಥೆ ಕಟ್ಟಿ ಪೊಲೀಸರ ದಾರಿ ತಪ್ಪಿಸಿದ್ದಾನೆ. ಮೊದಲು ದರೋಡೆ ಪ್ರಕರಣ ಎಂದು ತೋರುತ್ತಿದ್ದ ಪ್ರಕರಣವು ಶೀಘ್ರದಲ್ಲೇ ಆಕೆಯ ಪತಿ, ಚಾರ್ಟರ್ಡ್ ಅಕೌಂಟೆಂಟ್ ಅನ್ಶುಲ್ ಧವನ್ ಹೂಡಿದ್ದ ಯೋಜನೆಯು ಬೆಳಕಿಗೆ ಬಂದಿದೆ.

ಭಾನುವಾರ ರಾತ್ರಿ 11 ಗಂಟೆಗೆ ಸುಮಾರಿಗೆ ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಅನ್ಶುಲ್ ಪೊಲೀಸರಿಗೆ ಕರೆ ಮಾಡಿ, ಅಪರಿಚಿತ ದಾಳಿಕೋರರು ತಮ್ಮ ಮನೆಯನ್ನು ದರೋಡೆ ಮಾಡಲು ಪ್ರಯತ್ನಿಸಿದ್ದಾರೆ ಮತ್ತು ಅವರ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಹೇಳಿದರು.

ಮತ್ತಷ್ಟು ಓದಿ: ಗರ್ಲ್ಫ್ರೆಂಡ್ ಎದೆಯ ಮೇಲೆ ಹತ್ತಿ ಕುಳಿತು ಚಾಕು ಮುರಿಯುವವರೆಗೂ ಇರಿದು ಕೊಂಡು, ಧೂಪ ಬೆಳಗಿ ಅವಳ ಆತ್ಮ ಕರೆದ ವ್ಯಕ್ತಿ

ಆದರೆ ತನಿಖೆ ಆರಂಭವಾದ ಬಳಿಕ ಆತನ ಹೇಳಿಕೆಯ ಮೇಲೆ ಅನುಮಾನ ಬಂದಿತ್ತು, ಅನ್ಶುಲ್ ಆಗಾಗ ಕಥೆಯನ್ನು ಬದಲಾಯಿಸುತ್ತಲೇ ಇದ್ದ. ದಾಳಿಕೋರರ ಬಗ್ಗೆ ವಿವರಣೆ ಕೊಡಲು ಆತನಿಗೆ ಸಾಧ್ಯವಾಗಲಿಲ್ಲ. ಇದು ಪೊಲೀಸರಿಗೆ ಇನ್ನಷ್ಟು ಅನುಮಾನ ಹುಟ್ಟುಹಾಕಿತ್ತು.

ಆದರೆ ಮತ್ತಷ್ಟು ಪ್ರಶ್ನೆಗಳನ್ನು ಕೇಳಿದಾಗ, ಅನ್ಶುಲ್ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ. ಗುರುಗ್ರಾಮದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ಪತ್ನಿಯ ಬಗ್ಗೆ ಮೊದಲಿನಿಂದಲೂ ಆತನಿಗೆ ಅನುಮಾನವಿತ್ತು. ಅವರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಈ ಅನುಮಾನವು ಅಂತಿಮವಾಗಿ ಆತನಿಗೆ ಅಪರಾಧದತ್ತ ದೂಡಿತ್ತು. ಮೆಹೆಕ್ ತಂದೆ ಕಥುರಿಯಾ ಮೊದಲಿನಿಂದಲೂ ತನ್ನ ಅಳಿಯನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

ಕೊಲೆಯ ಸಮಯದಲ್ಲಿ, ಅನ್ಶುಲ್ ಯಾವುದೇ ಬೆರಳಚ್ಚುಗಳನ್ನು ಬಿಡದಂತೆ ಕೈಗವಸುಗಳನ್ನು ಧರಿಸಿದ್ದನು. ಮೊದಲು ಮೆಹೆಕ್ಳ ಕತ್ತು ಹಿಸುಕಿ ಕೊಂದು ನಂತರ ಕತ್ತರಿ ಬಳಸಿ ಅವಳ ಗಂಟಲು ಸೀಳಿದ್ದ. ಹಿಸಾರ್ ನಿವಾಸಿ ಅನ್ಶುಲ್ ಮತ್ತು ಹನ್ಸಿಯಾ ಮೆಹೆಕ್ ಇಬ್ಬರೂ ಕಳೆದ ವರ್ಷ ಸೆಪ್ಟೆಂಬರ್ 25 ರಂದು ವಿವಾಹವಾಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *