ಅಂದುಕೊಂಡ ಸಮಯಕ್ಕೆ ಬರಲ್ಲ ನೀಲ್- ಎನ್​ಟಿಆರ್ ಸಿನಿಮಾ?

ಅಂದುಕೊಂಡ ಸಮಯಕ್ಕೆ ಬರಲ್ಲ ನೀಲ್- ಎನ್​ಟಿಆರ್ ಸಿನಿಮಾ?


ಸಾಮಾನ್ಯವಾಗಿ ಬಿಗ್ ಬಜೆಟ್ ಸಿನಿಮಾಗಳನ್ನು ಕೈಗೆತ್ತಿಕೊಂಡಾಗ ಅದನ್ನು ಅಂದುಕೊಂಡ ದಿನಾಂಕದಂದು ತೆರೆಗೆ ತರೋದು ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ಆ ಬಗ್ಗೆ ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಆದರೆ, ಇದು ಅಷ್ಟು ಸುಲಭ ಅಲ್ಲ. ಈಗ ಜೂನಿಯರ್ ಎನ್ ಟಿಆರ್ (ಜೂನಿಯರ್ ಎನ್ಟಿಆರ್) ಸಿನಿಮಾ ವಿಷಯವೂ ಹಾಗೆಯೇ ಆಗಿದೆ. ಸಿನಿಮಾ ಅಂದುಕೊಂಡ ದಿನಾಂಕದಂದು ತೆರೆಗೆ ತರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ದೀಪಾವಳಿ ಅಥವಾ ಮಾಸ್ ಸಂದರ್ಭದಲ್ಲಿ ಕ್ರಿಸ್ ಚಿತ್ರ ತೆರೆಗೆ ತರುವ ಬಗ್ಗೆ ತಂಡ ಪ್ಲ್ಯಾನ್ ಮಾಡಿದೆ.

ಜೂನಿಯರ್ ಎನ್ ಟಿಆರ್ ಹಾಗೂ ಪ್ರಶಾಂತ್ ನೀಲ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ ಎಂದು ಈ ಮೊದಲು ಘೋಷಿಸಲಾಗಿದೆ. ಆದರೆ, ಇನ್ನೂ ಸಿನಿಮಾದ ಶೂಟ್ ಆಗಿಲ್ಲ. ಸದ್ಯ ತಂಡ ಜೋರ್ಡನ್ ಅಲ್ಲಿದ್ದು, ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿದೆ. ಆ ಬಳಿಕ ತಂಡ ಹೈದರಾಬಾದ್‌ಗೆ ಮರಳಲಿದೆ.

ಜೋರ್ಡನ್ ಅಲ್ಲಿ ನಡೆಯೋದು ಕೊನೆಯದಾಗಿ ಔಟ್ ಡೋರ್ ಶೂಟ್. ನಂತರ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇಂಡೋರ್ ಶೂಟ್‌ನಂತೆ. ಅದಕ್ಕೂ ಸ್ವಲ್ಪ ಸಮಯ ಹಿಡಿಯಲಿದೆ. ಇದೆಲ್ಲ ಸೇರಿದರೆ ಈ ಎರಡು ತಿಂಗಳ ಶೂಟಿಂಗ್‌ಗೆ ಸಮಯ ವ್ಯರ್ಥ ಆಗಲಿದೆ. ಹೀಗಾಗಿ, ಜೂನ್ ಸಮಯಕ್ಕೆ ಸಿನಿಮಾ ರಿಲೀಸ್ ಆಗೋದು ಅನುಮಾನ ಎನ್ನುತ್ತಿದ್ದಾರೆ.

ಈ ಮೊದಲು ಸಿನಿಮಾ ಬಗ್ಗೆ ಸಾಕಷ್ಟು ನೆಗೆಟಿವ್ ಮಾತುಗಳು ಕೇಳಿ ಬಂದಿದ್ದವು. ಸಿನಿಮಾ ದೃಶ್ಯಗಳ ಬಗ್ಗೆ ಜೂನಿಯರ್ ಎನ್ ಟಿಆರ್ ಅವರಿಗೆ ಖುಷಿ ಇಲ್ಲ ಎಂದು ಹೇಳಲಾಗಿದೆ. ಆದರೆ, ಅದು ಸುಳ್ಳಾಗಿದೆ. ಸಿನಿಮಾ ವಿಳಂಬವಾದರೂ ಇದೆಯಲ್ಲ ಎಂಬ ಖುಷಿಯಲ್ಲಿ ಅಭಿಮಾನಿಗಳು ಇದ್ದಾರೆ.

ಇದನ್ನೂ ಓದಿ: ಜೂ ಎನ್ ಟಿಆರ್ ಸಿನಿಮಾಕ್ಕೆ ಬಾಲಿವುಡ್ ನಟನ ಕರೆತಂದ ಪ್ರಶಾಂತ್ ನೀಲ್: ಯಾರದು?

ಪ್ರಶಾಂತ್ ನೀಲ್ ನಿರ್ದೇಶನದ ಕೊನೆಯ ಸಿನಿಮಾ ‘ಸಲಾರ್’ ಸಾಧಾರಣ ಎನಿಸಿಕೊಂಡಿತು. ಈ ಮೂಲಕ ಅವರಿಗೆ ಗೆಲ್ಲುವ ಅನಿವಾರ್ಯತೆ ಇದೆ. ಅವರು ಡಾರ್ಕ್ ಸ್ಟೈಲ್ ಅಲ್ಲಿ ಸಿನಿಮಾ ಮಾಡೋ ಬಗ್ಗೆ ಕೆಲವರಿಗೆ ಅಸಮಾಧಾನ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:32 am, ಬುಧವಾರ, 18 ಫೆಬ್ರವರಿ 26



Source link

Leave a Reply

Your email address will not be published. Required fields are marked *