ಉದ್ಯಮಿ ಸಿ.ಜೆ.ರಾಯ್ ಕೇಸ್; ಕಾರಣ ಮಾತ್ರ ಇನ್ನೂ ನಿಗೂಢ: ಹಿರಿಯ ಅಧಿಕಾರಿಗಳು ಹೇಳಿದ್ದೇನು?

ಉದ್ಯಮಿ ಸಿ.ಜೆ.ರಾಯ್ ಕೇಸ್; ಕಾರಣ ಮಾತ್ರ ಇನ್ನೂ ನಿಗೂಢ: ಹಿರಿಯ ಅಧಿಕಾರಿಗಳು ಹೇಳಿದ್ದೇನು?

ಉದ್ಯಮಿ ಸಿ.ಜೆ.ರಾಯ್ ಕೇಸ್; ಕಾರಣ ಮಾತ್ರ ಇನ್ನೂ ನಿಗೂಢ: ಹಿರಿಯ ಅಧಿಕಾರಿಗಳು ಹೇಳಿದ್ದೇನು?

ಉದ್ಯಮಿ ಸಿ.ಜೆ.ರಾಯ್ ಆತ್ಮ*ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಶೀಘ್ರದಲ್ಲೇ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದೆ. ಆರ್ಥಿಕ, ಕೌಟುಂಬಿಕ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದರೂ, ಆತ್ಮ*ಹತ್ಯೆಗೆ ನಿಖರ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಉದ್ಯಮಿ ಸಿ.ಜೆ.ರಾಯ್ ಆತ್ಮ*ಹತ್ಯೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರಕ್ಕೆ ಕೆಲವೇ ದಿನಗಳಲ್ಲಿ ಅಂತಿಮ ವರದಿ ಸಲ್ಲಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.

ಆತ್ಮ*ಹತ್ಯೆ ಸಂಬಂಧ ರಿಯಲ್ ಎಸ್ಟೇಟ್‌, ಇತರೆ ಆರ್ಥಿಕ ವ್ಯವಹಾರ, ಕೌಟುಂಬಿಕ ಹಾಗೂ ಆರೋಗ್ಯ ಸೇರಿ ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಹಲವು ದಾಖಲೆಗಳನ್ನು ಸಹ ಸಂಗ್ರಹಿಸಿ ಅವಲೋಕಿಸಲಾಗಿದೆ. ಆದರೆ ಈವರೆಗೆ ಆತ್ಮ*ಹತ್ಯೆಗೆ ಇಂಥದ್ದೇ ಕಾರಣ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತನಿಖೆಯಲ್ಲಿ ಪತ್ತೆಯಾದ ಅಂಶಗಳನ್ನು ಆಧರಿಸಿ ಮತ್ತಷ್ಟು ತನಿಖೆ ಮುಂದುವರೆಸಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದಷ್ಟು ಬೇಗ ಪ್ರಕರಣ ಇತ್ಯರ್ಥಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಮೃತ ಉದ್ಯಮಿ ಕುಟುಂಬದವರು, ಕಂಪನಿ ಉದ್ಯೋಗಿಗಳು ಹಾಗೂ ಹೂಡಿಕೆದಾರರನ್ನೂ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಸಿ.ಜೆ.ರಾಯ್‌ ಕೇಸ್‌ : ಸಚಿವೆ ನಿರ್ಮಲಾಗೆ ಕೇರಳ ಸಿಎಂ ಪತ್ರ

ಇತ್ತೀಚಿಗೆ ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಗುಂಡಿಟ್ಟುಕೊಂಡು ಕಾನ್ಫಿಡೆಂಟ್ ಗ್ರೂಪ್‌ನ ಮಾಲಿಕ ಸಿ.ಜೆ.ರಾಯ್ ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಈ ಆತ್ಮ*ಹತ್ಯೆಗೆ ಕಾರಣಗಳು ಬೆಳಕಿಗೆ ಬಾರದೆ ನಿಗೂಢವಾಗಿದೆ. ನಿರಂತರ ಐಟಿ ದಾಳಿ ಹೊರತು ರಾಯ್ ಅವರಿಗೆ ಯಾವುದೇ ಒತ್ತಡಗಳು ಇರಲಿಲ್ಲ ಎಂದು ಸೋದರ ಹೇಳಿದ್ದರು.

ಇದನ್ನೂ ಓದಿ: ಐಟಿ ದಾಳಿಗೆ ಬೇಸತ್ತು ಗುಂಡು ಹಾರಿಸಿ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮ**ತ್ಯೆ

Source link

Leave a Reply

Your email address will not be published. Required fields are marked *