Headlines

ಬಿಗ್ ಬಾಸ್ ಬಳಿಕ ಮುಂದಿನ ಪ್ರಾಜೆಕ್ಟ್ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಗಿಲ್ಲಿ ನಟ

ಬಿಗ್ ಬಾಸ್ ಬಳಿಕ ಮುಂದಿನ ಪ್ರಾಜೆಕ್ಟ್ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಗಿಲ್ಲಿ ನಟ


ಸೋಶಿಯಲ್ ಮೀಡಿಯಾ, ಯೂಟ್ಯೂಬ್ ತೆಗೆದರೆ ಬಿಗ್ ಬಾಸ್ ಕನ್ನಡ ಸೀಸನ್ 12ರ (ಬಿಗ್ ಬಾಸ್) ವಿನ್ನರ್ ಗಿಲ್ಲಿ ನಟ ಅವರೇ ಕಾಣಿಸಿಕೊಳ್ಳುತ್ತಾರೆ. ಅವರು ವಿವಿಧ ಉತ್ಸವಗಳಲ್ಲಿ ಕಾಣಿಸಿಕೊಳ್ಳುತ್ತಿರುವುದೇ ಇದಕ್ಕೆ ಕಾರಣ. ಈಗ ಗಿಲ್ಲಿ ನಟನ ಕಡೆಯಿಂದ ದೊಡ್ಡ ಅಪ್ಡೇಟ್ ಸಿಕ್ಕಿದೆ. ಮುಂದಿನ ಸಿನಿಮಾ ಯಾವುದು ಎಂದು ಅವರು ರಿವೀಲ್ ಮಾಡಿದ್ದಾರೆ. ಈ ವಿಷಯ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಬಿಗ್ ಬಾಸ್ ಆರಂಭದ ತಿಂಗಳ ಮೇಲಾಗಿದೆ. ಆದಾಗ್ಯೂ ಗಿಲ್ಲಿ ನಟನ ಹವಾ ಮಾತ್ರ ಕಡಿಮೆ ಆಗಿಲ್ಲ. ಅವರು ಹೋದಲ್ಲಿ-ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಅವರನ್ನು ಭೇಟಿ ಮಾಡಲು ಬರೋ ಅಭಿಮಾನಿಗಳನ್ನು ಅವರು ಪ್ರೀತಿಯಿಂದ ಮಾತನಾಡುತ್ತಿದ್ದಾರೆ. ಈ ಮಧ್ಯೆ ಗಿಲ್ಲಿ ನಟ ಅವರು ಮುಂದಿನ ಪ್ರಾಜೆಕ್ಟ್ ಯಾವುದು ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ.

ಗಿಲ್ಲಿ ಮಾತ ಅವರು ಉತ್ತಮ ನಟ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಸ್ಯ ಪ್ರಧಾನ ಕಿರುಚಿತ್ರ ಹಾಗೂ ರಿಯಾಲಿಟಿ ಶೋಗಳ ಮೂಲಕ ಇದು ಸಾಬೀತಾಗಿದೆ. ಇದರ ಜೊತೆಗೆ ಅವರಲ್ಲಿ ನಿರ್ದೇಶಕ ಕೂಡ ಇದ್ದಾನೆ. ಕೆಲವು ಕಿರುಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಈ ಕಿರುಚಿತ್ರಗಳು ಗಮನ ಸೆಳೆದಿವೆ. ಈ ಕಿರುಚಿತ್ರಗಳ ಮೂಲಕ ಅವರು ಫೇಮಸ್ ಆಗಿದ್ದಾರೆ. ಈಗ ಅವರು ಸಿನಿಮಾ ನಿರ್ದೇಶನ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗೆ ಬೆದರಿಕೆ; 10 ಕೋಟಿ ರೂಪಾಯಿಗೆ ಬೇಡಿಕೆ

ಸಿನಿಮಾದಲ್ಲಿ ನಟಿಸೋದು ಎಂದರೆ ನಿರ್ದೇಶನ ಮಾಡಿದ್ದಕ್ಕಿಂತ ಸುಲಭ. ನಿರ್ದೇಶಕರು ಸ್ಕ್ರಿಪ್ಟ್ ರೆಡಿ ಮಾಡಿ ಇಟ್ಟಿದ್ದಾರೆ. ಬಂದು ನಟಿಸಿ ಹೋದರೆ ಆಯ್ತು. ಆದರೆ, ನಿರ್ದೇಶನ ಮಾಡೋದು ಅಷ್ಟು ಸುಲಭ ಅಲ್ಲ. ಸಿನಿಮಾ ಆರಂಭದಿಂದ ಹಿಡಿದು ಕೊನೆಯವರೆಗೂ ಅವರೇ ಶ್ರಮ ಹಾಕಿ ಕೆಲಸ ಮಾಡಬೇಕು. ಸದ್ಯ ಗಿಲ್ಲಿ ವಿವಿಧ ಉತ್ಸವಗಳಿಗೆ ತೆರಳುತ್ತಿದ್ದಾರೆ. ಇದು ನಂತರ ಅವರು ಸ್ಕ್ರಿಪ್ಟ್ ಬರೆಯಲು ಕುಳಿತುಕೊಳ್ಳಲಿದ್ದಾರೆ. ವಿಶೇಷ ಎಂದರೆ ಅವರ ಬಳಿ ಕಥೆ ಕೂಡ ರೆಡಿ ಇದೆಯಂತೆ. ಇದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *