ಕೆನಡಾದ ಆರಂಭಿಕ ಆಟಗಾರ ಯುವರಾಜ್ ಸಮ್ರಾ, ಕೇವಲ 19ನೇ ವಯಸ್ಸಿನಲ್ಲಿ ಟಿ20 ವಿಶ್ವಕಪ್ನಲ್ಲಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಅಹ್ಮದ್ ಶೆಹಜಾದ್ ಅವರ ದಾಖಲೆಯನ್ನು ಮುರಿದು, ಈ ಸಾಧನೆ ಮಾಡಿದ ಅತೀ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ನ ‘ಡಿ’ ಗುಂಪಿನ ಪಂದ್ಯದಲ್ಲಿ ಕೆನಡಾದ ಆರಂಭಿಕ ಆಟಗಾರ ಯುವರಾಜ್ ಸಮ್ರಾ, ನ್ಯೂಜಿಲೆಂಡ್ ವಿರುದ್ಧ ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಅತೀ ಕಿರಿಯ ಆಟಗಾರ ಎಂಬ ದಾಖಲೆ ಬರೆದರು. ಅಲ್ಲದೆ, ಸಹಾಯಕ ರಾಷ್ಟ್ರವೊಂದರಿಂದ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಈ ಸ್ಫೋಟಕ ಇನ್ನಿಂಗ್ಸ್ ಆಡುವಾಗ ಯುವರಾಜ್ ಸಮ್ರಾಗೆ ಕೇವಲ 19 ವರ್ಷ 141 ದಿನ ವಯಸ್ಸಾಗಿತ್ತು. ಇದರೊಂದಿಗೆ, 2014ರಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದ್ದ ಪಾಕಿಸ್ತಾನದ ಅಹ್ಮದ್ ಶೆಹಜಾದ್ (22 ವರ್ಷ 127 ದಿನ) ಅವರ ದಶಕದ ಹಳೆಯ ದಾಖಲೆಯನ್ನು ಮುರಿದರು.

ಟಿ20 ವಿಶ್ವಕಪ್ನಲ್ಲಿ ಅತೀ ಕಿರಿಯ ಶತಕವೀರರು

ಯುವರಾಜ್ ಸಮ್ರಾ (ಕೆನಡಾ): 19 ವರ್ಷ 141 ದಿನ (v ನ್ಯೂಜಿಲೆಂಡ್, 2026)

ಅಹ್ಮದ್ ಶೆಹಜಾದ್ (ಪಾಕಿಸ್ತಾನ): 22 ವರ್ಷ 127 ದಿನ (v ಬಾಂಗ್ಲಾದೇಶ, 2014)

ಸುರೇಶ್ ರೈನಾ (ಭಾರತ): 23 ವರ್ಷ 156 ದಿನ (v ದಕ್ಷಿಣ ಆಫ್ರಿಕಾ, 2010)

ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್): 25 ವರ್ಷ 83 ದಿನ (v ಶ್ರೀಲಂಕಾ, 2014)

ಯುವರಾಜ್ ಸಮ್ರಾ (ಕೆನಡಾ): 19 ವರ್ಷ 141 ದಿನ (v ನ್ಯೂಜಿಲೆಂಡ್, 2026)

ಅಹ್ಮದ್ ಶೆಹಜಾದ್ (ಪಾಕಿಸ್ತಾನ): 22 ವರ್ಷ 127 ದಿನ (v ಬಾಂಗ್ಲಾದೇಶ, 2014)

ಸುರೇಶ್ ರೈನಾ (ಭಾರತ): 23 ವರ್ಷ 156 ದಿನ (v ದಕ್ಷಿಣ ಆಫ್ರಿಕಾ, 2010)

ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್): 25 ವರ್ಷ 83 ದಿನ (v ಶ್ರೀಲಂಕಾ, 2014)

ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕೆನಡಾಕ್ಕೆ ಸಮ್ರಾ ಸ್ಫೋಟಕ ಆರಂಭ ನೀಡಿದರು. ನಾಯಕ ದಿಲ್ಪ್ರೀತ್ ಬಜ್ವಾ ಜೊತೆ ಮೊದಲ ವಿಕೆಟ್ಗೆ 116 ರನ್ಗಳ ಜೊತೆಯಾಟವಾಡಿದರು. 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಳಿಕ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್ ಅವರಂತಹ ಬೌಲರ್ಗಳನ್ನು ದಂಡಿಸಿದರು. ಒಟ್ಟು 65 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್ ಸಹಿತ 110 ರನ್ ಗಳಿಸಿ, ಗ್ಲೆನ್ ಫಿಲಿಪ್ಸ್ಗೆ ಕ್ಯಾಚ್ ನೀಡಿ ಔಟಾದರು. 103 ರನ್ ಗಳಿಸಿದ್ದಾಗ ಜಿಮ್ಮಿ ನೀಶಮ್ ಕ್ಯಾಚ್ ಕೈಬಿಟ್ಟು ಜೀವದಾನ ನೀಡಿದ್ದರು.ಯುವರಾಜ್ ಸಮ್ರಾ ಯಶಸ್ಸಿನ ಹಿಂದೆ ತಂದೆ ಬಲ್ಜೀತ್ ಬಾಲಿ ಸಮ್ರಾ ಅವರ ಶ್ರಮವಿದೆ. ಯುವರಾಜ್ ಸಿಂಗ್ ಅವರ ದೊಡ್ಡ ಅಭಿಮಾನಿಯಾಗಿರುವ ಅಮೃತಸರ ಮೂಲದ ಬಲ್ಜೀತ್, ಮಗನಿಗೆ ಅದೇ ಹೆಸರಿಟ್ಟರು. ಕೆನಡಾದಲ್ಲಿ ನೆಲೆಸಿದ್ದರೂ, ಮಗನ ತರಬೇತಿಗಾಗಿ ಭಾರತ, ಅಮೆರಿಕ, ಕೆರಿಬಿಯನ್ ದೇಶಗಳಿಗೆ ಕರೆದೊಯ್ದಿದ್ದರು. ಅಮರಿಂದರ್ ಭಿಂದರ್, ಗಗನ್ದೀಪ್ ಸಿಂಗ್ ಅವರಂತಹ ಕೋಚ್ಗಳ ಬಳಿ ತರಬೇತಿ ಪಡೆದ ಸಮ್ರಾ, ಇಂದು ದೊಡ್ಡ ವೇದಿಕೆಯಲ್ಲಿ ಮಿಂಚಿದ್ದಾರೆ.ಸಮ್ರಾ ಅವರ ಶತಕದ ಬಲದಿಂದ ಕೆನಡಾ 20 ಓವರ್ಗಳಲ್ಲಿ 173/4 ರನ್ ಗಳಿಸಿತು. ಆದರೆ, ನ್ಯೂಜಿಲೆಂಡ್ ಈ ಗುರಿಯನ್ನು 15.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು. ರಚಿನ್ ರವೀಂದ್ರ (59*) ಮತ್ತು ಗ್ಲೆನ್ ಫಿಲಿಪ್ಸ್ (76*) ಕಿವೀಸ್ಗೆ 8 ವಿಕೆಟ್ಗಳ ಜಯ ತಂದುಕೊಟ್ಟರು. ಪಂದ್ಯ ಸೋತರೂ, ಸಮ್ರಾ ಅವರ ಆಟ ಟೂರ್ನಿಯ ಹೈಲೈಟ್ ಆಗಿದೆ. ಐಪಿಎಲ್ನಂತಹ ಲೀಗ್ಗಳಲ್ಲಿ ಆಡುವ ತಾಕತ್ತು ತನಗಿದೆ ಎಂದು ಅವರು ನಿರೂಪಿಸಿದ್ದಾರೆ.
Source link
Yuvraj Samra: ಟಿ20 ವಿಶ್ವಕಪ್ನಲ್ಲಿ ಶತಕ ಚಚ್ಚಿದ 19ರ ಪೋರ, ವಿಶ್ವ ಕ್ರಿಕೆಟ್ ಲೋಕವೇ ಬೆರಗು! ಈತನ ತಂದೆ ಯುವಿ ಅಭಿಮಾನಿ