Headlines

ರಂಜಾನ್ ಮಾಸದಲ್ಲಿ ರಿಫ್ರೆಶ್ ಅನುಭವ ನೀಡುವ ಮೊಹಬ್ಬತ್ ಕಾ ಶರಬತ್ ಪಾನೀಯ ತಯಾರಿಸುವ ವಿಧಾನ

ರಂಜಾನ್ ಮಾಸದಲ್ಲಿ ರಿಫ್ರೆಶ್ ಅನುಭವ ನೀಡುವ ಮೊಹಬ್ಬತ್ ಕಾ ಶರಬತ್ ಪಾನೀಯ ತಯಾರಿಸುವ ವಿಧಾನ

ರಂಜಾನ್ ಮಾಸದಲ್ಲಿ ರಿಫ್ರೆಶ್ ಅನುಭವ ನೀಡುವ ಮೊಹಬ್ಬತ್ ಕಾ ಶರಬತ್ ಪಾನೀಯ ತಯಾರಿಸುವ ವಿಧಾನ
ರಂಜಾನ್ ಮಾಸದಲ್ಲಿ ಉಪವಾಸದ ಸಮಯದಲ್ಲಿ ಸೇವಿಸುವ ವಿಶೇಷ ಪಾನೀಯವೇ ಮೊಹಬ್ಬತ್ ಕಾ ಶರಬತ್. ಹಾಲು, ಕಲ್ಲಂಗಡಿ, ಮತ್ತು ರೂಹ್‌ಅಫ್ಜಾ ಬಳಸಿ ತಯಾರಿಸುವ ಈ ಪಾನೀಯವು ದೇಹಕ್ಕೆ ತಂಪು ನೀಡಿ, ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಈ ಲೇಖನದಲ್ಲಿ ಇದನ್ನು ತಯಾರಿಸುವ ಸರಳ ವಿಧಾನವನ್ನು ವಿವರಿಸಲಾಗಿದೆ.
ರಂಜಾನ್ ಮಾಸದಲ್ಲಿ ಧಾರ್ಮಿಕ ಚಟುವಟಿಕೆಯಲ್ಲಿ ಭಾಗಿಯಾಗೋದರ ಜೊತೆ ಮುಸ್ಲಿಮರು ತಾವು ಸೇವಿಸುವ ಆಹಾರಕ್ಕೂ ಪ್ರಾಮುಖ್ಯತೆ ನೀಡುತ್ತಾರೆ. ಉಪವಾಸಕ್ಕೂ ಮುನ್ನ ಮತ್ತು ಉಪವಾಸದ ನಂತರ ಏನು ಸೇವಿಸಬೇಕು ಎಂಬುದರ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುತ್ತಾರೆ. ಮಾಂಸಾಹಾರ ಜೊತೆ ಫಲಹಾರಕ್ಕೂ ವಿಶೇಷವಾಗಿ ಗಮನ ನೀಡುತ್ತಾರೆ. ರಂಜಾನ್‌ನಲ್ಲಿ ತಯಾರಿಸಲಾಗುವ ವಿಶೇಷ ಪಾನೀಯ ಅಂದ್ರೆ ಅದು ಮೊಹಬ್ಬತ್ ಕಾ ಶರಬತ್.

ಕಡಿಮೆ ಸಮಯದಲ್ಲಿ ಸಿದ್ಧವಾಗುವ ಈ ಮೊಹಬ್ಬತ್ ಕಾ ಶರಬತ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಒಂದು ಗ್ಲಾಸ್ ಈ ಜ್ಯೂಸ್ ಕುಡಿದ್ರೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಈ ಮೊಹಬ್ಬತ್ ಕಾ ಶರಬತ್ ತಯಾರಿಸುವ ರೆಸಿಪಿ ಇಲ್ಲಿದೆ.

ಹಾಲು: 2 ಕಪ್, ಕಲ್ಲಂಗಡಿ, ಸಕ್ಕರೆ: 1 ಟೀ ಸ್ಪೂನ್, ರೂಹ್‌ಅಫ್ಜಾ (ರೋಸ್ ಸಿರಪ್): 2 ಟೀ ಸ್ಪೂನ್, ಚಿಯಾಬೀಜಗಳು: ಅರ್ಧ ಟೀ ಸ್ಪೂನ್, ಐಸ್ ಕ್ಯೂಬ್ ಮತ್ತು ಜೇನು

ಮೊದಲಿಗೆ ಚಿಯಾಬೀಜಗಳನ್ನು ನೀರಿನಲ್ಲಿ ಹಾಕಿಕೊಂಡು 10 ರಿಂದ 20 ನಿಮಿಷ ನೆನೆಸಿಟ್ಟುಕೊಳ್ಳಬೇಕು. ಮತ್ತೊಂದೆಡೆ ಹಾಲು ಚೆನ್ನಾಗಿ ಬಿಸಿ ಮಾಡಿಕೊಂಡು ತಣ್ಣಗಾಗಲು ಬಿಡಿ. ಹಾಲು ಸಂಪೂರ್ಣವಾಗಿ ತಣ್ಣಗಾದ ನಂತರವೇ ಪಾನೀಯ ತಯಾರಿಸಲು ಬಳಸಬೇಕು.

ಈಗ ಒಂದು ಪಾತ್ರೆಗೆ ಹಾಲು ಹಾಕಿಕೊಳ್ಳಬೇಕು. ಈಗ ಇದಕ್ಕೆ ನೆನೆಸಿಟ್ಟುಕೊಂಡಿರುವ ಚಿಯಾಬೀಜ, ರೂಹ್‌ಅಫ್ಜಾ ಮತ್ತು ಸಕ್ಕರೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಕಲ್ಲಂಗಡಿ ಸೇರಿಸಿಕೊಂಡ್ರೆ ರುಚಿಯಾದ ರಿಫ್ರೆಶ್ ಪಾನೀಯ ಮೊಹಬ್ಬತ್ ಕಾ ಶರಬತ್ ಕುಡಿಯಲು ಸಿದ್ಧವಾಗುತ್ತದೆ. ಕೊನೆಗೆ ಐಸ್‌ ಕ್ಯೂಬ್ ಹಾಕಿಕೊಳ್ಳಿ. ಬೇಕಿದ್ರೆ ಜೇನು ತುಪ್ಪ ಮತ್ತು ಅಲಂಕಾರಕ್ಕೆ ಗುಲಾಬಿ ದಳ ಬಳಸಿಕೊಳ್ಳಬಹುದು.

Source link

Leave a Reply

Your email address will not be published. Required fields are marked *