Headlines

ಲೀವ್ ಇನ್ ರಿಲೇಶನ್‌ಶಿಪ್, ಒಪ್ಪಿಗೆಯ ದೈಹಿಕ ಸಂಪರ್ಕ ಕುರಿತು ಹೈಕೋರ್ಟ್ ಮಹತ್ವದ ಆದೇಶ

ಲೀವ್ ಇನ್ ರಿಲೇಶನ್‌ಶಿಪ್, ಒಪ್ಪಿಗೆಯ ದೈಹಿಕ ಸಂಪರ್ಕ ಕುರಿತು ಹೈಕೋರ್ಟ್ ಮಹತ್ವದ ಆದೇಶ

ಲೀವ್ ಇನ್ ರಿಲೇಶನ್‌ಶಿಪ್, ಒಪ್ಪಿಗೆಯ ದೈಹಿಕ ಸಂಪರ್ಕ ಕುರಿತು ಹೈಕೋರ್ಟ್ ಮಹತ್ವದ ಆದೇಶ

ಲೀವ್ ಇನ್ ರಿಲೇಶನ್‌ಶಿಪ್, ಒಪ್ಪಿಗೆಯ ದೈಹಿಕ ಸಂಪರ್ಕ ಕುರಿತು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಗಂಡ ಹೆಂಡತಿಯಂತೆ ಇದ್ದು ಬಳಿಕ ಅತ್ಯಾ**ರ ಸೇರಿದಂತೆ ಇತರ ನಂಬಿಕೆ ದ್ರೋಹ ಆರೋಪ ಮಾಡುವ ದೂರುದಾರರಿಗೆ ಕೋರ್ಟ್ ಹೇಳಿದ್ದೇನು?

ದೇಶದಲ್ಲಿ ಲೀವ್ ಇನ್ ರಿಲೇಶನ್‌ಶಿಪ್ ಸಾಮಾನ್ಯವಾಗುತ್ತಿದೆ. ನಗರ ಹಾಗೂ ಹಳ್ಳಿಗಳಲ್ಲೂ ಮದುವೆಗೂ ಮೊದಲೇ ಯುವಕ ಯುವತಿ ಜೊತೆಯಾಗಿರುವುದು, ದೈಹಿಕ ಸಂಪರ್ಕ ಬೆಳೆಸುವುದು ಗೌಪ್ಯವಾಗಿ ಉಳಿದಿಲ್ಲ. ಯುವ ಸಮೂಹ ಮದುವೆಗಿಂತ ಹೆಚ್ಚಾಗಿ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿರಲು ಇಷ್ಟಪಡುತ್ತಿದೆ. ಆದರೆ ಈ ರಿಲೇಶನ್‌ಶಿಪ್ ಮುರಿದು ಬಿದ್ದಾಗ ಸಮಸ್ಯೆಗಳು ತೀವ್ರಗೊಳ್ಳುತ್ತದೆ. ಪ್ರಮುಖವಾಗಿ ಅತ್ಯಾ**ರ ಆರೋಪ ಕೇಳಿಬರುತ್ತಿದೆ. ಈ ಕುರಿತ ಪ್ರಕರಣ ವಿಚಾರಣೆ ನಡೆಸಿದ ಕೋಲ್ಕತಾ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಕೋಲ್ಕತಾ ಹೈಕೋರ್ಟ್ ಚೈತಾಲಿ ಚಟರ್ಜಿ ಅವರಿದ್ದ ಏಕಸದಸ್ಯ ಪೀಠ ಈ ಕುರಿತು ಮಹತ್ವದ ಎಚ್ಚರಿಕೆ ನೀಡಿದೆ. ಇಬ್ಬರು ಜೊತೆಯಾಗಿದ್ದು, ಗಂಡ ಹೆಂಡತಿಯಂತೆ ಇದ್ದು ಬಳಿಕ ಮನಸ್ತಾಪದಿಂದ ದೂರವಾದ ಬಳಿಕ ಅತ್ಯಾ**ರ ಆರೋಪ ಮಾಡಿದರೆ ಮಾನ್ಯವಾಗುವುದಿಲ್ಲ. ಭರವಸೆ ನೀಡಿ ಒಪ್ಪಿಗೆ ಮೇರೆ ನಡೆಯುವ ದೈಹಿಕ ಸಂಪರ್ಕ ಅತ್ಯಾ**ರ ಅಲ್ಲ ಎಂದು ಕೋಲ್ಕತಾ ಹೈಕೋರ್ಟ್ ಹೇಳಿದೆ.

ಬಂಗಾಳದ ಮಹಿಳೆಯೊಬ್ಬರು 2017ರಿಂದ 2022ರ ವರಗೆ ತನ್ನ ಜೊತೆಗಿದ್ದು, ನಿರಂತರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮದುವೆಯಾಗುವ ಭರವಸೆಯಿಂದ ದೈಹಿಕ ಸಂಪರ್ಕ ಮಾಡಿದ್ದೇವು. ಇದೀಗ ಮದುವೆಗೆ ನಿರಾಕರಿಸಿದ್ದಾನೆ. ಜೊತೆಗೆ ತಾನು ಗರ್ಭಿಣಿಯಾದಾಗ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಳು. ಈ ಅರ್ಜಿ ವಿಚಾರಣೆ ವೇಳೆ ದೈಹಿಕ ಸಂಪರ್ಕ ಕುರಿತು ಹೈಕೋರ್ಟ್ ಮಹತ್ವದ ಎಚ್ಚರಿಕೆ ನೀಡಿದೆ.

ಮಹಿಳೆ ನೀಡಿದ ದೂರಿನಲ್ಲಿ ಮದುವೆ ಭರವಸೆ ನೀಡಿ ಅತ್ಯಾ**ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಇಲ್ಲಿ ಜೋಡಿಗಳು 5 ವರ್ಷ ಜೊತೆಯಾಗಿದ್ದರು. ಎಲ್ಲೆಡೆ ಸುತ್ತಾಡಿದ್ದಾರೆ, ಜೊತೆಯಾಗಿ ತಂಗಿದ್ದಾರೆ, ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಸಂಬಂಧದ ಆರಂಭದಿಂದಲೇ ಮೋಸದ ಉದ್ದೇಶ ಇದ್ದರೆ 5 ವರ್ಷಗಳ ಕಾಲ ಜೊತೆಯಾಗಿ ಇದ್ದದ್ದು ಹೇಗೆ? ಇದನ್ನು ಮೋಸದ ಭರವಸೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಗರ್ಭಪಾತ ಮಾಡಿಸಿಕೊಳ್ಳುವಾಗ ಮಹಿಳೆ ಸ್ವ ಇಚ್ಚೆಯಿಂದ ಸಹಿ ಹಾಕಿರುವ ದಾಖಲೆ ಇದೆ. ಯುವಕ ಗಾರ್ಡಿಯನ್ ಆಗಿ ಸಹಿ ಮಾಡಿದ್ದಾನೆ. ಸುದೀರ್ಘ ಕಾಲ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಸಂಬಂಧ ಮುರಿದು ಬಿದ್ದಾಗ, ಮದುವೆಯಾಗದೇ ಇದ್ದಾಗ ಅತ್ಯಾ**ರ ಆರೋಪ ಮಾಡುವುದು, ಪರಿಗಣಿಸುವುದು ಕಾನೂನಿನ ದುರಪಯೋಗ ಎಂದು ಕೋಲ್ಕತಾ ಹೈಕೋರ್ಟ್ ಹೇಳಿದೆ.

ಮಹಿಳೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಯುವಕನ ಮೇಲಿನ ಆರೋಪ ರದ್ದುಗೊಳಿಸಿದೆ. ವಯಸ್ಕರು ಒಪ್ಪಿಗೆಯಿಂದ ಜೊತೆಯಾಗಿದ್ದು, ಗಂಡ ಹೆಂಡತಿಯಂತೆ ನಡೆದುಕೊಂಡು ಬಳಿಕ ಯಾವುದೋ ಕಾರಣಕ್ಕೆ ಬೇರೆ ಬೇರೆಯಾಗಿ ಅತ್ಯಾ**ರ ಆರೋಪವನ್ನು ಪರಿಗಣಿಸಲಾಗುವುದಿಲ್ಲ ಎಂದಿದೆ.

ಆರೋಪಿ ಮೇಲಿನ ಕೇಸ್ ರದ್ದು

Source link

Leave a Reply

Your email address will not be published. Required fields are marked *