Headlines

ಮದುವೆ ದುಡ್ಡಲ್ಲಿ ಇನ್ನೊಂದು ಜೀವಕ್ಕೆ ಬೆಳಕು ನೀಡಿ, ಸಿಂಪಲ್ಲಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಗಳು

ಮದುವೆ ದುಡ್ಡಲ್ಲಿ ಇನ್ನೊಂದು ಜೀವಕ್ಕೆ ಬೆಳಕು ನೀಡಿ, ಸಿಂಪಲ್ಲಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಗಳು

ಮದುವೆ ದುಡ್ಡಲ್ಲಿ ಇನ್ನೊಂದು ಜೀವಕ್ಕೆ ಬೆಳಕು ನೀಡಿ, ಸಿಂಪಲ್ಲಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಗಳು

Indian Wedding: ಮದುವೆ ಅಂದರೆ ಶೋ ಆಫ್, ಅದ್ಧೂರಿತನ ಎನ್ನುವ ಜೋಡಿಗಳ ನಡುವೆ, ಸರಳವಾಗಿ ಮದುವೆಯಾಗಿ, ಮದುವೆಗಿಟ್ಟ ಹಣದಲ್ಲಿ ಹಲವು ಜೀವಗಳಿಗೆ ನೆರವಾದ ಜೋಡಿಗಳು ನಮ್ಮ ನಡುವೆ ಅದೆಷ್ಟೋ ಇವೆ. ಇಲ್ಲಿವೆ ನೋಡಿ ಅಂತಹ ಸುಂದರ ಜೋಡಿಗಳ ವಿವರ.

ಮದುವೆ ಅಂದ್ರೆ, ಹೆಚ್ಚಾಗಿ ಭವ್ಯತೆಯ ಮೇಲೆ ಕೇಂದ್ರೀಕರಿಸುವ ಜಗತ್ತಿನಲ್ಲಿ, ಈ ಜೋಡಿಗಳು ಹೆಚ್ಚು ಹಣ ಖರ್ಚು ಮಾಡುವುದನ್ನು ಆ ಹಣದಿಂದ ಸಂತ್ರಸ್ತರಿಗೆ ನೆರವು, ಕ್ಯಾನ್ಸರ್ ರೋಗಿಗಳಿಗೆ ನೆರವು, ಮಕ್ಕಳ ದತ್ತು ಸ್ವೀಕಾರ, ಜೀರೋ ವೇಸ್ಟ್ ವೆಡ್ಡಿಂಗ್ ಎನ್ನುವ ಸಮಾಜಕ್ಕೆ ಉಪಕಾರಿಯಾಗುವಂತಹ ಯೋಜನೆಗಳನ್ನು ರೂಪಿಸಿ, ಎಲ್ಲರ ನಡುವೆ ವಿಭಿನ್ನವಾಗಿ ನಿಂತರು.

ಇಡುಕ್ಕಿಯ ಜೋಡಿಗಳಾದ ಕಲೇಶ್ ಕುಮಾರ್ ಮತ್ತು ಸುಜಿತಾ ತಮ್ಮ ಮದುವೆಯ ಉಡುಗೊರೆಯನ್ನು ವಯನಾಡಿನಲ್ಲಿ ಭೂಕುಸಿತದಿಂದ ತೊಂದರೆಗೊಳಗಾದ ಜನರಿಗೆ ನೆರವು ನೀಡಲು ಉಪಯೋಗಿಸಿದರು.

ಕಾನ್ಪುರದ ಜೋಡಿಗಳಾದ ಅಮಿತ್ ಮತ್ತು ದೀಕ್ಷಾ ಯಾದವ್ ತಮ್ಮ ಮದುವೆ ದಿನ 11 ಅನಾಥ ಮಕ್ಕಳನ್ನು ದತ್ತು ಪಡೆದು, ಅವರ ವಿದ್ಯಾಭ್ಯಾಸದ ಖರ್ಚು ಭರಿಸುವುದಾಗಿ ಶಪಥ ಮಾಡಿದರು.

ಬೆಂಗಳೂರಿನ ಡಾ ಪೂರ್ವಿ ಭಟ್ ಮತ್ತು ಶಮಂತ್ ಇವರು ಜೀರೋ ವೇಸ್ಟ್ ಡೆಕೋರೆಶನ್ ಮಾಡಿ ಮದುವೆಯಾದರು. ಇವರ ಮದುವೆ ಮಂಟಪ ಕಬ್ಬಿನ ಜಲ್ಲೆಯಿಂದ ಮಾಡಾಲಾಗಿತ್ತು. ಮದುವೆಯ ಪೂರ್ತಿ ಡೆಕೊರೇಶನ್ ಎಲ್ಲಾ ಸಾಮಾಗ್ರಿಗಳು ಜೀರೋ ವೇಸ್ಟ್ ಆಗಿತ್ತು.

ಮಧುರೈನ ಜೋಡಿಗಳಾದ ಹರಿಹರನ್ ಮತ್ತು ತೇನ್ ಮೋಳಿ ಮುಯ್ಯಿಗೆ ಬಂದ ಹಣದಲ್ಲಿ 1.91 ಲಕ್ಷ ರೂಪಾಯಿಯನ್ನು ಟರ್ಮಿನಲ್ ಕ್ಯಾನ್ಸರ್ ರೋಗಿಗಳ ಆರೋಗ್ಯ ಮತ್ತು ಆರೈಕೆ ಮತ್ತು ಆಹಾರಕ್ಕಾಗಿ ದೇಣಿಗೆ ನೀಡಿದರು.

ಸಿವಿಲ್ ಸರ್ವೀನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಶಿವನ್ ತ್ಯಾಗಿ (ಐಪಿಒಎಸ್) ಮತ್ತು ಆರ್ಯ ಆರ್ ನಾಯರ್ (ಐಆರ್’ಎಸ್) ಸರಳ ವಿವಾಹವಾಗಿ ಹಣವನ್ನು 20 ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟರು.

ಅಹ್ಮದಾಬಾದಿನ ಜೋಡಿಗಳಾದ ಅಮರ್ ಕಲಾಮ್ಕರ್ ಮತ್ತು ರಾಣಿ ತಮ್ಮ ಮದುವೆಯ ಅತಿಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದಂತಹ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲು ಸಲಹೆ ನೀಡಿದರು. ಆ ಮೂಲಕ ಅಗತ್ಯ ಇರುವ ಮಕ್ಕಳಿಗೆ ಉಚಿತ ಲೈಬ್ರೆರಿ ಮಾಡುವ ಮೂಲಕ ನೆರವಾದರು.

ಐಆರ್’ಎಸ್ ಜೋಡಿಗಳಾದ ಸೀತಾ ಕೃಷ್ಣಮೂರ್ತಿ ಮತ್ತು ಚಂದನ್ ಕುಮಾರ್ ಜೋಡಿ ತಮ್ಮ ಮನೆಯ ಪೂಜಾ ಕೋಣೆಯಲ್ಲಿ ಮದುವೆಯಾಗಿ, ಮದುವೆಯ ಹಣದಲ್ಲಿ 20 ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದರು.

ಪೊಲೀಸ್ ಜೋಡಿಗಳಾದ ಮನೋಜ್ ಪಾಟೀಲ್ ಮತ್ತು ಸರಿತಾ ಲಾಯ್ಕರ್ ತಮ್ಮ ಮದುವೆಯ ಹಣವನ್ನು ತಮ್ಮ ಗ್ರಾಮದ ಪ್ರೌಢ ಶಾಲೆ ಮತ್ತು ಸಾರ್ವಜನಿಕ ಲೈಬ್ರೆರಿಗೆ ದಾನ ನೀಡಿದರು.

ಬಬ್ಲು ಚೌಧರಿ ಮತ್ತು ಭೂಮಿಕಾ ಪಾಂಡೆ ತಮ್ಮ ಹಣವನ್ನು ಉಳಿಸಿ, ವಿಧಾರ್ಥದ ರೈತ ವಿಧವೆಯರಿಗೆ ಹಣದ ನೆರವನ್ನು ನೀಡಿದರು.

Source link

Leave a Reply

Your email address will not be published. Required fields are marked *