ನವದೆಹಲಿ, ಫೆಬ್ರವರಿ 18: ಹತ್ತು ರಾಜ್ಯಗಳ 37 ರಾಜ್ಯಸಭಾ(ರಾಜ್ಯಸಭೆ) ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ಮಹಾರಾಷ್ಟ್ರ, ತಮಿಳುನಾಡು, ಬಿಹಾರ ಸೇರಿದಂತೆ 10 ರಾಜ್ಯಗಳ 37 ಸ್ಥಾನಗಳಿಗೆ ಚುನಾವಣೆ. ಫೆಬ್ರವರಿ 26 ರಂದು ಚುನಾವಣಾ ಆಯೋಗದಿಂದ ಅಧಿಕೃತ ಪ್ರಕಟಣೆ ಪ್ರಕಟ. ಮಾರ್ಚ್ 5 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಲಿದೆ. ಮಾರ್ಚ್ 6ಕ್ಕೆ ನಾಮಪತ್ರ ಪರಿಶೀಲನೆ.
ಮಾರ್ಚ್ 16 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ. ಮಾರ್ಚ್ 16 ರಂದು ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ, ಫಲಿತಾಂಶ ಪ್ರಕಟ. ಮಹಾರಾಷ್ಟ್ರದ 7, ತಮಿಳುನಾಡಿನ 6 ಹಾಗೂ ಬಿಹಾರದ 5 ಸ್ಥಾನಗಳಿಗೆ ಚುನಾವಣೆ.
ಭಾರತದ ಚುನಾವಣಾ ಆಯೋಗವು 10 ರಾಜ್ಯಗಳಿಂದ 37 ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯಗಳ ಪರಿಷತ್ತಿಗೆ (ರಾಜ್ಯಸಭೆ) ದ್ವೈವಾರ್ಷಿಕ ಚುನಾವಣೆಗಳನ್ನು ಘೋಷಿಸಿದೆ, 16 ಮಾರ್ಚ್ 2026 ರಂದು ಮತದಾನವನ್ನು ನಿಗದಿಪಡಿಸಲಾಗಿದೆ. ಚುನಾವಣಾ ಪ್ರಕ್ರಿಯೆಯು 26 ಫೆಬ್ರವರಿ 2026 ರಂದು ಅಧಿಸೂಚನೆಗಳ ಸಂಚಿಕೆಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಎಣಿಕೆ… pic.twitter.com/4rmAPlu4Zi
— ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (@PTI_News) ಫೆಬ್ರವರಿ 18, 2026
ಅಸ್ಸಾಂ, ಹರಿಯಾಣ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲೂ ತೆರವಾಗಲಿರುವ ಸ್ಥಾನಗಳಿಗೆ ಚುನಾವಣೆ. ಮಾರ್ಚ್ 20 ರ ಒಳಗೆ ಇಡೀ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗದ ಗಡುವು ನೀಡಿದೆ. ಮತಪತ್ರದಲ್ಲಿ ಆದ್ಯತೆ ಗುರುತಿಸಲು ಚುನಾವಣಾಧಿಕಾರಿ ನೀಡುವ ವಿಶೇಷ ವೈಲೆಟ್ ಪೆನ್ ಬಳಕೆ ಕಡ್ಡಾಯವಾಗಿರಲಿದೆ. 37 ರಾಜ್ಯಸಭಾ ಸದಸ್ಯರ ಅವಧಿ ಏಪ್ರಿಲ್ 2026 ರಲ್ಲಿ ಮುಕ್ತಾಯಗೊಳ್ಳಲಿದೆ, ಚುನಾವಣೆ ಅನಿವಾರ್ಯವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ