ಬಾಲಿವುಡ್ (ಬಾಲಿವುಡ್) ಖ್ಯಾತ ನಟ ರಾಜ್‌ಪಾಲ್ ಯಾದವ್ 9 ಕೋಟಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಅವರು ಜೈಲು ಪಾಲಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಸೋನು ಸೂದ್ ಸೇರಿದಂತೆ ಇನ್ನೂ ಕೆಲವರು ರಾಜ್ಪಾಲ್ ಯಾದವ್ ಅವರ ನೆರವಿಗೆ ಧಾವಿಸಿದ್ದು, ರಾಜ್ಪಾಲ್ ಯಾದವ್ ಅವರ ಸಾಲದ ಹಣ ನೀಡಿ ಅವರನ್ನು ಬಿಡಿಸಿಕೊಳ್ಳಲು ಮುಂದಾಗಿದ್ದಾರೆ. ಇವುಗಳ ನಡುವೆ ರಾಜ್ಪಾಲ್ ಯಾದವ್ ಅವರಿಗೆ ನ್ಯಾಯಾಲಯದಿಂದಲೇ ತಾತ್ಕಾಲಿಕ ಬಿಡುಗಡೆ ದೊರಕಿದೆ.
ರಾಜ್‌ಪಾಲ್ ಯಾದವ್ ಅವರ ಸಹೋದರ ಪುತ್ರಿಯ ಮದುವೆ ಇತ್ತು, ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ರಾಜ್‌ಪಾಲ್ ಯಾದವ್ ಅವರು ತಾತ್ಕಾಲಿಕ ಬಿಡುಗಡೆಯನ್ನು ಕೋರಿದ್ದರು. ಅದರಂತೆ ಇದೀಗ ನ್ಯಾಯಾಲಯವು ರಾಜ್ಪಾಲ್ ಯಾದವ್ ಅವರಿಗೆ ತಾತ್ಕಾಲಿಕ ಬಿಡುಗಡೆ ಮಂಜೂರು ಮಾಡಿದ್ದು, ಮಾರ್ಚ್ 18 ರ ವರೆಗೆ ಅವರು ಜೈಲಿನಿಂದ ಹೊರಗೆ ಇರಲಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಮತ್ತೆ ತಿಹಾರ್ ಜೈಲು ಸೇರಬೇಕಾಗಿದೆ. ರಾಜ್ಪಾಲ್ ಯಾದವ್ ಅವರಿಗೆ ಹಲವು ಷರತ್ತುಗಳ ಮೇಲೆ ಈ ಮಧ್ಯಂತರ ಜಾಮೀನು ನೀಡಲಾಗಿದೆ.
ಜೈಲಿನಿಂದ ಹೊರಬಂದ ಬಳಿಕ ಮಾಧ್ಯಮಗಳ ಬಳಿ ಮಾತನಾಡುತ್ತಿರುವ ರಾಜ್‌ಪಾಲ್ ಯಾದವ್, ‘ನನಗೆ ಬೆಂಬಲವಾಗಿ ನಿಂತಿರುವ ಎಲ್ಲರಿಗೂ ಧನ್ಯವಾದ, ನನ್ನ ದೇಶದ ಜನ ಮತ್ತು ಬೌಲ್ಡ್ ಮಂದಿ ನನ್ನನ್ನು ಪ್ರೀತಿಸಿದ್ದಾರೆ. ಅವರ ಪ್ರೀತಿಯಿಂದ ನಾನು ಧೈರ್ಯವಾಗಿದ್ದೇನೆ. ಕಳೆದ ಹತ್ತು ವರ್ಷಗಳಿಂದ ನಾನು ನ್ಯಾಯಾಲಯವನ್ನು ಗೌರವಿಸುತ್ತಾ ಬಂದಿದ್ದೇನೆ. ಎಲ್ಲೆಲ್ಲಿ ನ್ಯಾಯಾಲಯ ನಿರ್ಧರಿಸಿದೆಯೋ ಅಲ್ಲೆಲ್ಲ ನಾನು ಹಾಜರಿ ಹಾಕಿದ್ದೇನೆ. ಈಗ ನನ್ನ ಮನವಿಯನ್ನು ಪುರಸ್ಕರಿಸಿ ನನಗೆ ಅವಕಾಶವನ್ನು ನೀಡಲಾಯಿತು ಧನ್ಯವಾದ’ ರಾಜಪಾಲ್ ಯಾದವ್.
ಇದನ್ನೂ ಓದಿ:ದಕ್ಷಿಣದ ಆ ನಟ ನಟಿಯರನ್ನು ತೆರೆಮೇಲೂ ಕೀಳಾಗಿ ಕಾಣಲು ಇಷ್ಟಪಡುವುದಿಲ್ಲ; ಪ್ರಮುಖ ನಟಿ
2010 ರಲ್ಲಿ ರಾಜ್ಪಾಲ್ ಯಾದವ್ ಅವರು ಸಿನಿಮಾ ನಿರ್ಮಾಣಕ್ಕಾಗಿ ದೆಹಲಿ ಮುರಳಿ ಪ್ರಾಜೆಕ್ಟ್ ಲಿಮಿಟೆಡ್ ವತಿಯಿಂದ ಐದು ಕೋಟಿ ರೂಪಾಯಿ ಸಾಲ ನೀಡಿದ್ದರು. ಆದರೆ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು, ಭಾರಿ ಮೊತ್ತದ ಹಣ ನಷ್ಟವಾಯಿತು. ರಾಜ್‌ಪಾಲ್ ಯಾದವ್ ಸಾಲ ಮರುಪಾವತಿ ಮಾಡಲಿಲ್ಲ, ಅವರು ಫೈನ್ಯಾನ್ಸಿಯರ್‌ಗೆ ಕೊಟ್ಟಿದ್ದ ಚೆಕ್‌ಗಳು ಬೌನ್ಸ್ ಆದವು. ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 9 ಕೋಟಿ ರೂಪಾಯಿ ಹಣ ಮರುಪಾವತಿಸಬೇಕು ಅಥವಾ ಜೈಲು ಶಿಕ್ಷೆ ಅನುಭವಿಸಬೇಕು ಎಂದಾಯ್ತು. ಆದರೆ ತಮ್ಮ ಬಳಿ ಅಷ್ಟೊಂದು ಹಣ ಇಲ್ಲ ಎಂದ ರಾಜ್ಪಾಲ್ ಯಾದವ್ ಜೈಲು ಸೇರಿದ್ದರು. ಈಗ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಂದು ತಿಂಗಳ ಮಧ್ಯಂತರ ಜಾಮೀನು ಸಿಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ