ಬಂಗಾರದ ಅಂಗಡಿ ಮಾಲೀಕ ಜಿತೇಂದ್ರಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ
ಮಂಡ್ಯ, ಫೆಬ್ರವರಿ 18: ಸಾಲಗಾರರು ಮತ್ತು ಚಿನ್ನ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು ತನ್ನ ಮೇಲೆ ಆಯಸಿಡ್ ದಾಳಿ ನಡೆಸಿ ಬಂಗಾರದ ಅಂಗಡಿಯ ದರೋಡೆ ಎಂದು ಸಿನಿಮಾ ಮಾದರಿ ಕತೆ ಹೆಣೆದಿದ್ದ ಚಿನ್ನದ ಅಂಗಡಿ ಮಾಲೀಕನಿಗೆ ತಾನೇ ಪೊಲೀಸರ ಬಳಿ ಲಾಕ್ ಆಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ನಡೆದಿದೆ. ಮಹಾಲಕ್ಷ್ಮೀ ಜ್ಯೂವೆಲರಿ ಶಾಪ್ ನಡೆಸುತ್ತಿದ್ದ ಜಿತೇಂದ್ರ ಆರೋಪಿ ಈತನ ವಿರುದ್ಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕತೆ ಹೇಳಿ ಸಿಕ್ಕಿಬಿದ್ದ ಆರೋಪಿ
ರಾಜಸ್ಥಾನದಿಂದ ಬಂದು ಕಳೆದ ಹಲವು ವರ್ಷಗಳಿಂದ ಕ್ಯಾತನಹಳ್ಳಿಯಲ್ಲಿ ಜ್ಯುವೆಲರಿ ಶಾಪ್ ಇಟ್ಟುಕೊಂಡಿದ್ದ ಜಿತೇಂದ್ರ ಸಿಂಗ್, ದುಷ್ಕರ್ಮಿಗಳು ತಮ್ಮ ಮೇಲೆ ದಾಳಿ ನಡೆಸಿ ಬಂಗಾರದ ಅಂಗಡಿ ದೋಚಿದ್ದಾರೆ ಎಂದು ಆರೋಪಿಸಿದ್ದಾರೆ. ಅಂಗಡಿಯಲ್ಲಿದ್ದ 170 ಗ್ರಾಂ ಚಿನ್ನ, 8 ಕೆಜಿ ಬೆಳ್ಳಿ ದರೋಡೆ ಆಗಿದೆ ಎಂದು ತಿಳಿಸಿದ್ದರು. ಈತ ಆಸ್ಪತ್ರೆ ಸೇರಿದ ಹಿನ್ನೆಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆಗಿಳಿದಿದ್ದರು. ಈ ವೇಳೆ ಜಿತೇಂದ್ರ ಸಿಂಗ್ ಮುಖಕ್ಕೆ ಮಾತ್ರ ಗಾಯವಾಗಿರೋದು ಪೊಲೀಸರ ಅನುಮಾನಕ್ಕೆ ಕಾರಣವಾಗದೆ. ಆಯಸಿಡ್ ಎರಚಿ ಆರೋಪಿಗಳು ದರೋಡೆ ನಡೆಸಿದ್ದರೆ ಈತನ ಕಣ್ಣಿಗೂ ಹಾನಿ ಮಾಡಬೇಕಿತ್ತು, ಆದರೆ ಆಗಿರಲಿಲ್ಲ. ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಇದನ್ನೂ ಓದಿ: ಕಾರ್ಖಾನೆ ಸ್ಥಳಾಂತರದ ವೇಳೆ ಅವಘಡ; ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವು
ಗಗನಕ್ಕೇರಿದ ಚಿನ್ನದ ಸಾಲ ವಾಪಸ್ ಕೊಡದಿರಲು ಮತ್ತು ಚಿನ್ನ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು ಜಿತೇಂದ್ರ ಪ್ಲ್ಯಾನ್ ಮಾಡಿದ್ದಾರೆ. ಚಿನ್ನಕ್ಕೆ ಬಳಸುವ ರಾಸಾಯನಿಕ ಮುಖಕ್ಕೆ ಬಳಿದುಕೊಂಡಿದ್ದ ಈತ ಅಂಗಡಿ ದರೋಡೆ ನಡೆದಿದೆ. ಆರೋಪಿಗಳು ಸಿಸಿಟಿವಿ DVRನೂ ಬಿಡದೆ ಕದ್ದು ಎಸ್ಕೇಪ್ ಆಗಿದ್ದಾರೆ ಎಂದಿದ್ದ. ಡ್ರಾಮಾ ಮಾಡಿ ಎಲ್ಲರನ್ನು ನಂಬಿಸಿ ಕೆಲ ದಿನಗಳ ಬಳಿಕ ಅಂಗಡಿ ಮುಚ್ಚಿಕೊಂಡು ರಾಜಸ್ಥಾನಕ್ಕೆ ಮರಳಲು ಪ್ಲ್ಯಾನ್ ಮಾಡಿದ್ದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಸತ್ಯಾಸತ್ಯತೆ ಬಯಲಿಗೆಳೆದ ಪೊಲೀಸರು ಚಿನ್ನದಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 11:57 am, ಬುಧವಾರ, 18 ಫೆಬ್ರವರಿ 26