
ಟೊಮೆಟೊ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ನೇರವಾಗಿ ಗ್ಯಾಸ್ ಉರಿಯಲ್ಲಿ ಅಥವಾ ತವದ ಮೇಲೆ ಸುಟ್ಟುಕೊಳ್ಳಿ. ಸಿಪ್ಪೆ ಕಪ್ಪಾಗಿ ಒಳಗಿನಿಂದ ಮೆತ್ತಗಾದಾಗ ಕೆಳಗಿಳಿಸಿ. ಸ್ವಲ್ಪ ತಣ್ಣಗಾದ ಮೇಲೆ ಟೊಮೆಟೊದ ಸುಟ್ಟ ಸಿಪ್ಪೆಯನ್ನು ತೆಗೆಯಿರಿ. ಎಲ್ಲಾ ಸಾಮಗ್ರಿಯನ್ನು ಮಿಕ್ಸರ್‌ನಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ಬೇಕಿದ್ದರೆ ಒರಳುಗಲ್ಲಿನ ಮೇಲೆ ರುಬ್ಬಿ, ಆಗ ರುಚಿ ಇನ್ನೂ ಹೆಚ್ಚುತ್ತದೆ.
ಒಗ್ಗರಣೆ
ಮೇಲೆ 1 ಚಮಚ ಹಸಿ ಸಾಸಿವೆ ಎಣ್ಣೆ ಹಾಕಿ ಮತ್ತು ಹಸಿರು ಕೊತ್ತಂಬರಿ ಸೊಪ್ಪನ್ನು ಬೆರೆಸಿ.