ಗೊಂದಲದ ಗೂಡಾದ ‘ಡಾನ್ 3’ ಸಿನಿಮಾ; ಮಧ್ಯಸ್ಥಿಕೆ ವಹಿಸಿದ ಸ್ಟಾರ್ ಹೀರೋ

ಗೊಂದಲದ ಗೂಡಾದ ‘ಡಾನ್ 3’ ಸಿನಿಮಾ; ಮಧ್ಯಸ್ಥಿಕೆ ವಹಿಸಿದ ಸ್ಟಾರ್ ಹೀರೋ


‘ಡಾನ್ 3’ ಸಿನಿಮಾ ಘೋಷಣೆ ಆಗಿ ಸಾಕಷ್ಟು ಸಮಯ ಕಳೆದಿದೆ. ಆದರೆ, ಈವರೆಗೆ ಚಿತ್ರದ ಶೂಟಿಂಗ್ ಶುರುವಾಗಿಲ್ಲ. ಇದಕ್ಕೆ ಕಾರಣವೂ ಇದೆ. ನಿರ್ದೇಶಕ ಫರ್ಹಾನ್ ಅಖ್ತರ್ ಹಾಗೂ ಡಾನ್ ಪಾತ್ರ ಮಾಡಬೇಕಿರೋ ರಣವೀರ್ ಸಿಂಗ್ ಮಧ್ಯೆ ಯಾವುದೂ ಸರಿ ಇಲ್ಲ. ರಣವೀರ್ ಸ್ಕ್ರಿಪ್ಟ್ ವಿಷಯದಲ್ಲಿ ಖುಷಿಯಾಗಿಲ್ಲ. ಸಂಭಾವನೆ ವಿಷಯದಲ್ಲೂ ಕಿರಿಕ್ ಆಗಿದೆ. ಹೀಗಿರುವಾಗಲೇ ‘ಡಾನ್ 3’ ಸಿನಿಮಾದ ವಿವಾದ ಬಗೆಹರಿಸಲು ಅಮೀರ್ ಖಾನ್ ಆಗಮಿಸಿದ್ದಾರೆ.

ಚಿತ್ರರಂಗದ ಬಗ್ಗೆ ಅಮೀರ್ ಖಾನ್ ಹೆಚ್ಚು ಕಾಳಜಿ ವಹಿಸುತ್ತಾರೆ. ಏನೇ ಆದರೂ ಸರಿ ಒಳ್ಳೆಯ ಸಿನಿಮಾ ಬರಬೇಕು ಎಂಬುದು ಅವರ ಗುರಿ. ‘ಡಾನ್ 3’ ಸಿನಿಮಾ ಸೆಟ್ಟೇರಿದರೆ ಒಂದಷ್ಟು ಮಂದಿ ಕೆಲಸ ಮಾಡುತ್ತಾರೆ. ಸಿನಿಮಾ ಹಿಟ್ ಆದರೆ ಬಾಲಿವುಡ್ ನಲ್ಲಿ ಒಂದೊಳ್ಳೆಯ ಬಿಸ್ನೆಸ್ ಆಗುತ್ತದೆ ಎಂಬುದು ಆಮಿರ್ ಉದ್ದೇಶ. ಹೀಗಾಗಿ, ಸಿನಿಮಾ ನಿಲ್ಲಬಾರದು ಎಂಬ ಉದ್ದೇಶವನ್ನು ಅವರು ಹೊಂದಿದ್ದಾರೆ.

‘ಡಾನ್ 3’ ಸಿನಿಮಾ ಸೆಟ್ಟೇರುವ ಮೊದಲೇ ಸಾಕಷ್ಟು ಹೂಡಿಕೆ ಮಾಡಲಾಗಿದೆ. ಸಿನಿಮಾದ ಸ್ಕ್ರಿಪ್ಟ್ ಕೆಲಸ, ಟೀಸರ್ ಶೂಟ್ ಸೇರಿದಂತೆ ಸಾಕಷ್ಟು ಖರ್ಚು ಮಾಡಲಾಗಿದೆ. ಈಗ ರಣವೀರ್ ಸಿಂಗ್ ಸಿನಿಮಾದಿಂದ ಹೊರ ನಡೆದಿದ್ದಾರೆ, ಅವರಿಗೆ 40 ಕೋಟಿ ರೂಪಾಯಿ ಪರಿಹಾರ ಎಂದು ಫರ್ಹಾನ್ ಬೇಡಿಕೆ ಇಟ್ಟಿದ್ದಾರೆ.

ಈ ಮಧ್ಯೆ ರಣವೀರ್ ಸಿಂಗ್ ಅವರು ಹೊಸ ಆರೋಪ ಮಾಡಿದ್ದಾರೆ. ‘ಫರ್ಹಾನ್ ಅಖ್ತರ್‌ಗೆ ಡಾನ್ ಪಾತ್ರದಲ್ಲಿ ಹೃತಿಕ್ ಆಯ್ಕೆ ಮಾಡಿಕೊಳ್ಳುವ ಆಲೋಚನೆ ಇದೆ’. ಆದರೆ, ಹೃತಿಕ್ ಈ ವಿಷಯವನ್ನು ಅಲ್ಲಗಳೆದಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ‘ಡಾನ್ 3’ ಗೊಂದಲದ ಗೂಡಾಗಿದೆ.

ಸದ್ಯದ ಮಾಹಿತಿ ಪ್ರಕಾರ ಅಮೀರ್ ಖಾನ್ ಅವರು ರಣವೀರ್ ಹಾಗೂ ಫರ್ಹಾನ್ ಒಡೆತನದ ಎಕ್ಸೆಲ್ ಎಂಟರ್ ಟೇನ್ಮೆಂಟ್ ಸಮಸ್ಯೆ ಬಗೆಹರಿಸುವ ಪ್ರಯತ್ನದಲ್ಲಿದ್ದಾರೆ. ಆಮಿರ್ ಮನೆಯಲ್ಲಿ ಸಿನಿಮಾಗೆ ಸಂಬಂಧಿಸಿದವರನ್ನು ಕರೆಸಿ ಸಭೆ ಆಯೋಜನೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಸಿಕ್ಕರೆ ಒಂದೊಳ್ಳೆಯ ಸಿನಿಮಾ ನಿರೀಕ್ಷಿಸಬಹುದು.

ಇದನ್ನೂ ಓದಿ: ‘ಧುರಂಧರ್’ ಫಲಿತಾಂಶದ ಮೇಲೆ ನಿರ್ಧಾರ ನಿರ್ಧಾರ ‘ಡಾನ್ 3’ ಸಿನಿಮಾ ಭವಿಷ್ಯ

ಸದ್ಯದ ಬೆಳವಣಿಗೆಯಿಂದ ಶಾರುಖ್ ಖಾನ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಏಕೆಂದರೆ, ಶಾರುಖ್ ಖಾನ್ ಅವರು ‘ಡಾನ್’ ಹಾಗೂ ‘ಡಾನ್ 2’ ಸಿನಿಮಾಗಳಲ್ಲಿ ನಟಿಸಿದ್ದರು. ‘ಡಾನ್ 3’ ಚಿತ್ರದಲ್ಲಿ ಅವರಿಲ್ಲ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *