ಬೆಂಗಳೂರಿನಲ್ಲಿ ಆನ್‌ಲೈನ್ ಬಾಡಿಗೆ ಮನೆ ಹುಡುಕುವವರೇ ಹುಷಾರ್, ಸೈಬರ್ ವಂಚಕರ ಜಾಲಕ್ಕೆ ನೀವೂ ಒಳಗಾಗೋದು ಪಕ್ಕಾ! | Bengaluru Online Rental Scam Cyber Fraudsters Use Fake Luxury Flat Listings Doctor Cheated Online House Rental Fraud

ಬೆಂಗಳೂರಿನಲ್ಲಿ ಆನ್‌ಲೈನ್ ಬಾಡಿಗೆ ಮನೆ ಹುಡುಕುವವರೇ ಹುಷಾರ್, ಸೈಬರ್ ವಂಚಕರ ಜಾಲಕ್ಕೆ ನೀವೂ ಒಳಗಾಗೋದು ಪಕ್ಕಾ! | Bengaluru Online Rental Scam Cyber Fraudsters Use Fake Luxury Flat Listings Doctor Cheated Online House Rental Fraud



ಬೆಂಗಳೂರಿನಲ್ಲಿ ಆನ್‌ಲೈನ್ ಬಾಡಿಗೆ ಮನೆ ಹುಡುಕುವವರೇ ಹುಷಾರ್, ಸೈಬರ್ ವಂಚಕರ ಜಾಲಕ್ಕೆ ನೀವೂ ಒಳಗಾಗೋದು ಪಕ್ಕಾ! | Bengaluru Online Rental Scam Cyber Fraudsters Use Fake Luxury Flat Listings Doctor Cheated Online House Rental Fraud

ಬೆಂಗಳೂರಿನಲ್ಲಿ ಆನ್‌ಲೈನ್ ಬಾಡಿಗೆ ಮನೆ ಹುಡುಕುವವರನ್ನು ಗುರಿಯಾಗಿಸಿ ಸೈಬರ್ ವಂಚಕರು ಎಐ ತಂತ್ರಜ್ಞಾನ ಬಳಸಿ ವಂಚಿಸುತ್ತಿದ್ದಾರೆ. ಐಷಾರಾಮಿ ಫ್ಲಾಟ್‌ಗಳ ನಕಲಿ ಫೋಟೋಗಳನ್ನು ಬಳಸಿ,  ವಿಸಿಟರ್ ಪಾಸ್’ ಹಾಗೂ ಅಡ್ವಾನ್ಸ್ ನೆಪದಲ್ಲಿ ಹಣ ಪಡೆದು ಮೋಸ ಮಾಡುತ್ತಿದ್ದು, ವೈದ್ಯೆಯೊಬ್ಬರು ಹಣ ಕಳೆದುಕೊಂಡಿದ್ದಾರೆ.

ಬೆಂಗಳೂರು: ನಗರದಲ್ಲಿ ಆನ್‌ಲೈನ್ ಮೂಲಕ ಬಾಡಿಗೆ ಮನೆ ಹುಡುಕುವವರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ಹೊಸ ತಂತ್ರಜ್ಞಾನದೊಂದಿಗೆ ವಂಚನೆಗೆ ಇಳಿಯುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಐಷಾರಾಮಿ ಮನೆಗಳು ಹಾಗೂ ಫ್ಲಾಟ್‌ಗಳನ್ನು ಹುಡುಕುವವರನ್ನೇ ಸುಲಭವಾಗಿ ಬಲೆಗೆ ಬೀಳಿಸುವ ರೀತಿಯಲ್ಲಿ ವಂಚಕರು ತಮ್ಮ ಕಾರ್ಯವೈಖರಿಯನ್ನು ರೂಪಿಸಿಕೊಂಡಿದ್ದಾರೆ. ಇದೇ ರೀತಿ ವೈದ್ಯೆಯೊಬ್ಬರು ಮೋಸ ಹೋಗಿರುವ ಘಟನೆ ನಡೆದಿದೆ.

ವಂಚಕರಿಗೆ ಶ್ರೀಮಂತರೇ ಟಾರ್ಗೆಟ್!

ವಂಚಕರು ಮೊದಲು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಐಷಾರಾಮಿ ಫ್ಲಾಟ್ ಬಾಡಿಗೆಗೆ ಇದೆ ಎಂಬಂತೆ ಜಾಹೀರಾತುಗಳನ್ನು ಪ್ರಕಟಿಸುತ್ತಾರೆ. ಈ ಜಾಹೀರಾತುಗಳಲ್ಲಿ ನಿಜಕ್ಕೂ ಆಕರ್ಷಕವಾಗಿ ಕಾಣುವಂತೆ ಬಣ್ಣಬಣ್ಣದ ಎಐ ತಂತ್ರಜ್ಞಾನದಿಂದ ಸೃಷ್ಟಿಸಿದ ನಕಲಿ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಾರೆ. ಇಂತಹ ಜಾಹೀರಾತುಗಳು Housing.com, ನೋ ಬ್ರೋಕರ್ ಸೇರಿದಂತೆ ಹಲವು ಪ್ರಸಿದ್ಧ ರಿಯಲ್ ಎಸ್ಟೇಟ್ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಈ ಜಾಹೀರಾತುಗಳನ್ನು ನೋಡಿ ಮನೆ ಬಾಡಿಗೆಗೆ ಆಸಕ್ತಿ ತೋರಿಸಿ ಸಂಪರ್ಕಿಸಿದ ಕ್ಷಣದಿಂದಲೇ ಅವರು ವಂಚನೆಗೆ ಬಿದ್ದರೆಂದೇ ಅರ್ಥ. ಮೊದಲಿಗೆ ವಿಶ್ವಾಸ ಗಳಿಸುವ ಉದ್ದೇಶದಿಂದ ಮೃದು ಭಾಷೆಯಲ್ಲಿ ಮಾತನಾಡುವ ವಂಚಕರು, ಮನೆ ನೋಡಲು ಮೊದಲು ಅಡ್ವಾನ್ಸ್ ಹಣ ಪಾವತಿಸಬೇಕು ಎಂದು ಹೇಳುತ್ತಾರೆ. ಬಳಿಕ ‘ವಿಸಿಟರ್ ಪಾಸ್’, ‘ಎಂಟ್ರಿ ಚಾರ್ಜ್’, ‘ಸಿಕ್ಯೂರಿಟಿ ಪ್ರೊಸೆಸಿಂಗ್’ ಎನ್ನುವ ನೆಪಗಳಲ್ಲಿ ಹಂತ ಹಂತವಾಗಿ ಸಾವಿರಾರು ರೂಪಾಯಿ ಹಣವನ್ನು ವಸೂಲಿ ಮಾಡುತ್ತಾರೆ.

ನಂತರ ನಕಲಿ ವಿಳಾಸ ನೀಡಿ ಅಲ್ಲಿ ಬಂದು ಮನೆ ನೋಡಿ ಎಂದು ಕರೆಸುತ್ತಾರೆ. ಆದರೆ ಸೂಚಿಸಿದ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಬಾಡಿಗೆ ಮನೆ ಅಥವಾ ಫ್ಲಾಟ್ ಎಂಬುದೇ ಇರುವುದಿಲ್ಲ. ಈ ವೇಳೆ ಮತ್ತೆ ಸಂಪರ್ಕಿಸಲು ಪ್ರಯತ್ನಿಸಿದರೆ, ಹಣ ರಿಫಂಡ್ ಆಗುತ್ತದೆ, ಆದರೆ ಅದಕ್ಕೆ ಪ್ರಕ್ರಿಯೆಗಾಗಿ ಇನ್ನಷ್ಟು ಅಡ್ವಾನ್ಸ್ ಬೇಕು ಎಂದು ಮತ್ತೊಮ್ಮೆ ಹಣ ಕೇಳುತ್ತಾರೆ. ಆ ನಂತರ ಫೋನ್ ಕರೆಗಳನ್ನು ಸ್ವೀಕರಿಸದೇ ಸಂಪೂರ್ಣವಾಗಿ ಸಂಪರ್ಕ ಕಡಿತಗೊಳಿಸುತ್ತಾರೆ.

ಬೆಂಗಳೂರಿನಲ್ಲಿ ವೈದ್ಯೆಗೆ 10 ಸಾವಿರಕ್ಕೂ ಅಧಿಕ ವಂಚನೆ

ಇದೇ ರೀತಿಯ ವಂಚನೆಗೆ ಬೆಂಗಳೂರುನಲ್ಲಿ ವೈದ್ಯೆಯೊಬ್ಬರು ಬಲಿಯಾಗಿರುವುದು ಇದೀಗ ಬೆಳಕಿಗೆ ಬಂದಿದೆ. ಸೌಮ್ಯ ಎಂಬ ವೈದ್ಯೆ ಆನ್‌ಲೈನ್‌ನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದ ವೇಳೆ, ಹೌಸಿಂಗ್ ಡಾಟ್ ಕಾಮ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ ಐಷಾರಾಮಿ ಫ್ಲಾಟ್ ಜಾಹೀರಾತು ಅವರ ಗಮನ ಸೆಳೆದಿದೆ. ಅಲ್ಲಿ ಅಪ್‌ಲೋಡ್ ಮಾಡಿದ್ದ ಆಕರ್ಷಕ ಫೋಟೋಗಳನ್ನು ನೋಡಿ ಮನೆ ನೋಡಲು ಆಸಕ್ತಿ ತೋರಿದ ವೈದ್ಯೆ, ವಂಚಕರ ಸೂಚನೆಯಂತೆ ಮೊದಲು ‘ವಿಸಿಟರ್ ಪಾಸ್’ ನೆಪದಲ್ಲಿ 2 ಸಾವಿರ ರೂಪಾಯಿ ಹಾಗೂ ನಂತರ ಅಡ್ವಾನ್ಸ್ ಎಂದು 7 ಸಾವಿರ ರೂಪಾಯಿ ಪಾವತಿಸಿದ್ದಾರೆ. ಹೀಗೆ ಹಂತ ಹಂತವಾಗಿ 10 ಸಾವಿರಕ್ಕೂ ಅಧಿಕ ಹಣವನ್ನು ವಂಚಕರು ಪಡೆದುಕೊಂಡಿದ್ದಾರೆ.

ನಂತರ ವಂಚಕರು ನೀಡಿದ ವಿಳಾಸಕ್ಕೆ ಹೋಗಿ ನೋಡಿದಾಗ ಅಲ್ಲಿ ಯಾವುದೇ ಬಾಡಿಗೆ ಮನೆ ಇಲ್ಲ ಎಂಬ ವಿಚಾರ ಅವರಿಗೆ ತಿಳಿದಿದೆ. ಆ ಸ್ಥಳದಲ್ಲಿದ್ದ ಸೆಕ್ಯೂರಿಟಿ ಸಿಬ್ಬಂದಿ, ಇದೇ ರೀತಿಯಲ್ಲಿ ಹಲವರು ಇಲ್ಲಿ ಬಂದು ವಿಚಾರಿಸಿದ್ದಾರೆ. ಅನೇಕ ಜನರನ್ನು ಈ ರೀತಿ ವಂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲು

ಈ ಕುರಿತು ವೈದ್ಯೆ ಸೌಮ್ಯ ಅವರು ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೈಬರ್ ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ. ಇನ್ನು ಈ ಘಟನೆಯಿಂದ ತಿಳಿದುಬರುವ ಪಾಠವೆಂದರೆ ಆನ್‌ಲೈನ್‌ನಲ್ಲಿ ಬಾಡಿಗೆ ಮನೆ ಹುಡುಕುವಾಗ ಯಾವುದೇ ಕಾರಣಕ್ಕೂ ಮುಂಚಿತವಾಗಿ ಹಣ ಪಾವತಿಸಬಾರದು. ಮನೆ ನೇರವಾಗಿ ಪರಿಶೀಲಿಸಿದ ಬಳಿಕ ಮಾತ್ರ ಹಣ ನೀಡಬೇಕು. ಅತಿಯಾಗಿ ಆಕರ್ಷಕವಾಗಿ ಕಾಣುವ ಫೋಟೋಗಳು ಮತ್ತು ಕಡಿಮೆ ಬಾಡಿಗೆ ಆಫರ್‌ಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು.



Source link

Leave a Reply

Your email address will not be published. Required fields are marked *