rat in pani puri water: ಬೀದಿ ಬದಿ ಪಾನಿಪುರಿ ತಿನ್ತಾ ನಿಂತಿದ್ದವರಿಗೆ ಆಘಾತ: ಪಾನಿಯಲ್ಲಿ ಈಜಾಡ್ತಿತ್ತು ಇಲಿ: ವಿಡಿಯೋ | Do You Eat Panipuri On The Street Then Should Watch This Punjab Street Food Video

rat in pani puri water: ಬೀದಿ ಬದಿ ಪಾನಿಪುರಿ ತಿನ್ತಾ ನಿಂತಿದ್ದವರಿಗೆ ಆಘಾತ: ಪಾನಿಯಲ್ಲಿ ಈಜಾಡ್ತಿತ್ತು ಇಲಿ: ವಿಡಿಯೋ | Do You Eat Panipuri On The Street Then Should Watch This Punjab Street Food Video



rat in pani puri water: ಬೀದಿ ಬದಿ ಪಾನಿಪುರಿ ತಿನ್ತಾ ನಿಂತಿದ್ದವರಿಗೆ ಆಘಾತ: ಪಾನಿಯಲ್ಲಿ ಈಜಾಡ್ತಿತ್ತು ಇಲಿ: ವಿಡಿಯೋ | Do You Eat Panipuri On The Street Then Should Watch This Punjab Street Food Video

ರಸ್ತೆ ಬದಿ ಪಾನಿಪುರಿ ಅಥವಾ ಗೋಲ್ಗಪ್ಪವನ್ನು ತಿನ್ನದವರಿಲ್ಲ, ಎಂಥಾ ಶ್ರೀಮಂತರು ಕೂಡ ರಸ್ತೆ ಬದಿಯ ಪಾನಿಪುರಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಹೀಗೆ ಪಾನಿಪುರಿ ಅಥವಾ ಗೋಲ್ಗಪ್ಪವನ್ನು ಇಷ್ಟಪಟ್ಟು ತಿನ್ನುವವರಿಗೆ ಶಾಕ್ ಆಗುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಸ್ತೆಬದಿ ಪಾನಿಪುರಿ ತಿನ್ನೋರಿಗೆ ಶಾಕ್

ರಸ್ತೆ ಬದಿ ಪಾನಿಪುರಿ ಅಥವ ಗೋಲ್ಗಪ್ಪವನ್ನು ತಿನ್ನದವರಿಲ್ಲ, ಎಂಥಾ ಶ್ರೀಮಂತರು ಕೂಡ ರಸ್ತೆ ಬದಿಯ ಪಾನಿಪುರಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಹೀಗೆ ಪಾನಿಪುರಿ ಅಥವಾ ಗೋಲ್ಗಪ್ಪವನ್ನು ಇಷ್ಟಪಟ್ಟು ತಿನ್ನುವವರಿಗೆ ಶಾಕ್ ಆಗುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು ಜನರಿಗೆ ಪಾನಿಪುರಿ ನೀಡುವುದಕ್ಕೆ ತಯಾರಿಸಿದ ಪಾನಿಯಿಂದ ಇಲಿಯೊಂದು ಮುಳುಗೇಳುತ್ತಾ ಹೇಗೋ ತಪ್ಪಿಸಿಕೊಂಡು ಅಲ್ಲಿಂದ ದೂರ ಓಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಈ ವೀಡಿಯೋ ಈಗ ಜನರ ಆರೋಗ್ಯ ಸುರಕ್ಷತೆಯ ಬಗ್ಗೆ ತೀವ್ರ ಕಳವಳವುಂಟು ಮಾಡಿದೆ. ಪಂಜಾಬ್‌ನ ಅಮೃತಸರದ ವೀಡಿಯೋ ಇದಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನ ಅಸಹ್ಯ, ಭಯ ವ್ಯಕ್ತಪಡಿಸಿದ್ದಾರೆ. ಪಾನಿಪುರಿ ಮಸಾಲೆಯುಕ್ತ ಪಾನಿ ಇರುವ ಡಬ್ಬಿಯಿಂದ ಇಲಿ ಚಂಗನೇ ಹಾರಿ ಚರಂಡಿಯತ್ತ ಓಡುವ ದೃಶ್ಯವಿದೆ.

ಪಾನಿಯಲ್ಲಿ ಈಜಾಡಿದ ಇಲಿ

karan_dhanju26 ಎಂದು ಕರೆಯಲ್ಪಡುವ ಇನ್ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಸ್ನೇಹಿತನ ಜೊತೆ ಬೀದಿ ಬದಿ ಗೋಲ್ಗಪ್ಪ ತಿನ್ನುತ್ತಿದ್ದಾಗ ಘಟನೆ ನಡೆದಿದೆ ಎಂದು ಹೇಳಿಕೊಂಡಿದ್ದಾರೆ. ಅವರು ಗೋಲ್ಗಪ್ಪ ತಿನ್ನುತ್ತಿರುವಾಗಲೇ ಪಾನಿಪುರಿ ಮಸಾಲೆ ನೀರು ಇದ್ದ ಪಾತ್ರೆಯೊಳಗೆ ವಿಚಿತ್ರವಾಗಿ ಯಾವುದೋ ಜೀವಿ ಚಲ್ಲಿಸುತ್ತಿರುವುದು ಅವರ ಗಮನಕ್ಕೆ ಬಂತು. ಕೂಡಲೇ ಆ ಪಾನಿಪುರಿ ಮಾರಾಟ ಮಾಡುವವ ಅದನ್ನು ಆ ಇಲಿಯನ್ನು ಬರಿಗೈಲೇ ಪಾತ್ರೆಯಿಂದ ತೆಗೆಯಲು ಪ್ರಯತ್ನಿಸುತ್ತಾನೆ. ಅಷ್ಟರಲ್ಲಿ ಆ ಇಲಿ ತಪ್ಪಿಸಿಕೊಂಡು ಆ ಪಾತ್ರೆಯಿಂದ ಹಾರಿ ಓಡಿ ಹೋಗಿದೆ. ಇದರಿಂದ ಅಲ್ಲಿ ಪಾನಿಪುರಿ ತಿನ್ತಾ ಇದ್ದವರು ಆಘಾತ ಹಾಗೂ ಭಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆ ಮಾರಾಟಗಾರನಿಗೆ ಆ ಕಲುಷಿತ ಆಹಾರವನ್ನು ಕೂಡಲೇ ಎಸೆಯುವಂತೆ ಜನ ಹೇಳುವುದನ್ನು ವೀಡಿಯೋದಲ್ಲಿ ಕಾಣಬಹುದು.

ಇಲಿ ಬಹಳ ಸಮಯದಿಂದ ಪಾತ್ರೆಯೊಳಗೆ ಇತ್ತೇ ಅಥವಾ ಪತ್ತೆಯಾಗುವ ಕೆಲವೇ ಕ್ಷಣಗಳ ಮೊದಲು ಆ ಪಾತ್ರೆಗೆ ಬಿತ್ತೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ರಸ್ತೆಬದಿಯಲ್ಲಿ ಬೀದಿ ಆಹಾರವನ್ನು ಸೇವಿಸುವ ಮುನ್ನ ಅಲ್ಲಿನ ಆಹಾರದ ಶುಚಿತ್ವ ಹೇಗಿರುತ್ತದೆ ಎಂಬ ಬಗ್ಗೆ ಜನ ಚರ್ಚಿಸಿದ್ದಾರೆ. ಆಹಾರದಲ್ಲಿ ಅಗತ್ಯ ಶುಚಿತ್ವವನ್ನು ಕಾಪಾಡಿಕೊಳ್ಳದೇ ಬೇರೆಯವರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಈ ಬೀದಿ ಬದಿ ಆಹಾರ ಮಾರಾಟಗಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪೈಜಾಮದ ದಾರ ಎಳೆಯುವುದು ಅತ್ಯಾ*ಚಾರಕ್ಕೆ ಸಿದ್ಧತೆ ಎಂದ ಅಲಹಾಬಾದ್ ಹೈಕೋರ್ಟ್: ಸುಪ್ರೀಂಕೋರ್ಟ್ ಹೇಳಿದ್ದೇನು?

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI)ದ ಅಡಿಯಲ್ಲಿ ಆಹಾರ ಸುರಕ್ಷತೆಯ ಪಾಲನೆಯನ್ನು ಬೀದಿ ಬದಿ ವ್ಯಾಪಾರಿಗಳು ಎಷ್ಟರಮಟ್ಟಿಗೆ ಪಾಲನೆಮಾಡ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.ಬೀದಿ ವ್ಯಾಪಾರಿಗಳು ಸರಿಯಾದ ಆಹಾರ ಸಂಗ್ರಹಣೆ, ಕೀಟ ನಿಯಂತ್ರಣ ಕ್ರಮಗಳು ಮತ್ತು ಸ್ವಚ್ಛ ತಯಾರಿ ಅಭ್ಯಾಸಗಳು ಸೇರಿದಂತೆ ನೈರ್ಮಲ್ಯ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಆದರೆ ಇಲ್ಲಿ ದೊಡ್ಡ ಇಲ್ಲಿಯೇ ಆಹಾರದಲ್ಲಿ ಈಜಾಡಿದೆ.

ಇಲಿಗಳ ಸಂಪರ್ಕಕ್ಕೆ ಬಂದ ಆಹಾರ ಬಹಳ ಅಪಾಯಕಾರಿಯಾಗಿದೆ. ಇಲಿಗಳು ಆಹಾರ ಮತ್ತು ನೀರನ್ನು ಕಲುಷಿತಗೊಳಿಸುವ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳಾಗಿವೆ. ಹೀಗೆ ಅವುಗಳ ಸಂಪರ್ಕಕ್ಕೆ ಬಂದ ಆಹಾರವನ್ನು ಸೇವಿಸುವುದರಿಂದ ಜಠರ ಕರುಳಿನ ಸೋಂಕುಗಳು ಮತ್ತು ಇತರ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು. ಹೀಗಾಗಿ ಬೀದಿ ಬದಿ ಆಹಾರ ತಿನ್ನುವ ಆಸೆ ಆದರೆ ಮೊದಲಿಗೆ ಅಲ್ಲಿನ ಆಹಾರದ ಗುಣಮಟ್ಟ ಸ್ವಚ್ಛತೆ ಹೇಗಿದೆ ಎಂಬುದನ್ನು ಗಮನಿಸಿ.

ಇದನ್ನೂ ಓದಿ: 2014ರಲ್ಲಿ ಕಾಂಗ್ರೆಸ್‌ನಿಂದ ನಾನು ಸಿಎಂ ಆಗುವುದನ್ನು ತಪ್ಪಿಸಿದ ರಾಹುಲ್‌ಗಾಂಧಿಗೆ ಧನ್ಯವಾದ: ಅಸ್ಸಾಂ ಸಿಎಂ



Source link

Leave a Reply

Your email address will not be published. Required fields are marked *