Satellite Video ಕಂಕಣ ಸೂರ್ಯಗ್ರಹಣ ವೇಳೆ ಭೂಮಿಯಲ್ಲಿನ ಬದಲಾವಣೆಯ ಅದ್ಭುತ ದೃಶ್ಯ ಸೆರೆ ಹಿಡಿದ ಸ್ಯಾಟಲೈಟ್ | Watch Annular Solar Eclipse Turning Antarctica Day Into Night New Satellite Video

ಕಂಕಣ ಸೂರ್ಯಗ್ರಹಣ ಅದ್ಭುತ ದೃಶ್ಯವನ್ನು ಸ್ಯಾಟಲೈಟ್ ಸೆರೆ ಹಿಡಿದಿದೆ. ವಿಶೇಷವಾಗಿ ಕಂಕಣ ಸೂರ್ಯಗ್ರಹಣ ವೇಳೆ ಭೂಮಿಯಲ್ಲಿನ ಬದಲಾವಣೆಯ ಅದ್ಭುತ ದೃಶ್ಯ ಇದಾಗಿದೆ. ಮೊದಲ ಸೂರ್ಯಗ್ರಹಣ ವಿಡಿಯೋ ಇಲ್ಲಿದೆ. 

ನವದೆಹಲಿ (ಫೆ.18) ಕಂಕಣ ಸೂರ್ಯಗ್ರಹಣ ಘಟಿಸಿದೆ. ಫೆಬ್ರವರಿ 17ರಂದು ಕಂಕಣ ಸೂರ್ಯಗ್ರಹಣ ಸಂಭವಿಸಿದೆ. ಇದು 2026ರ ಮೊದಲ ಸೂರ್ಯಗ್ರಹಣ. ಕಂಕಣ ಸೂರ್ಯಗ್ರಹಣ ವೇಳೆ ಚಿನ್ನದ ಉಂಗುರ ರೀತಿ ಗೋಚರಿಸುತ್ತದೆ. ಫೆಬ್ರವರಿ 17ರಂದು ಕಂಕಣ ಸೂರ್ಯಗ್ರಹಣ ಸಂಭವಿಸುವಾಗ ಸೂರ್ಯನ ಬೆಳಕಿನಲ್ಲಿದ್ದ ಭೂಮಿ ದಿಢೀರ್ ಕತ್ತಲಾದ ವಿಶೇಷ ದೃಶ್ಯ ಸ್ಯಾಟಲೈಟ್ ಸೆರೆ ಹಿಡಿದಿದೆ. ಈ ಬಾರಿಯ ಕಂಕಣ ಸೂರ್ಯಗ್ರಹಣ ಭಾರತ ಸೇರಿದಂತೆ ಏಷ್ಯಾದಲ್ಲಿ ಗೋಚರ ಇರಲಿಲ್ಲ. ಅಂಟಾರ್ಕ್ಟಿಕಾ ಸೇರಿದಂತೆ ಕೆಲ ದೇಶಗಳಲ್ಲಿ ಮಾತ್ರ ಕಂಕಣ ಸೂರ್ಯಗ್ರಹಣ ಗೋಚರವಿತ್ತು. ಈ ವೇಳೆ ಇಡೀ ಅಂಟಾರ್ಕ್ಟಿಕಾ ಮೇಲೆ ಗ್ರಹಣದ ವೇಳೆ ಆವರಿಸಿದ ಕತ್ತಲ ದೃಶ್ಯ ಸೆರೆಯಾಗಿದೆ.

ಸ್ಯಾಟಲೈಟ್ ದೃಶ್ಯ

ಸೌತ್ ಕೊರಿಯಾದ GEO-KOMPSAT-2A ಸ್ಯಾಟಲೈಟ್ ಈ ಅದ್ಭುತ ದೃಶ್ಯ ಸೆರೆ ಹಿಡಿದಿದೆ. ಚಂದ್ರ ಸೂರ್ಯನ ಮಧ್ಯಭಾಗಕ್ಕೆ ಬಂದಾಗ ಸೂರ್ಯನ ಕಿರಣಗಳು ಭೂಮಿಗೆ ಬೀಳುವುದನ್ನು ಚಂದ್ರ ತಡೆಯುತ್ತಾನೆ. ಈ ಸೂರ್ಯಗ್ರಹಣದ ಸಂದರ್ಭ ಭೂಮಿಯಲ್ಲಿ ಕತ್ತಲು ಆವರಿಸುತ್ತದೆ. ಈ ವೇಳೆ ಅಂಟಾರ್ಕ್ಟಿಕಾ ಮೇಲೆ ಚಂದ್ರನ ನೆರಳು ಹಾದುಹೋಗುವ ಅದ್ಭುತ ದೃಶ್ಯ ಸೆರೆಯಾಗಿದೆ. ಸೌತ್ ಕೊರಿಯಾ ಈ ವಿಡಿಯೋವನ್ನು ಬಹಿರಂಗಪಡಿಸಿದೆ.

ಹಗಲಿನ ವೇಳೆ ಕತ್ತಲಾಗಿತ್ತು

ಹಿಮಗಳಿಂದ ಆವರಿಸಿದ್ದ ಅಂಟಾರ್ಕ್ಟಿಕಾ ಸೂರ್ಯನ ಬೆಳಕಿನಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತದೆ. ಎಲ್ಲೆಡೆ ಬಿಳಿಯ ಹಿಮಗಡ್ಡೆಗಳೇ ಕಾಣುತ್ತದೆ. ಕಂಕಣ ಸೂರ್ಯಗ್ರಹಣ ವೇಳೆ ಬರೋಬ್ಬರಿ 59 ನಿಮಿಷಗಳ ಕಾಲ ಚಂದ್ರನ ನೆರಳು ಭೂಮಿಯ ಮೇಲ ಚಲಿಸಿತ್ತು. ಈ ವೇಳೆ ಅಂಟಾರ್ಕ್ಟಿಕಾದಲ್ಲಿ ಹಗಲಿನ ವೇಳೆ ಕತ್ತಲಾಗಿತ್ತು.

Scroll to load tweet…

ಕಂಕಣ ಸೂರ್ಯಗ್ರಹಣ ಸಂಪೂರ್ಣವಾಗಿ ಅಂಟಾರ್ಕ್ಟಿಕಾದಲ್ಲಿ ಮಾತ್ರ ಗೋಚರವಿತ್ತು. ಇನ್ನು ದಕ್ಷಿಣ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕದಲ್ಲಿ ಭಾಗಶಃ ಗೋಚರಿಸಿತ್ತು. ಸ್ಪಷ್ಟ ಚಿತ್ರಣ ಅಂಟಾರ್ಕ್ಟಿಕಾದಲ್ಲಿ ಲಭ್ಯವಾಗಿದೆ. ಸ್ಯಾಟಲೈಟ್ ಸೆರೆ ಹಿಡಿದ ದೃಶ್ಯದಲ್ಲಿ ಈ ಬದಲಾವಣೆ ಸ್ಪಷ್ಟವಾಗಿದೆ.

ಬ್ಲಡ್ ಮೂನ್

ಮೊದಲ ಸೂರ್ಯಗ್ರಹಣ ಸಂಭವಿಸಿದೆ. ಇದೀಗ ಪೂರ್ಣ ಚಂದ್ರಗ್ರಹಣ ಸರದಿ. ಮಾರ್ಚ್ 3ರಂದು ಬ್ಲಡ್ ಮೂನ್ ಘಟಿಸಲಿದೆ.

Source link

Leave a Reply

Your email address will not be published. Required fields are marked *