Headlines

ಪ್ರಿಯಾಂಕಾ ಚೋಪ್ರಾರನ್ನು ಮಹಾನ್ ವ್ಯಕ್ತಿಗೆ ಹೋಲಿಸಿದ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್

ಪ್ರಿಯಾಂಕಾ ಚೋಪ್ರಾರನ್ನು ಮಹಾನ್ ವ್ಯಕ್ತಿಗೆ ಹೋಲಿಸಿದ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್


ಪ್ರಿಯಾಂಕಾ ಚೋಪ್ರಾ (ಪ್ರಿಯಾಂಕಾ ಚೋಪ್ರಾ) ಬಾಲಿವುಡ್‌ನ ಹಾಲಿವುಡ್‌ನಲ್ಲೂ ಸ್ಟಾರ್ ನಟಿ. ಕೆಲವು ವರ್ಷಗಳ ಹಿಂದೆ ಬಾಲಿವುಡ್‌ನಿಂದ ದೂರಾಗಿ ಹಾಲಿವುಡ್‌ಗೆ ಹಾರಿದ್ದ ಪ್ರಿಯಾಂಕಾರನನ್ನು ಅಣಕಿಸಿದ್ದರು. ಆರಂಭದಲ್ಲಿ ಪ್ರಿಯಾಂಕಾಗೆ ಹಾಲಿವುಡ್ ನಲ್ಲಿ ಗಟ್ಟಿ ಪಾತ್ರಗಳು ಸಿಗದಿದ್ದಾಗ ಟೀಕೆ ಮಾಡಲಾಗಿತ್ತು. ಆದರೆ ಪ್ರಿಯಾಂಕಾ ಚೋಪ್ರಾ, ಹಾಲಿವುಡ್ನ ಸ್ಟಾರ್ ನಟರು, ನಿರ್ದೇಶಕರುಗಳೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಈಗ ಹಾಲಿವುಡ್‌ನಲ್ಲಿ ಆದ ಪ್ರತ್ಯೇಕ ಗುರುತನ್ನು ಸಂಪಾದಿಸಿದ್ದಾರೆ. ಹಾಲಿವುಡ್ನ ಸ್ಟಾರ್ ನಟ ವಿನ್ ಡೀಸೆಲ್ ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾರನ್ನು ಮಹಾನ್ ವ್ಯಕ್ತಿಗೆ ಹೋಲಿಕೆ ಮಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ‘ದಿ ಬ್ಲಫ್’ (ದಿ ಬ್ಲಫ್) ಹೆಸರಿನ ಆಕ್ಷನ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ತಾಯಿಯಾಕೆ ತನ್ನ ಕುಟುಂಬವನ್ನು ವಿಲನ್‌ಗಳಿಂದ ಉಳಿಸಲು ಮಾಡುವ ಹೋರಾಟದ ಕಥೆ ಸಿನಿಮಾ ಒಳಗೊಂಡಿದೆ. ‘ದಿ ಬ್ಲಫ್’ ಸಿನಿಮಾದ ಪ್ರೀಮಿಯರ್ ಶೋ ಇತ್ತೀಚೆಗಷ್ಟೇ ಆಯೋಜನೆಗೊಂಡಿತ್ತು, ಪ್ರೀಮಿಯರ್ ಶೋಗೆ ಹಲವಾರು ಹಾಲಿವುಡ್ ಸೆಲೆಬ್ರಿಟಿಗಳು ಅತಿಥಿಗಳಾಗಿ ಆಗಮಿಸಿದ್ದರು. ಅವರ ‘ಟ್ರಿಬಲ್ ಎಕ್ಸ್’, ‘ಫಾಸ್ಟ್ ಆಂಡ್ ಫ್ಯೂರಿಯಸ್’ ಖ್ಯಾತಿಯ ವಿನ್ ಡೀಸೆಲ್ ಸಹ ಒಬ್ಬರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿನ್ ಡೀಸೆಲ್ ಪ್ರಿಯಾಂಕಾ ಚೋಪ್ರಾರನ್ನು ಮಹಾನ್ ಮಾನವತಾವಾದಿ ನೆಲ್ಸನ್ ಮಂಡೆಲಾಗೆ ಹೋಲಿಕೆ ಮಾಡಿದರು. ‘ಪ್ರಿಯಾಂಕಾ ಕೇವಲ ಅದ್ಭುತ ನಟಿ, ಬದಲಾಗಿ ಜಗತ್ತನ್ನು ಉತ್ತಮಗೊಳಿಸಲು ಶ್ರಮಿಸುತ್ತಿರುವ ಶಕ್ತಿ ಎಂದು ಬಣ್ಣಿಸಿದರು. ಕೆಲವು ವ್ಯಕ್ತಿಗಳು ಜಗತ್ತನ್ನು ಬದಲಿಸಲು ಹುಟ್ಟಿರುತ್ತಾರೆ. ಅಂತಹವರ ಸಾಲಿನಲ್ಲಿ ನಾನು ನೆಲ್ಸನ್ ಮಂಡೆಲಾ ಅವರನ್ನು ನೋಡುತ್ತೇನೆ. ಇಂದು ಪ್ರಿಯಾಂಕಾ ಚೋಪ್ರಾ ಅವರಲ್ಲಿ ನನಗೆ ಅಂತಹದ್ದೇ ಗುಣಗಳು ಕಾಣಿಸುತ್ತಿವೆ. ಅವರು ಕೇವಲ ಸಿನಿಮಾ ರಂಗಕ್ಕೆ ಸೀಮಿತವಾಗದೆ, ಸಾಮಾಜಿಕ ಕಳಕಳಿಯ ಮೂಲಕ ಜಗತ್ತನ್ನು ಸುಂದರಗೊಳಿಸಲು ಶ್ರಮಿಸುತ್ತಿದ್ದಾರೆ’ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನೆಲ್ಸನ್ ಮಂಡೇಲ ಅವರಂಥಹಾ ಮಹಾನ್ ನಾಯಕರಿಗೆ ಪ್ರಿಯಾಂಕಾರನ್ನು ಹೋಲಿಸಿರುವುದು ನಿಜಕ್ಕೂ ಬಹುದೊಡ್ಡ ಹೊಗಳಿಕೆಯಾಗಿದೆ.

ಇದನ್ನೂ ಓದಿ:ದೋಸೆ ತಿನ್ನುತ್ತಾ ಪತ್ನಿ ಪ್ರಿಯಾಂಕಾ ಚೋಪ್ರಾ ಸಿನಿಮಾ ಹಾಡು ಕೇಳಿದ ನಿಕ್ ಜೋನಸ್

ಪ್ರಿಯಾಂಕಾ ಅವರ ಮಾನವೀಯ ಕಾರ್ಯಗಳು ಮತ್ತು ಯುನಿಸೆಫ್ (UNICEF) ರಾಯಭಾರಿಯಾಗಿ ಅವರು ಮಾಡುತ್ತಿರುವ ಕೆಲಸಗಳನ್ನು ವಿನ್ ಡೀಸೆಲ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಭಾರತೀಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಹಲವು ವರ್ಷಗಳಿಂದ ಯುನೆಸೆಫ್ ಜೊತೆಗೆ ಗುರುತಿಸಿಕೊಂಡಿದ್ದು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ದಿ ಬ್ಲಫ್’ ಆಕ್ಷನ್ ಮತ್ತು ಸಾಹಸಮಯ ಕಥೆಯನ್ನು ಹೊಂದಿದೆ. ಈ ಮೂಲಕ ಪ್ರಿಯಾಂಕಾ ಮತ್ತೊಮ್ಮೆ ಹಾಲಿವುಡ್‌ನಲ್ಲಿ ತನ್ನ ಛಾಪು ಚಿತ್ರವನ್ನು ಮೂಡಿಸಲು ಸಜ್ಜಾಗಿದ್ದಾರೆ. ಈ ಸಿನಿಮಾವನ್ನು ಫ್ರ್ಯಾಂಕ್ ಇ ಫ್ಲವರ್ಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಪ್ರಿಯಾಂಕಾ ಜೊತೆಗೆ ಖ್ಯಾತ ನಟ ಕಾರ್ಲ್ ಅರ್ಬಲ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *