ನಟ ರವಿಚಂದ್ರನ್ ಅವರು ಇನ್ನೆರಡು ತಿಂಗಳಲ್ಲಿ ದರ್ಶನ್ ಜೈಲಿನಿಂದ ಹೊರಬರುತ್ತಾರೆ ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ದರ್ಶನ್ ಅಭಿಮಾನಿಗಳು ಸಂತಸಗೊಂಡಿದ್ದರೂ, ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ 272 ಸಾಕ್ಷಿಗಳಿರುವುದರಿಂದ ಇದು ಅಷ್ಟು ಸುಲಭವಲ್ಲ ಎಂದು ಈ ಲೇಖನವು ವಿಶ್ಲೇಷಿಸುತ್ತದೆ.
ದರ್ಶನ್ ಈ ಸಾರಿಯ ಹುಟ್ಟುಹಬ್ಬವನ್ನ ಜೈಲ್ನಲ್ಲೇ ಕಳೆದಿರೋದು ಗೊತ್ತೇ ಇದೆ. ದಾಸ ಹೊರಬರೋದು ಯಾವಾಗ ಅಂತ ಫ್ಯಾನ್ಸ್ ಕಾಯ್ತಾನೇ ಇದ್ದಾರೆ. ಈ ನಡುವೆ ಕ್ರೇಜಿಸ್ಟಾರ್ ರವಿಚಂದ್ರನ್ ಇನ್ನೆರಡು ತಿಂಗಳಲ್ಲಿ ದರ್ಶನ್ ಹೊರಬರ್ತಾನೆ ನೋಡ್ತೀರಿ ಅಂದಿದ್ದಾರೆ. ರವಿಮಾಮನ ಮಾತು ನಿಜಾನಾ? ನಿಜಕ್ಕೂ ಎರಡು ತಿಂಗಳಲ್ಲಿ ದರ್ಶನ್ ಹೊರಬರೋದು ಸಾಧ್ಯನಾ? ರವಿಮಾಮನ ದೃಶ್ಯಂನಷ್ಟೇ ರೋಚಕವಾದ ಸ್ಟೋರಿ ಇಲ್ಲಿದೆ ನೋಡಿ.
ದರ್ಶನ್ ಬಗ್ಗೆ ರವಿಮಾಮ ಹೇಳಿದ್ದು ನಿಜನಾ..?
ಯೆಸ್ ಇತ್ತೀಚಿಗೆ ಕುಣಿಗಲ್‌ನ ಶಿವರಾತ್ರಿ ಸ್ವರಾಭಿಷೇಕ ಸಮಾರಂಭದಲ್ಲಿ ರವಿಚಂದ್ರನ್ ಅತಿಥಿಯಾಗಿ ಭಾಗಿ ಆಗಿದ್ರು. ರವಿಮಾಮ ವೇದಿಕೆ ಮೇಲೆ ಬರ್ತಾನೇ ಫ್ಯಾನ್ಸ್, ಡಿ ಬಾಸ್ ಡಿ ಬಾಸ್ ಅಂತ ಕೂಗೋದಕ್ಕೆ ಶುರುಮಾಡಿದ್ರು. ಆಗ ರವಿಮಾಮ ತಮ್ಮ ಸ್ಟೈಲ್ನಲ್ಲಿ ಆಯ್ತು ಬಿಡ್ರೋ ಇನ್ನೆರಡು ತಿಂಗಳಲ್ಲಿ ನಿಮ್ಮ ದರ್ಶನ್ ಹೊರಬರ್ತಾನೆ ಅಂದುಬಿಟ್ರು.
ಅಷ್ಟೇ ಅಲ್ಲ ನಿಮಗೆಲ್ಲಾ ಅವನು ಡಿ ಬಾಸ್ ಆದ್ರೆ, ನನಗೆ ಅವನು ಮಗನ ಸಮ ಅಂದ್ರು. ಅಭಿಮಾನಿಗಳೆಲ್ಲಾ ಕೇಕೆ ಹಾಕಿದ್ರು. ಇಂಡಸ್ಟ್ರಿಯಲ್ಲಿ ರವಿಚಂದ್ರನ್ ಏನಾದ್ರೂ ಹೇಳಿದ್ರೆ ನಿಜವಾಗುತ್ತೆ ಅನ್ನೋ ನಂಬಿಕೆ ಇದೆ. ಸೋ ಎರಡು ತಿಂಗಳಲ್ಲಿ ದಾಸ ಬರ್ತಾನೆ ಅನ್ನೋದನ್ನ ಕೇಳಿ ದಾಸನ ಫ್ಯಾನ್ಸ್ ಖುಷ್ ಆಗಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಕಟ್ಟಾ ಅಭಿಮಾನಿ ದಾಸ
ಹೌದು ಬಹಳಷ್ಟು ಜನಕ್ಕೆ ಗೊತ್ತಿಲ್ಲದ ವಿಷ್ಯ ಏನಂದ್ರೆ, ದರ್ಶನ್ ಚಿಕ್ಕ ವಯಸ್ಸಿನಿಂದಲೂ ರವಿಚಂದ್ರನ್ ಅಭಿಮಾನಿ. ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಮತ್ತು ರವಿಚಂದ್ರನ್ ನಟನೆಯ ಅಂಜದ ಗಂಡು ಸಿನಿಮಾ ಚಿಕ್ಕ ವಯಸ್ಸಿನಿಂದಲೂ ದರ್ಶನ್‌ಗೆ ಬಲು ಇಷ್ಟವಾದ ಚಿತ್ರವಂತೆ. ಮುಂದೆ ದರ್ಶನ್ ಚಿತ್ರರಂಗಕ್ಕೆ ಬಂದು ನಾಯಕನಟನಾದ ಮೇಲೆ ಬಹಳಷ್ಟು ವರ್ಷ ರವಿಮಾನ ಜೊತೆಗೆ ಕೆಲಸ ಮಾಡೋ ಚಾನ್ಸ್ ಸಿಕ್ಕಿರಲಿಲ್ಲ. ಆದ್ರೆ ಕ್ರಾಂತಿ ಸಿನಿಮಾ ಮೂಲಕ ರವಿಮಾಮ-ದರ್ಶನ್ ರನ್ನ ಜೊತೆಯಾಗಿ ನೋಡೋ ಅವಕಾಶ ಸಿಕ್ತು. ಕ್ರಾಂತಿ ಮೂವಿಯಲ್ಲಿ ದರ್ಶನ್ ಅಪ್ಪನ ಪಾತ್ರದಲ್ಲಿ ನಟಿಸಿದ್ರು ರವಿಚಂದ್ರನ್. ಇದೀಗ ನನ್ನ ಮಗ ಬೇಗ ಬರ್ತಾನೆ ಅಂದಿದ್ದಾರೆ ರವಿಮಾಮ.
ಸಾಕ್ಷಿಗಳ ವಿಚಾರಣೆ ಮುಗಿಯೋದು ಯಾವಾಗ..?
ಅಸಲಿಗೆ ರವಿಚಂದ್ರನ್ ಹೀಗೆ ಹೇಳಲಿಕ್ಕೆ ಒಂದು ಕಾರಣ ಇದೆ. ಸಾಮಾನ್ಯವಾಗಿ ಕೊ*ಲೆ ಕೇಸ್ವೊಂದರಲ್ಲಿ ಸಾಕ್ಷಿಗಳ ವಿಚಾರಣೆ ಮತ್ತು ಪಾಟಿ ಸವಾಲು ಮುಕ್ತಾಯ ಆದ ಮೇಲೆ ಕೊ*ಲೆ ಆರೋಪಿಗಳಿಗೆ ಬೇಲ್ ನೀಡೋ ಅವಕಾಶ ಇದೆ. ಹೇಗಿದ್ರೂ ಸಾಕ್ಷಿಗಳು ಕೋರ್ಟ್ಗೆ ತಮ್ಮ ಹೇಳಿಕೆ ಕೊಟ್ಟು ಬಿಟ್ಟಿರ್ತಾರೆ. ಮುಂದೆ ಆರೋಪಿಗಳು ಸಾಕ್ಷಿ ಮೇಲೆ ಪ್ರಭಾವ ಬೀರೋದಕ್ಕೆ ಸಾಧ್ಯವಿಲ್ಲವಾದ್ದರಿಂದ ಅವರಿಗೆ ಬೇಲ್ ಕೊಡಬಹುದು.
ಸದ್ಯ ದರ್ಶನ್ ಕೇಸ್ನಲ್ಲಿ ಸಾಕ್ಷಿಗಳ ವಿಚಾರಣೆ ನಡೀತಾ ಇತ್ತು. ಇನ್ನೆರೆಡು ತಿಂಗಳಲ್ಲಿ ಅದು ಕಂಪ್ಲೀಟ್ ಆಗಿ ದಾಸ ಹೊರಬರಬಹುದು ಅನ್ನೋ ಅರ್ಥದಲ್ಲಿ ಕ್ರೇಜಿಸ್ಟಾರ್ ಮಾತನಾಡಿದ್ದಾರೆ. ಆದ್ರೆ ಅದು ಅಷ್ಟು ಸುಲಭನಾ? ಖಂಡಿತ ಇಲ್ಲ. ಅಷ್ಟಕ್ಕೂ ರೇಣುಕಾಸ್ವಾಮಿ ಮರ್ಡ*ರ್ ಕೇಸ್ನಲ್ಲಿ ಸಾಕ್ಷಿಗಳ ಸಂಖ್ಯೆ ಎಷ್ಟು ಗೊತ್ತಾ?
ರೇಣುಕಾಸ್ವಾಮಿ ಕೊ*ಲೆ ಕೇಸ್ ಸಾಕ್ಷಿಗಳ ವಿವರ :
ಖಾಸಗಿ ಸಾಕ್ಷಿಗಳು – 100
ಐ ವಿಟ್ನೆಸ್ – 2
ಬಾಗಶಃ ಐ ವಿಟ್ನೆಸ್ – 5
ಮಹಜರ್ ವಿಟ್ನೆಸ್ – 62
ಎಫ್.ಎಸ್.ಎಲ್ & ಸಿ.ಎಸ್.ಎಫ್.ಎಲ್ – 15
ಡಾಕ್ಟರ್ – 1
ಟೆಕ್ನಿಕಲ್ ವಿಟ್ನೆಸ್ – 04
ಬ್ಯಾಂಕ್ / ಅಧಿಕಾರಿಗಳು – 17
ಮಾಜಿಸ್ಟ್ರೇಟ್ – 02
ಪೊಲೀಸ್ – 64
ಒಟ್ಟು – 272
ಹೌದು ರೇಣುಕಾಸ್ವಾಮಿ ಮರ್ಡ*ರ್ ಕೇಸ್ನಲ್ಲಿ ಸಾಕ್ಷಿಗಳ ಸಂಖ್ಯೆನೇ ಬರೊಬ್ಬರಿ 272. ಅದ್ರಲ್ಲಿ ಖಾಸಗಿ ಸಾಕ್ಷಿಗಳು – 100 ಜನರಾದ್ರೆ, ಐ ವಿಟ್ನೆಸ್ ಇಬ್ಬರಿದ್ದಾರೆ. ಉಳಿದಂತೆ ಮಹಜರ್ ವಿಟ್ನೆಸ್, ಎಫ್.ಎಸ್.ಎಲ್ – ಸಿ.ಎಸ್.ಎಫ್.ಎಲ್ , ಡಾಕ್ಟರ್ , ಟೆಕ್ನಿಕಲ್ ವಿಟ್ನೆಸ್ , ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳು , ಮಾಜಿಸ್ಟ್ರೇಟ್ ಮತ್ತು ಪೊಲೀಸರನ್ನ ಸೇರಿಸಿದ್ರೆ ಒಟ್ಟು 272 ಸಾಕ್ಷಿಗಳು ಇವೆ.
ಅಂದಹಾಗೆ ಟ್ರಯಲ್ ಶುರುವಾದ ಮೇಲೆ ಇಲ್ಲಿ ತನಕ ಕೋರ್ಟ್ನಲ್ಲಿ ವಿಚಾರಣೆ – ಪಾಟೀ ಸವಾಲು ಎದುರಿಸೋದು ಬರೀ ಇಬ್ಬರು. ರೇಣುಕಾಸ್ವಾಮಿ ಅಪ್ಪ-ಅಮ್ಮ ಮಾತ್ರ ಇಲ್ಲಿತನಕ ಸಾಕ್ಷಿ ಹೇಳಿದ್ದಾರೆ. ಇನ್ನೂ 270 ಬ್ಯಾಲೆನ್ಸ್ ಇವೆ.
ಎರಡು ತಿಂಗಳಲ್ಲಿ 2 ಸಾಕ್ಷಿ ಮುಗಿದ್ರೆ, 270 ಸಾಕ್ಷಿ ಮುಗಿಯೋಕೆ ಎಷ್ಟು ತಿಂಗಳು ಬೇಕು ನೀವೇ ಊಹೆ ಮಾಡಿ. ಕನಿಷ್ಟ ನೂರು ಖಾಸಗಿ ಸಾಕ್ಷಿಗಳು ಮತ್ತು ಐ ವಿಟ್ನೆಸ್ ಮುಗಿಯೋ ತನಕ ಅಂತೂ ದರ್ಶನ್ ಗೆ ಮತ್ತೆ ಬೇಲ್ಗೆ ಅರ್ಜಿ ಸಲ್ಲಿಸೋ ಅವಕಾಶ ಇಲ್ಲವೇ ಇಲ್ಲ! ಸೋ ವಿಷ್ಯ ಹೀಗಿದೆ. ಕ್ರೇಜಿಸ್ಟಾರ್ ಮಾತ್ರ ಎರಡು ತಿಂಗಳಲ್ಲಿ ದಾಸ ಬರ್ತಾನೆ ನೋಡ್ತೀರಿ ಅಂದಿದ್ದಾರೆ. ಇದು ರವಿಮಾಮನ ದೃಶ್ಯಂ ಕಥೆ ಅಲ್ಲ. ಅಷ್ಟು ಬೇಗ ಇದು ಮುಗಿಯೋದಿಲ್ಲ. ಅನ್ನೋದು ಖುದ್ದು ಕ್ರೇಜಿಸ್ಟಾರ್ಗೂ ಗೊತ್ತಿಲ್ಲ..!
ಅಮೀತ್ ದೇಸಾಯಿ, ಏಷ್ಯಾನೆಟ್ ಸುವರ್ಣ ನ್ಯೂಸ್.