Headlines

ಭಾರತದಲ್ಲಿ ಬೃಹತ್ ಎಐ ಕಂಪ್ಯೂಟಿಂಗ್ ಹಬ್, ಗಿ.ವ್ಯಾ. ಎಐ ಡಾಟಾ ಸೆಂಟರ್ ಫ್ಯಾಕ್ಟರಿ, ಎಐ ಸೂಪರ್​ಕಂಪ್ಯೂಟಿಂಗ್ ಸಿಸ್ಟಂ

ಭಾರತದಲ್ಲಿ ಬೃಹತ್ ಎಐ ಕಂಪ್ಯೂಟಿಂಗ್ ಹಬ್, ಗಿ.ವ್ಯಾ. ಎಐ ಡಾಟಾ ಸೆಂಟರ್ ಫ್ಯಾಕ್ಟರಿ, ಎಐ ಸೂಪರ್​ಕಂಪ್ಯೂಟಿಂಗ್ ಸಿಸ್ಟಂ


ನವದೆಹಲಿ, ಫೆಬ್ರುವರಿ 18: ವಿಶ್ವದ ಅಗ್ರಮಾನ್ಯ ಎಐ ಚಿಪ್ ತಯಾರಕ ಕಂಪನಿಯಾದ ಎನ್ ವಿಡಿಯಾ (ಎನ್ವಿಡಿಯಾ) ಹಲವು ಭಾರತೀಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ಡಾಟಾ ಸೆಂಟರ್‌ಗಳ ಇನ್ ಫ್ರಾಸ್ಟ್ರಕ್ಚರ್ ರೂಪಿಸಲು ಎನ್ ವಿಡಿಯಾದ ಶಕ್ತಿಶಾಲಿ ಚಿಪ್‌ಗಳ ಬಳಕೆ ಆಗಲಿದೆ. ಯೋಟ್ಟಾ ಡಾಟಾ ಸರ್ವಿಸಸ್ (Yotta Data Services), ಎಲ್ ಅಂಡ್ ಟಿ (L&T, ಇ ಟು ಇ ನೆಟ್ವರ್ಕ್ಸ್ (E2E Networks), ನೆಟ್ವೆಬ್ ಟೆಕ್ನಾಲಜೀಸ್ (Netweb Technologies) ಸಂಸ್ಥೆಗಳು ಎನ್ ವಿಡಿಯಾ ಜೊತೆ ಒಪ್ಪಂದ ಮಾಡಿಕೊಂಡಿವೆ.

ಯೋಟ್ಟಾದಿಂದ ಏಷ್ಯಾದ ಅತಿದೊಡ್ಡ ಎಐ ಕಂಪ್ಯೂಟಿಂಗ್ ಹಬ್

ಡಾಟಾ ಸೆಂಟರ್ ಕಂಪನಿಯಾದ ಯೋಟಾ ಡಾಟಾ ಸರ್ವಿಸಸ್ ಭಾರತದಲ್ಲಿ ಎಐ ಕಂಪ್ಯೂಟಿಂಗ್ ಹಬ್ ಅನ್ನು ನಿರ್ಮಿಸಲಾಗಿದೆ ಎಂದು ಘೋಷಿಸಲಾಗಿದೆ. ಇದಕ್ಕಾಗಿ ಎನ್ ವಿಡಿಯಾದ ಬ್ಲ್ಯಾಕ್ ಅಲ್ಟ್ರಾ ಜಿಪಿಯುಗಳನ್ನು ಅಳವಡಿಸಲಾಗಿದೆ. ಇದು ಏಷ್ಯಾದ ಅತಿದೊಡ್ಡ ಎಐ ಕಂಪ್ಯೂಟಿಂಗ್ ಹಬ್‌ಗಳಲ್ಲಿ ಒಂದೆನಿಸಲಿದೆ. ಇದಕ್ಕಾಗಿ ಯೋಟಾ ಡಾಟಾ ಸರ್ವಿಸಸ್ ಸಂಸ್ಥೆ 2 ಬಿಲಿಯನ್ ಡಾಲರ್‌ಗೂ ಅಧಿಕ ಹೂಡಿಕೆ ಮಾಡಲಾಗುವುದು, ಆಗಸ್ಟ್‌ನಿಂದ ಚಾಲನೆ ಮಾಡಬಹುದಾಗಿದೆ.

ಇದನ್ನೂ ಓದಿ: ಭಾರತ್ಜೆನ್ ಐನಿಂದ ಸ್ಕೈಏರ್ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಐ ಶಕ್ತಿ ಪ್ರದರ್ಶನ

ಎಲ್ ಅಂಡ್ ಟಿಯಿಂದ ಗೀಗಾವ್ಯಾಟ್ ಮಟ್ಟದ ಎಐ ಡಾಟಾ ಸೆಂಟರ್ ಫ್ಯಾಕ್ಟರಿ

ಎಲ್ ಅಂಡ್ ಟಿ ಸಂಸ್ಥೆ ಎನ್ ವಿಡಿಯಾ ಜೊತೆಗಿನ ಗೀಗಾವ್ಯಾಟ್ ಮಟ್ಟದ ಎಐ ಡಾಟಾ ಸೆಂಟರ್ ಫ್ಯಾಕ್ಟರಿಯನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಎಐ ಸಜ್ಜಿತ ಡಾಟಾ ಸೆಂಟರ್ ಇನ್ಫ್ರಾಸ್ಟ್ರಕ್ಚರ್, ಸುಧಾರಿತ ಕಂಪ್ಯೂಟಿಂಗ್ ಪ್ಲಾಟ್ಫಾರ್ಮ್ಗಳು, ಇಕೋಸಿಸ್ಟಂ ನಿರ್ಮಾಣ ವ್ಯವಸ್ಥೆಗಳು ಇರಲಿ.

ಎಲ್ ಅಂಡ್ ಟಿ ಸಂಸ್ಥೆ ಚೆನ್ನೈನಲ್ಲಿ 300 ಕೇಂದ್ರ ಪ್ರದೇಶದಲ್ಲಿ ಒಂದು ಡಾಟಾ ಸೆಂಟರ್ ಹೊಂದಿದೆ. ಅದು ಸದ್ಯಕ್ಕೆ 30 ಮೆಗಾವ್ಯಾಟ್ ಕೆಪಾಸಿಟಿಯ ಹೊಂದಿದ್ದು, ಮುಂದೆ ಅದನ್ನು ಗಿಗಾವ್ಯಾಟ್ ಮಟ್ಟಕ್ಕೆ ಏರಿಸುವ ಯೋಜನೆ ಇದೆ. ಅದಕ್ಕಾಗಿ ಎನ್ವಿಡಿಯಾದ ಜಿಪಿಯು ಕ್ಲಸ್ಟರ್ ಅನ್ನು ನಿಗದಿಪಡಿಸಲಾಗಿದೆ. ಇನ್ನು, ಮುಂಬೈನಲ್ಲಿ ಒಂದು ಟಾಟಾ ಸೆಂಟರ್ ನಿರ್ಮಾಣ ಆಗಲಿದೆ, ಅದರಲ್ಲಿ 40 ಮೆಗಾವ್ಯಾ ಸಾಮರ್ಥ್ಯವಿದೆ. I2I ನೆಟ್ವರ್ಕ್ಸ್ ಸಂಸ್ಥೆಯು ಟಿಐಆರ್ ಕ್ಲೌಡ್ ಕಂಪ್ಯೂಟ್ ಪ್ಲಾಟ್ಫಾರ್ಮ್ನಲ್ಲಿ ಎನ್ವಿಡಿಯಾ ಬ್ಲ್ಯಾಕ್ವೆಲ್ ಜಿಪಿಯು ಕ್ಲಸ್ಟರ್ ನಿರ್ಮಿಸುತ್ತಿದೆ.

ಇದನ್ನೂ ಓದಿ: ಎಐ ಸಮಿಟ್ ನಲ್ಲಿ ರಾರಾಜಿಸಿದ ಜಿಯೋ ಸ್ಟಾಲ್; ವಿವಿಧ ಮಾದರಿಗಳನ್ನು ಪ್ರಧಾನಿಗಳೆದುರು ತೆರೆದಿಟ್ಟ ಆಕಾಶ್ ಅಂಬಾನಿ

ನೆಟ್ವೆಬ್ ಟೆಕ್ನಾಲಜೀಸ್ ನಿಂದ ಎಐ ಸೂಪರ್ ಕಂಪ್ಯೂಟಿಂಗ್ ಸಿಸ್ಟಂಗಳು

ನೆಟ್ವೆಬ್ ಟೆಕ್ನಾಲಜೀಸ್ ಸಂಸ್ಥೆ ಭಾರತದಲ್ಲಿ ಎಐ ಸೂಪರ್ ಕಂಪ್ಯೂಟಿಂಗ್ ಸಿಸ್ಟಂಗಳನ್ನು ನಿರ್ಮಿಸಲಿದೆ. ಇದಕ್ಕಾಗಿ ಎನ್ವಿಡಿಯಾದ ಸೋವರಿನ್ ಎಐ ಡೆವಲಪ್ಮೆಂಟ್ ಟೂಲ್ಗಳನ್ನು ಬಳಸಲಾಗುವುದು. ವಿಶ್ವದರ್ಜೆಯ ಎಐ ಹಾರ್ಡ್‌ವೇರ್‌ಗಳನ್ನು ನಿರ್ಮಿಸುವ ಸಂಸ್ಥೆಯಾಗಿ ನೆಟ್‌ವೆಬ್ ಪರಿವರ್ತನೆಗೊಳ್ಳುತ್ತಿರುವುದು ಗಮನಾರ್ಹವಾಗಿದೆ. ಈ ಬೆಳವಣಿಗೆ ಆಗುತ್ತಲೇ ಇದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *