ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 3 ಚಿರತೆ ಮರಿಗಳ ಜನನ; ದೇಶದಲ್ಲಿ ಚೀತಾಗಳ ಸಂಖ್ಯೆ 38ಕ್ಕೆ ಏರಿಕೆ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 3 ಚಿರತೆ ಮರಿಗಳ ಜನನ; ದೇಶದಲ್ಲಿ ಚೀತಾಗಳ ಸಂಖ್ಯೆ 38ಕ್ಕೆ ಏರಿಕೆ


ಶಿವಪುರಿ, ಫೆ.18: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದಕ್ಷಿಣ ಆಫ್ರಿಕಾದ ಚೀತಾ ಗಾಮಿನಿಗೆ 3 ಮರಗಳು ಜನಿಸಿವೆ. ಈ ವಿಷಯವನ್ನು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಘೋಷಿಸಿದ್ದಾರೆ. ಇದು ಭಾರತದ ಚೀತಾ (ಚಿರತೆ) ಮರುಪರಿಚಯ ಕಾರ್ಯಕ್ರಮಕ್ಕೆ ಪ್ರಮುಖ ಮೈಲಿಗಲ್ಲು ಎಂದು ಕರೆದಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಭೂಪೇಂದರ್ ಯಾದವ್, ಭಾರತಕ್ಕೆ ದಕ್ಷಿಣ ಆಫ್ರಿಕಾದ ಚೀತಾಗಳು ಆಗಮನವಾಗಿ 3 ವರ್ಷಗಳಾಗಿವೆ. ಈಗ ಎರಡನೇ ಬಾರಿಗೆ ತಾಯಿಯಾಗಿರುವ ಗಾಮಿನಿ 3 ಮರಿಗಳಿಗೆ ಜನ್ಮ ನೀಡಿದ್ದಾರೆ. ಇದು ಉದ್ಯಾನವನದ ಬೆಳೆಯುತ್ತಿರುವ ಚೀತಾಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಾಜೆಕ್ಟ್ ಚೀತಾ ಪ್ರಾರಂಭವಾದ ನಂತರ ಭಾರತದಲ್ಲಿ ಜನಿಸಿದ ಒಂಬತ್ತನೇ ಯಶಸ್ವಿ ಚಿರತೆ ಮರಿ ಇದು. ಬದುಕುಳಿದ ಭಾರತೀಯ ಮೂಲದ ಮರಿಗಳ ಸಂಖ್ಯೆ 27ಕ್ಕೆ ಏರಿದೆ. ಭಾರತದ ಒಟ್ಟು ಚಿರತೆ ಸಂಖ್ಯೆ ಈಗ 38ರಷ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *