ಜೆಸಿ ಸಿನಿಮಾದ ನಾಯಕ ಪ್ರಖ್ಯಾತ್ ಇತ್ತೀಚೆಗೆ ಸಾರ್ವಜನಿಕವಾಗಿ ಮಚ್ಚು ಹಿಡಿದಿದ್ದ ವಿಡಿಯೋ ವೈರಲ್ ಆಗಿದೆ. ಯಾರೋ ಅಭಿಮಾನಿ ಕೊಟ್ಟ ಮಚ್ಚನ್ನು ನಟ ಪ್ರಖ್ಯಾತ್ ಹಿಡಿದುಕೊಂಡಿದ್ದರು. ಈ ಘಟನೆಯ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ. ಪ್ರಕರಣ ಕುರಿತಾಗಿ ವಿಚಾರಣೆಗೆಂದು ಪ್ರಖ್ಯಾತ್ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಬಳಿಕ ಮಾಧ್ಯಮಗಳ ಬಳಿ ಮಾತನಾಡಿದ ಪ್ರಖ್ಯಾತ್, ‘ಅಂದು ಅಚಾನಕ್ಕಾಗಿ ಯಾರೋ ಬಂದು ಮಚ್ಚು ಕೊಟ್ಟೆ, ನಾನು ಅದನ್ನು ಎಸೆದುಬಿಟ್ಟೆ. ನಮ್ಮ ಸಿನಿಮಾ ಹೇಳುತ್ತಿರುವುದೇ ಮಚ್ಚು ಹಿಡೀಬಾರದು ಎಂದ. ನಾನು ಪೊಲೀಸರಿಗೆ ಸಹ ಇದನ್ನೇ ಹೇಳಿದ್ದೀನಿ. ಪ್ರಚೋದೆ ಮಾಡುವ ಉದ್ದೇಶ ನನಗೆ ಇಲ್ಲ’ ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ