Ejaculation Without Penetration is Attempt to Rape, Not Rape: HC ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪೊಂದರಲ್ಲಿ, ಯೋನಿಯೊಳಗೆ ಜನನಾಂಗವನ್ನು ನುಗ್ಗಿಸದೆ ಮೇಲಿನಿಂದ ಉಜ್ಜುವುದು ‘ಅ*ತ್ಯಾಚಾರ’ ಅಲ್ಲ, ಬದಲಿಗೆ ‘ಅ*ತ್ಯಾಚಾರಕ್ಕೆ ಯತ್ನ’ ಎಂದು ಸ್ಪಷ್ಟಪಡಿಸಿದೆ.

ಪುರುಷ ಜನನಾಂಗವನ್ನು ಯೋನಿಯ ಒಳಗಡೆ ನುಗ್ಗಿಸದೇ, ಮೇಲಿಂದಲೇ ಉಜ್ಜುವುದು ಅ*ತ್ಯಾಚಾರವಲ್ಲ, ಇದು ‘ಅ*ತ್ಯಾಚಾರಕ್ಕೆ ಪ್ರಯತ್ನ’ ಎಂದಾಗುತ್ತದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅ*ತ್ಯಾಚಾರ ಯತ್ನ ಮತ್ತು ಅ*ತ್ಯಾಚಾರದ ನಡುವಿನ ಕಾನೂನು ವ್ಯತ್ಯಾಸವನ್ನು ಆಧರಿಸಿ, ಸಂತ್ರಸ್ಥೆ ಹುಡುಗಿಯ ಕನ್ಯಾಪೊರೆಗೆ ಏನೂ ಆಗಿಲ್ಲ ಎನ್ನುವ ವೈದ್ಯಕೀಯ ಪುರಾವೆಗಳು ಗಮನಾರ್ಹ ಅಂಶವಾಗಿರುವುದರಿಂದ, ನ್ಯಾಯಾಲಯವು ಅಪರಾಧಿಯ ಶಿಕ್ಷೆಯನ್ನು ಏಳು ವರ್ಷಗಳಿಂದ ಮೂರುವರೆ ವರ್ಷಗಳಿಗೆ ಮಾರ್ಪಾಡು ಮಾಡಿದೆ.

ಅ*ತ್ಯಾಚಾರಕ್ಕೆ ಯತ್ನಿಸಿದವನ ಉದ್ದೇಶ ಸ್ಪಷ್ಟವಾಗಿದೆ. ಆದರೆ, ಪುರುಷ ಜನನಾಂಗವನ್ನು ಯೋನಿಯ ಒಳಗಡೆ ಹಾಕಿರುವ ಯಾವುದೇ ಸಾಕ್ಷ್ಯ ಇಲ್ಲದೇ ಇರುವ ಕಾರಣ ಈ ಕೃತ್ಯವು ನಿಜವಾದ ಅ*ತ್ಯಾಚಾರವೆಂದು ಪರಿಗಣಿಸಲ್ಪಡುವುದಿಲ್ಲ ಎಂದು ನ್ಯಾಯಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ಗಮನಿಸಿದರು.

2004ರ ಮೇ 21 ರಂದು ನಡೆದ ಪ್ರಕರಣದಲ್ಲಿ ಛತ್ತೀಸ್‌ಗಢ ಹೈಕೋರ್ಟ್ ಈ ತೀರ್ಪು ನೀಡಿದೆ. ಆರೋಪಿಯು ಸಂತ್ರಸ್ತೆ ಒಂಟಿಯಾಗಿದ್ದಾಗ ಅವಳನ್ನು ತನ್ನ ಮನೆಗೆ ಎಳೆದುಕೊಂಡು ಹೋಗಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಭೋಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376(1) ರ ಅಡಿಯಲ್ಲಿ ಅತ್ಯಾಚಾರ ಮತ್ತು ಸೆಕ್ಷನ್ 342 ರ ಅಡಿಯಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಲಾಯಿತು. ವಿಚಾರಣಾ ನ್ಯಾಯಾಲಯ ಆತನಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತು.

ನಂತರ ಹೈಕೋರ್ಟ್ ಸೆಕ್ಷನ್ 376(1) ರ ಅಡಿಯಲ್ಲಿ ಶಿಕ್ಷೆಯನ್ನು ರದ್ದುಗೊಳಿಸಿ, ಮೇಲ್ಮನವಿ ಸಲ್ಲಿಸಿದ ವ್ಯಕ್ತಿಗೆ ಸೆಕ್ಷನ್ 376 ರ ಅಡಿಯಲ್ಲಿ ಅ*ತ್ಯಾಚಾರ ಯತ್ನಕ್ಕಾಗಿ ಸೆಕ್ಷನ್ 511 ರ ಅಡಿಯಲ್ಲಿ ಶಿಕ್ಷೆ ವಿಧಿಸಿತು. ಶಿಕ್ಷೆಯನ್ನು ಮೂರು ವರ್ಷ ಆರು ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು ₹200 ದಂಡಕ್ಕೆ ಮಾರ್ಪಡಿಸಲಾಯಿತು. ಉಳಿದ ಶಿಕ್ಷೆಯನ್ನು ಅನುಭವಿಸಲು ಮೇಲ್ಮನವಿ ಸಲ್ಲಿಸಿದ ವ್ಯಕ್ತಿ ಎರಡು ತಿಂಗಳೊಳಗೆ ಶರಣಾಗುವಂತೆ ನಿರ್ದೇಶಿಸಲಾಗಿದೆ.

Source link
ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು: ಪುರುಷ ಜನನಾಂಗ ಪ್ರವೇಶವಾಗದೆ ವೀರ್ಯ ವಿಸರ್ಜನೆಯಾದ್ರೆ ಅದು ಅ*ತ್ಯಾಚಾರವಲ್ಲ!