ಬೆಂಗಳೂರು, ಫೆಬ್ರವರಿ 18: ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳು ದೇಶದಲ್ಲೇ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ. ಅತಿ ಹೆಚ್ಚು ಟೈಫಾಯ್ಡ್ ಹಾಗೂ ಅತಿಸಾರ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ಟೈಫಾಯ್ಡ್ ನಂಬರ್ ಮೂರನೇ ಸ್ಥಾನ ಮತ್ತು ಅತಿಸಾರ ಪ್ರಕರಣಗಳಲ್ಲಿ 5ನೇ ಕರ್ನಾಟಕ ಪಡೆದಿದ್ದು, ಹಳ್ಳಿಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಯಾವ ಶಾಲೆಯಲ್ಲಿ ಎಷ್ಟು ಪ್ರಕರಣ? |
||
| ವರ್ಷ | ಅತಿಸಾರ ಕೇಸ್ | ಟೈಫಡ್ ಕೇಸ್ |
| 2025 | 1.8 ಲಕ್ಷ | 39,348 |
| 2024 | 1.8 ಲಕ್ಷ | 45,641 |
| 2023 | 1.4 ಲಕ್ಷ | 42,096 |
| 2022 | 1.3 ಲಕ್ಷ | 28232 |
ಇದನ್ನೂ ಓದಿ: ಮೊಬೈಲ್ ಪೋಷಕರಿಗೆ ದೊಡ್ಡ ಸವಾಲಾದ ಮಕ್ಕಳ ಅಡಿಕ್ಷನ್; ನಿಮ್ಹಾನ್ಸ್ ಮೊರೆ ಹೋದ ಹೆತ್ತವರು
ಅಕ್ಯುಟ್ ಡಯಾರಿಯಲ್ ಡಿಸೀಸ್ ಲಕ್ಷಣಗಳು ಏನು?
- ಭೇದಿ
- ವಾಕರಿಕೆ ಜೊತೆಗೆ ವಾಂತಿ
- ಕಿಬ್ಬೊಟ್ಟೆಯ ಸೆಳೆತ
- ಹೊಟ್ಟೆನೋವು
- ಜ್ವರದ ಲಕ್ಷಣ
ಮಕ್ಕಳು ಮತ್ತು ಹಿರಿಯರಲ್ಲೇ ಅಧಿಕ
2021 ರಿಂದ 2025 ರ ತನಕ ಕರ್ನಾಟಕದಲ್ಲಿ ಅತಿಹೆಚ್ಚು ಟೈಫಾಯ್ಡ್ ಮತ್ತು ಅತಿಸಾರ ಖಾಯಿಲೆಗಳು ಪ್ರಾರಂಭವಾಗಿದ್ದು, ರಾಜಧಾನಿಯಲ್ಲಿ ಕಲುಷಿತ ನೀರಿನ ಕಾರಣ ಪ್ರತಿ ದಿನ ಟೈಫಡ್ ಮತ್ತು ಅತಿಸಾರ ಕೇಸ್ಗಳು ಮೇಲಿಂದ ಮೇಲೆ ವರದಿಯಾಗಿದೆ. ಈ ನಡುವೆ ಪ್ರತಿ ಮಾದರಿಯಲ್ಲಿ ಪ್ರಕರಣಗಳು ಹೆಚ್ಚಿಗೆ ಹೆಚ್ಚಾಗುವ ಆತಂಕ ಕೂಡ ಇದೆ, ಕನಿಷ್ಠ 10 ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಟ್ಯಾಂಕರ್ ವಾಟರ್, ಡ್ರೈನೇಜ್ ಮಿಶ್ರಿತ ನೀರು, ಪ್ಯಾಕೇಡ್ಜ್ ವಾಟರ್, ಪೈಪ್ ಲೈನ್‌ಗಳ ಕಲುಷಿತ ನೀರಿನಿಂದ ಅತಿಸಾರ ಪ್ರಕರಣಗಳು ದ್ವಿಗುಣಗೊಂಡಿವೆ. ಇದರಿಂದ ವಾಂತಿ, ಭೇದಿಯಂತ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಮಕ್ಕಳು ಮತ್ತು ಹಿರಿಯರಲ್ಲಿ ಈ ಸಮಸ್ಯೆ ಅಧಿಕವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.