ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಮತ್ತು ತೆಲುಗಿನ ನಟ ವಿಜಯ್ ದೇವರಕೊಂಡ ತಮ್ಮ ಬಹುವರ್ಷಗಳ ಪ್ರೀತಿಯನ್ನು ದಾಂಪತ್ಯಕ್ಕೆ ಬಡ್ತಿ ನೀಡುತ್ತಿದ್ದಾರೆ. ಈ ಜೋಡಿ ಫೆಬ್ರವರಿ 26 ರಂದು ಅದ್ಧೂರಿಯಾಗಿ ವಿವಾಹವಾಗಲಿದ್ದು, ಮದುವೆ ಆಮಂತ್ರಣ ಪತ್ರಿಕೆಗಳನ್ನು ನೀಡಿ ಗಣ್ಯರನ್ನು ಮದುವೆಗೆ ಆಹ್ವಾನಿಸುತ್ತಿದ್ದಾರೆ. ಈ ಜೋಡಿ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹ ಆಗಲಿದೆ, ಇವರ ಮದುವೆ ಆಮಂತ್ರಣ ಪತ್ರಿಕೆ ಸಹ ಬಲು ಅದ್ಧೂರಿಯಾಗಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಅವರು ಆಮಂತ್ರಣ ಪತ್ರಿಕೆ ಬಾಕ್ಸ್ ಮಾದರಿಯಲ್ಲಿದ್ದು, ಬಾಕ್ಸ್ನಲ್ಲಿ ಆಮಂತ್ರಣ ಪತ್ರಿಕೆಯ ಜೊತೆಗೆ ಹಲವು ವಸ್ತುಗಳನ್ನು ಇಡಲಾಗಿದೆ. ರಶ್ಮಿಕಾ ತಮ್ಮ ಕ್ರಶ್ ಹೆಸರಿನ ಸುಗಂಧ ದ್ರವ್ಯ ಬ್ರ್ಯಾಂಡ್ ಹೊಂದಿದ್ದು, ಅದರ ಆಮಂತ್ರಣ ಪತ್ರಿಕೆಯ ಜೊತೆಗೆ ಇರಿಸಿದ್ದಾ. ಜೊತೆಗೆ ಹ್ಯಾಂಡ್ ಲೋಷನ್ ಮತ್ತು ಫುಟ್ ಕ್ರೀಮ್ ಗಳು ಸಹ ಆಮಂತ್ರಣ ಪತ್ರಿಕೆಯ ಬಾಕ್ಸ್ ನಲ್ಲಿವೆ. ಇನ್ನು ವಿಜಯ್ ದೇವರಕೊಂಡ ‘ರೌಡಿ’ ಹೆಸರಿನ ಪ್ಯಾಷನ್ ಬ್ರಾಂಡ್ ಹೊಂದಿರುವುದು ಗೊತ್ತೇ ಇದೆ. ಅವರು ತಮ್ಮ ಬ್ರ್ಯಾಂಡಿನ ಟಿ-ಶರ್ಟ್ ಬಾಕ್ಸ್ ನಲ್ಲಿ ಇರಿಸಿದ್ದಾರೆ.
ಆಮಂತ್ರಣ ಪತ್ರಿಕೆ ಬಾಕ್ಸ್ ನಲ್ಲಿ ಪ್ರೀಮಿಯಂ ಬ್ರ್ಯಾಂಡಿನ ಒಣ ಹಣ್ಣುಗಳ ಪಾಕೆಟ್ ಅನ್ನು ಸಹ ಇರಿಸಲಾಗಿದೆ. ಎಲ್ಲವನ್ನೂ ಸುಂದರವಾಗಿ ಪ್ರೆಸೆಂಟೆಬಲ್ ರೀತಿಯಲ್ಲಿ ಪ್ಯಾಕ್ ಮಾಡಲಾಗಿದೆ. ಇವುಗಳ ಜೊತೆಗೆ ಹಾಳೆಯೊಂದರಲ್ಲಿ ಸರಳವಾದ ಆಮಂತ್ರಣ ಪತ್ರಿಕೆ ಇದ್ದು, ಅದರಲ್ಲಿ ಮದುವೆಯ ದಿನಾಂಕ, ಬಳಿಕ ರಿಸೆಪ್ಷನ್ ದಿನಾಂಕವನ್ನು ನಮೂದಿಸಲಾಗಿದೆ. ಮದುವೆ ಫೆಬ್ರವರಿ 26 ಕ್ಕೆ ನಡೆಯಲಿದ್ದು, ಮದುವೆ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ಮತ್ತು ಅತ್ಯಾಪ್ತ ಸ್ನೇಹಿತರಷ್ಟೇ ಭಾಗಿ ಆಗಲಿದ್ದಾರೆ. ಬಳಿಕ ಮಾರ್ಚ್ 04 ರಂದು ಹೈದರಾಬಾದ್ ನ ತಾಜ್ ಕೃಷ್ಣನಲ್ಲಿ ಅದ್ಧೂರಿ ರಿಸೆಪ್ಷನ್ ಆರಂಭಿಸಿದ್ದು, ಈ ಕಾರ್ಯಕ್ರಮದಲ್ಲಿ ಟಾಲಿವುಡ್ ಮತ್ತು ಬಾಲಿವುಡ್ ನ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ‘ಛಾವ’ ಸಿನಿಮಾಗೆ ಒಂದು ವರ್ಷ: ನೆನಪಿನ ಪುಟ ತೆರೆದ ರಶ್ಮಿಕಾ ಮಂದಣ್ಣ
ಅದಾದ ಕೆಲವು ದಿನಗಳ ನಂತರ ಹೈದರಾಬಾದ್ ಮತ್ತು ಮುಂಬೈಗಳಲ್ಲಿ ಮಾಧ್ಯಮದವರು ಫೋಟೊಗ್ರಾಫರ್ಗಳಿಗಾಗಿ ವಿಶೇಷವಾದ ಪಂದ್ಯಾವಳಿಯನ್ನು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ನಡೆಸುತ್ತಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಕಳೆದ ಕೆಲವಾರು ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಇಬ್ಬರೂ ಒಟ್ಟಿಗೆ ‘ಗೀತ ಗೋವಿಂದಂ’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ 2018 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಆಗ ಇಬ್ಬರು ಗೆಳೆಯ, ಆದರೆ ಬಳಿಕ ಆ ಗೆಳತನ ಪ್ರೀತಿಗೆ ತಿರುಗಿತು. ಕಳೆದ ಕೆಲ ವರ್ಷಗಳಿಂದ ಲಿವಿನ್ ರಿಲೇಷನ್ನಲ್ಲಿದ್ದರು. ಇದೀಗ ಕೊನೆಗೂ ಮದುವೆ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ