Headlines

ರಶ್ಮಿಕಾ ಮಂದಣ್ಣ ಪಾಲಿನ ಪಲಾಶ್‌ ಮುಚ್ಚಾಲ್‌ ಆಗ್ತಾರಾ ವಿಜಯ್‌ ದೇವರಕೊಂಡ, ಬೆಡ್‌ರೂಮ್‌ ಫೋಟೋ ಮತ್ತೆ ವೈರಲ್‌!

ರಶ್ಮಿಕಾ ಮಂದಣ್ಣ ಪಾಲಿನ ಪಲಾಶ್‌ ಮುಚ್ಚಾಲ್‌ ಆಗ್ತಾರಾ ವಿಜಯ್‌ ದೇವರಕೊಂಡ, ಬೆಡ್‌ರೂಮ್‌ ಫೋಟೋ ಮತ್ತೆ ವೈರಲ್‌!

ರಶ್ಮಿಕಾ ಮಂದಣ್ಣ ಪಾಲಿನ ಪಲಾಶ್‌ ಮುಚ್ಚಾಲ್‌ ಆಗ್ತಾರಾ ವಿಜಯ್‌ ದೇವರಕೊಂಡ, ಬೆಡ್‌ರೂಮ್‌ ಫೋಟೋ ಮತ್ತೆ ವೈರಲ್‌!

Vijay Deverakonda’s Old Photos with Belgian Model Virginie Go Viral ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ವದಂತಿಗಳ ನಡುವೆಯೇ, ದಶಕದ ಹಿಂದೆ ವಿಜಯ್ ಪ್ರೀತಿಸುತ್ತಿದ್ದ ಬೆಲ್ಜಿಯಂ ಮಾಡೆಲ್ ವರ್ಜಿನಿ ಅವರೊಂದಿಗಿನ ಖಾಸಗಿ ಫೋಟೋಗಳು ವೈರಲ್ ಆಗಿವೆ.

ವರ್ತಮಾನದ ಬದುಕು ಕುತೂಹಲಕಾರಿಯಾಗಿರುವಾಗಲೇ ಹಳೆಯ ನೆನಪುಗಳು ಬಂದು ಬಾಗಿಲು ತಟ್ಟುತ್ತವೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಅವರ ಮದುವೆಯ ಸುದ್ದಿ ಚಾಲ್ತಿಯಲ್ಲಿ ಇರುವಾಗಲೇ, ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ಬೆಲ್ಜಿಯಂ ಮೂಲದ ಮಾಡೆಲ್ ವರ್ಜಿನಿ (Virginie) ಅವರ ದಶಕದ ಹಳೆಯ ಖಾಸಗಿ ಫೋಟೋಗಳು ದಿಢೀರನೆ ಪ್ರತ್ಯಕ್ಷವಾಗಿ ಸಂಚಲನ ಮೂಡಿಸಿವೆ.

ಇದರ ಬೆನ್ನಲ್ಲಿಯೇ ರಶ್ಮಿಕಾ ಮಂದಣ್ಣ ಪಾಲಿನ ಪಲಾಶ್‌ ಮುಚ್ಚಾಲ್‌ ಆಗ್ತಾರಾ ವಿಜಯ್‌ ದೇವರಕೊಂಡ ಅನ್ನೋ ಚರ್ಚೆ ಶುರುವಾಗಿದೆ. ಕ್ರಿಕೆಟ್‌ ಆಟಗಾರ್ತಿ ಸ್ಮೃತಿ ಮಂಧನಾ ಹಾಗೂ ಪಲಾಶ್‌ ಮುಚ್ಚಾಲ್‌ ನಡುವಿನ ದೀರ್ಘಕಾಲದ ರಿಲೇಷನ್‌ಷಿಪ್‌ ಮದುವೆಯ ಹಿಂದಿನ ದಿನ ಇಂಥದ್ದೇ ಕಾರಣಕ್ಕಾಗಿ ಮುರಿದುಬಿದ್ದಿತ್ತು. ಹಾಗಾಗಿ ವಿಜಯ್‌ ದೇವರಕೊಂಡ ಹಾಗೂ ವರ್ಜಿನಿ ನಡುವಿನ ರಿಲೇಷನ್‌ಷಿಪ್‌ ಫೋಟೋ ಕುತೂಹಲ ಮೂಡಿದೆ.

ವಿಜಯ್ ದೇವರಕೊಂಡ ಅವರು ‘ಅರ್ಜುನ್ ರೆಡ್ಡಿ’ ಅಥವಾ ‘ಫ್ಯಾಮಿಲಿ ಸ್ಟಾರ್’ ಆಗುವ ಮುನ್ನವೇ ವರ್ಜಿನಿ ಅವರು ವಿಜಯ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲ, ವಿಜಯ್ ಅವರಿಗೆ ದೊಡ್ಡ ಬ್ರೇಕ್ ನೀಡಿದ 2016ರ ಸೂಪರ್ ಹಿಟ್ ಸಿನಿಮಾ ‘ಪೆಳ್ಳಿ ಚೂಪುಲು’ನಲ್ಲಿ ವರ್ಜಿನಿ ಒಂದು ಸಣ್ಣ ಪಾತ್ರವನ್ನೂ ಮಾಡಿದ್ದರು.

2026ರ ಫೆಬ್ರವರಿ ಆರಂಭದಲ್ಲಿ ವೈರಲ್ ಆಗಿರುವ ಈ ಫೋಟೋಗಳಲ್ಲಿ ವಿಜಯ್ ಅವರ ಅಪರೂಪದ ಖಾಸಗಿ ಕ್ಷಣಗಳಿವೆ. ಈ ಚಿತ್ರಗಳಲ್ಲಿ ವರ್ಜಿನಿ ಕೇವಲ ವಿಜಯ್ ಜೊತೆ ಮಾತ್ರವಲ್ಲದೆ, ಅವರ ತಾಯಿ ಮಾಧವಿ ಮತ್ತು ಸಹೋದರ ಆನಂದ್ ಅವರೊಂದಿಗೂ ಆತ್ಮೀಯವಾಗಿ ಸಮಯ ಕಳೆದಿದ್ದರು. ಇದನ್ನು ಗಮನಿಸಿದರೆ ವರ್ಜಿನಿ ಅವರು ಒಂದು ಕಾಲದಲ್ಲಿ ದೇವರಕೊಂಡ ಕುಟುಂಬದ ಅವಿಭಾಜ್ಯ ಅಂಗವಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಸಿನಿಮಾ ರಂಗದ ಆಪ್ತ ಮೂಲಗಳ ಪ್ರಕಾರ, ವಿಜಯ್ ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಸುಮಾರು ಎಂಟು ವರ್ಷಗಳ ಹಿಂದೆಯೇ ಅಂದರೆ 2018ರಲ್ಲಿ ವಿಜಯ್ ನಟನೆಯ ‘ನೋಟಾ’ (NOTA) ಸಿನಿಮಾ ಬಿಡುಗಡೆಗೂ ಮುನ್ನವೇ ಇಬ್ಬರು ಬೇರ್ಪಟ್ಟಿದ್ದರು ಎನ್ನಲಾಗಿದೆ.

ಈ ಹಳೆಯ ಫೋಟೋಗಳು ಈಗಲೇ ಮತ್ತೆ ಮುನ್ನೆಲೆಗೆ ಬರಲು ಒಂದು ಪ್ರಬಲ ಕಾರಣವಿದೆ. ಪ್ರಸ್ತುತ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಹಾಗೂ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ವಿಜಯ್ ಅವರ ವೈಯಕ್ತಿಕ ಜೀವನದ ಬಗ್ಗೆ ಯಾವುದೇ ಚಿಕ್ಕ ಸುಳಿವು ಸಿಕ್ಕರೂ ಅದನ್ನು ದೊಡ್ಡದು ಮಾಡಲು ಕಾಯುತ್ತಿದ್ದಾರೆ. ಈಗ ಹಳೆಯ ದಾಖಲೆಗಳನ್ನು ಕೆದಕಿ ವಿಜಯ್ ಅವರ ಈ ಹಳೆಯ ಪ್ರೇಮ ಕಥೆಯನ್ನು ಮತ್ತೆ ಚರ್ಚೆಗೆ ತಂದಿದ್ದಾರೆ.

Source link

Leave a Reply

Your email address will not be published. Required fields are marked *