Headlines

Garden Tips : ಗಿಡ ಒಣಗ್ತಿದ್ರೆ ಬೇಜಾರಾಗ್ಬೇಡಿ, ಸಿಂಪಲ್ ಟ್ರಿಕ್ಸ್ ಬಳಸಿ ಮರುಜೀವ ನೀಡಿ | Garden Tips Bring A Dying Plant Back To Life Using Simple Tricks

Garden Tips : ಗಿಡ ಒಣಗ್ತಿದ್ರೆ ಬೇಜಾರಾಗ್ಬೇಡಿ, ಸಿಂಪಲ್ ಟ್ರಿಕ್ಸ್ ಬಳಸಿ ಮರುಜೀವ ನೀಡಿ | Garden Tips Bring A Dying Plant Back To Life Using Simple Tricks



Garden Tips : ಗಿಡ ಒಣಗ್ತಿದ್ರೆ ಬೇಜಾರಾಗ್ಬೇಡಿ, ಸಿಂಪಲ್ ಟ್ರಿಕ್ಸ್ ಬಳಸಿ ಮರುಜೀವ ನೀಡಿ | Garden Tips Bring A Dying Plant Back To Life Using Simple Tricks

Balcony Garden Tips : ಮನೆಯಲ್ಲಿ ಪ್ರೀತಿಯಿಂದ ಬೆಳೆಸಿರೋ ಗಿಡ ಒಣಗಿದ್ರೆ ನೋವಾಗೋದು ಸಹಜ. ಒಂದೊಂದೇ ಎಲೆ ಬಾಡ್ತಿದೆ ಎಂದಾಗ್ಲೇ ನೀವು ಕೆಲ ಕ್ರಮಕೈಗೊಂಡ್ರೆ ಗಿಡ ಮತ್ತೆ ಚಿಗುರುತ್ತೆ. ಹಸಿರು ಎಲೆ ನಿಮ್ಮ ಕಣ್ಣುತಂಪು ಮಾಡುತ್ತೆ. 

ಬಾಲ್ಕನಿ ಗಾರ್ಡನ್ (Balcony Garden) ನಲ್ಲಿ ಸುಂದರ ಹೂವಿನ ಗಿಡ ತಂದು ಬೆಳೆಸಿರ್ತೀರಿ. ಸ್ವಲ್ಪ ದಿನ ಸಾಕಷ್ಟು ಹೂ ಬಿಡೋ ಗಿಡ ಇದ್ದಕ್ಕಿದ್ದಂತೆ ಬಾಡಲು ಶುರುವಾಗುತ್ತೆ. ಎಲೆಗಳು ಒಣಗುತ್ವೆ. ನಾಲ್ಕೈದು ಎಲೆ ಒಣಗಿ, ಗಿಡ ಹಸಿರು ಕಳೆದುಕೊಳ್ತಿದ್ದಂತೆ ಅದ್ರ ಮೇಲಿನ ಭರವಸೆಯನ್ನೂ ನಾವು ಕಳೆದುಕೊಳ್ತೇವೆ. ಗಿಡ ಸತ್ತೊಯ್ತು ಅಂತ ಅದನ್ನು ಪಾಟ್ ನಿಂದ ಕಿತ್ತೆಸೆಯೋ ತೀರ್ಮಾನಕ್ಕೆ ಬರ್ತೇವೆ. ಆದ್ರೆ ಎಲ್ಲ ಸಮಯದಲ್ಲಿ ಗಿಡ ಸತ್ತಿರೋದಿಲ್ಲ. ಗಿಡ ಮತ್ತೆ ಚಿಗುರುವ ಸಾಧ್ಯತೆ ಇರುತ್ತೆ. ನೀವು ಅದಕ್ಕೆ ಮತ್ತೆ ಜೀವ ನೀಡುವ ಪ್ರಯತ್ನ ಮಾಡ್ಬಹುದು.

ಸಾಯ್ತಿರೋ ಗಿಡಕ್ಕೆ ಮರು ಜೀವ

ನೀವು ಸಾಯ್ತಿರೋ ಗಿಡವನ್ನು ಕೆಲ ವಿಧಾನಗಳನ್ನು ಫಾಲೋ ಮಾಡುವ ಮೂಲಕ ಮತ್ತೆ ಬದುಕಿಸಬಹುದು. ಮೊದಲು ಗಿಡದ ಬೇರುಗಳನ್ನು ಪಾಟ್ ನಿಂದ ತೆಗೆಯಬೇಕು. ನಿಧಾನವಾಗಿ ಗಿಡವನ್ನು ಪಾಟ್ ನಿಂದ ಬೇರ್ಪಡಿಸಿ, ಬೇರಿಗೆ ಅಂಟಿರುವ ಹಳೆ ಮಣ್ಣನ್ನು ಕ್ಲೀನ್ ಮಾಡಿ. ನಂತ್ರ ಒಣಗಿದ ಎಲೆಯನ್ನು ಕತ್ತರಿಸಿ. ಒಂದು ಬೌಲ್ ಗೆ ನೀರನ್ನು ಹಾಕಿ. ಆಮ್ಲಜನಕ ಹೆಚ್ಚಿಸೋ ಹಾಗೆ ಬೇರುಗಳು ಚೇತರಿಸಿಕೊಳ್ಳಲು ಸಹಾಯ ಮಾಡುವ ಹೈಡ್ರೋಜನ್ ಪೆರಾಕ್ಸೈಡ್ ಹಾಕಬೇಕು. ಇದು ಗಿಡ ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ. ನೀವು ಒಂದು ಟೀಚಮಚ ಹೈಡ್ರೋಜನ್ ಪೆರಾಕ್ಸೈಡ್ ಒಂದೂವರೆ ಲೀಟರ್ ನೀರನ್ನು ಹಾಕಿ. ಇದರಲ್ಲಿ ನಿಧಾನವಾಗಿ ಗಿಡದ ಬೇರುಗಳನ್ನು ನೆನೆಸಿಡಿ. ಸುಮಾರು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಹಾಕಬೇಕು. ಇದು ಬೇರುಗಳು ಮತ್ತೆ ಶಕ್ತಿ ಪಡೆಯಲು ಸಹಾಯ ಮಾಡುತ್ತದೆ.

Garden tips : ಗಿಡದ ತುಂಬಾ ಹೂ ಬಿಡಬೇಕಾ? ಕೆಮಿಕಲ್ ಎಲ್ಲ ಬೇಡ, ಇಷ್ಟು ಮಾಡಿ ಸಾಕು

ನಂತ್ರ ಸುಂದರವಾದ ಒಂದು ಗ್ಲಾಸ್ ಪಾಟ್ ತೆಗೆದುಕೊಳ್ಳಿ. ಅದಕ್ಕೆ ಸಾಮಾನ್ಯ ನೀರನ್ನು ಹಾಕಿ. ನಂತ್ರ ಗಿಡ ತುಂಬಾ ಉದ್ದವಾಗಿದ್ದರೆ ಅದರ ಕಾಂಡವನ್ನು ಸ್ವಲ್ಪ ಕತ್ತರಿಸಿ. ನಂತ್ರ ಬೇರುಗಳನ್ನು ನೀರಿನಲ್ಲಿ ನೆನೆಸಿಡಿ. ಅನೇಕ ಬಾರಿ ಗಿಡಕ್ಕೆ ಬೆಳಕು, ಸ್ವಲ್ಪ ನೀರು ಮತ್ತು ಸ್ವಲ್ಪ ಸಮಯದ ಅಗತ್ಯವಿರುತ್ತದೆ. ಅಂಬ್ರೆಲಾ ಎಂದು ಕರೆಯುವ ಶೆಫ್ಲೆರಾದಂತ ಸಸ್ಯಗಳಿಗೆ ನೀವು ಇಷ್ಟನ್ನು ನೀಡಿದ್ರೆ ಸಾಕು, ಒಂದು ತಿಂಗಳಲ್ಲಿ ಅವು ಮತ್ತೆ ಚಿಗುರುತ್ತವೆ. ಬೇರುಗಳು ಶಕ್ತಿ ಪಡೆಯುತ್ತವೆ. ಕಾಂಡದ ಬಣ್ಣ ಬದಲಾಗುತ್ತದೆ. ಎಲೆಗಳು ಹೊರ ಬರಲು ಶುರುವಾಗುತ್ವೆ.

ಅಡುಗೆಮನೆಯಲ್ಲಿ ಮನಿ ಪ್ಲಾಂಟ್ ಬೆಳೆಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಗಿಡ ಚಿಗುರೊಡೆಯುತ್ತಿದ್ದಂತೆ ನೀವು ಅದನ್ನು ಬೇರೆ ಪಾಟ್ ಗೆ ಸ್ಥಳಾಂತರಿಸಬಹುದು. ಅದಕ್ಕೆ ನೀವು ಮಾಡ್ಬೇಕಾಗಿದ್ದೇನೆಂದ್ರೆ ಗೊಬ್ಬರ ಮಿಕ್ಸ್ ಆಗಿರುವ ಮಣ್ಣನ್ನು ಹಾಕಬೇಕು. ಮೊದಲು ಪಾಟ್ ಗೆ ಜೇಡಿ ಮಣ್ಣನ್ನು ಹಾಕಿ ನಂತ್ರ ಅದ್ರ ಮೇಲೆ ಗೊಬ್ಬರ ಮಿಕ್ಸ್ ಆಗಿರುವ ಮಣ್ಣನ್ನು ಸೇರಿಸಿ. ಅದ್ರ ಮೇಲೆ ಗಿಡದ ಬೇರುಗಳನ್ನು ಇಟ್ಟು ಮತ್ತೆ ಮಣ್ಣನ್ನು ಹಾಕಿ. ಬೇರುಗಳನ್ನು ತುಂಬಾ ಕೆಳಗೆ ಇಟ್ಟು ಮಣ್ಣನ್ನು ಮುಚ್ಚಬಾರದು. ಹಾಗೆಯೇ ಕಾಂಡದ ಮೇಲೆ ಹೆಚ್ಚು ಮಣ್ಣನ್ನು ಹಾಕ್ಬೇಡಿ. ಅದು ಮೇಲಿರುವಂತೆ ನೋಡಿಕೊಳ್ಳಿ. ಒಂದು ಸ್ಪೂನ್ ಹೈಡ್ರೋಜನ್ ಪೆರಾಕ್ಸೈಡ್ ಗೆ ಒಂದು ಲೀಟರ್ ನೀರನ್ನು ಮಿಕ್ಸ್ ಮಾಡಿ. ನಂತ್ರ ಈ ನೀರನ್ನು ಗಿಡಕ್ಕೆ ಹಾಕಬೇಕು. ಗಿಡಕ್ಕೆ ಸರಿ ಪ್ರಮಾಣದ ನೀರು ಅಗತ್ಯ. ನೀರು ಹೆಚ್ಚಾದಲ್ಲಿ ಅಥವಾ ನೀರು ಕಡಿಮೆಯಾದಲ್ಲಿ ಗಿಡ ಚೆನ್ನಾಗಿ ಬೆಳೆಯುವುದಿಲ್ಲ. ಸರಿ ಪ್ರಮಾಣದಲ್ಲಿ ನೀರನ್ನು ಹಾಕ್ತಾ ಬಂದ್ರೆ ಗಿಡ ಮತ್ತೆ ಚಿಗುರೊಡೆದು ಹೂ ಬಿಡೋದನ್ನು ನೀವು ನೋಡ್ಬಹುದು.



Source link

Leave a Reply

Your email address will not be published. Required fields are marked *