Headlines

ಎ ಖಾತಾ ವರ್ಗಾವಣೆಗೆ ಆನ್​ಲೈನ್​​ನಲ್ಲಿ ಹಣ ಪಾವತಿಸುವ ಮುನ್ನ ಎಚ್ಚರ: ಎ ಖಾತಾ ಮಾಡಿಸುವವರು ಇದನ್ನ ಓದಲೇಬೇಕು

ಎ ಖಾತಾ ವರ್ಗಾವಣೆಗೆ ಆನ್​ಲೈನ್​​ನಲ್ಲಿ ಹಣ ಪಾವತಿಸುವ ಮುನ್ನ ಎಚ್ಚರ: ಎ ಖಾತಾ ಮಾಡಿಸುವವರು ಇದನ್ನ ಓದಲೇಬೇಕು


ಬೆಂಗಳೂರು, ಫೆಬ್ರವರಿ 18: ಸಾರ್ವಜನಿಕರು ಬೆಂಗಳೂರು ಪಾಲಿಕೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಗ್ರೇಟರ್ ಪ್ರಾಧಿಕಾರ (GBA) ಇತ್ತೀಚೆಗೆ ಬಿ ಖಾತಾ (ಬಿ ಖಾತಾ) ಆಸ್ತಿ ಹೊಂದಿರುವ ಖಾತೆಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇದೆ ಆನ್‌ಲೈನ್ ವ್ಯವಸ್ಥೆಯಲ್ಲಿ ಸಮಸ್ಯೆಗಳು ಉಂಟಾಗಿವೆ. ಆಸ್ತಿ ಖಾತಾ ವರ್ಗಾವಣೆಗೆ ಸಾಕಷ್ಟು ರೂ ಹಣ ನೀಡಿದ ಬಳಿಕವೂ ವೆಬ್ ಸೈಟ್‌ನಲ್ಲಿ ಮಾತ್ರ ಪೆಂಡಿಂಗ್ ತೋರಿಸುತ್ತಿದೆ. ಹೀಗಾಗಿ ಆಸ್ತಿ ತೊಂದರೆಗೆ ಒಳಗಾಗಿದ್ದಾರೆ. ಇನ್ನೊಂದೆಡೆ ಸಾರ್ವಜನಿಕರಿಗೆ ಜಿಬಿಎ ದೋಖಾ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಈ ಬಗ್ಗೆ ಟಿವಿ9 ಡಿಜಿಟಲ್ ಕನ್ನಡಕ್ಕೆ ಬೆಂಗಳೂರಿನ ಆಸ್ತಿಯಾದ ಎಂ. ಶ್ರೀನಿವಾಸ ಎಂಬುವವರು ತಮಗಾದ ತೊಂದರೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಗರದ ವಾರ್ಡ್ 161ರ ವ್ಯಾಪ್ತಿಗೆ ಬರುವ ಹೊಸಕೆರೆಹಳ್ಳಿಯಲ್ಲಿ ವಾಸವಾಗಿರುವ ಎಂ. ಶ್ರೀನಿವಾಸ ಅವರು, ಅಲ್ಲಿ ಇರುವಂತಹ ಬಿ ಖಾತಾ ಸ್ವತ್ತಿನ ಮನೆಗೆ ಎ ಖಾತಾಗೆ ವರ್ಗಾವಣೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು.

ಆಸ್ತಿಯಾದ ಎಂ. ಶ್ರೀನಿವಾಸ ಟ್ವೀಟ್

ಈ ಸ್ವತ್ತು ಅವರ ಪತ್ನಿ ಸ್ವಾತಿ ಎನ್.ಕೆ. ಹೆಸರಿನಲ್ಲಿದ್ದು, ಕಳೆದ ಶುಕ್ರವಾರ ಅಂದರೆ ಫೆಬ್ರವರಿ 12ರಂದು ಒಟ್ಟು ಒಂದು ಲಕ್ಷದ ಅರವತ್ತೇಳು ಸಾವಿರದ ಏಳು ನೂರಾ ಎಪ್ಪತ್ತೊಂದು ರೂಪಾಯಿ ಆನ್‌ಲೈನ್ ಮೂಲಕ ಪಾವತಿ ಮಾಡಲಾಗಿದೆ. ಆದರೆ ಏಳು ದಿನಗಳ ನಂತರವೂ ಪಾವತಿಯು ಪೆಂಡಿಂಗ್ ಎಂಬ ಸ್ಟೇಟಸ್‌ನಲ್ಲಿದೆ. ಈ ವಿಚಾರಕ್ಕೆ ಎಂ. ಶ್ರೀನಿವಾಸ ಅವರಿಗೆ ಯಾರು ಸ್ಪಷ್ಟತೆ ಸಿಕ್ಕಿಲ್ಲ.

ಇದನ್ನೂ ಓದಿ: ಬೆಂಗಳೂರಿನ ಬಿ ಖಾತಾದಾರರಿಗೆ ಗುಡ್ ನ್ಯೂಸ್: ಹಲವಾರು ಅಪಾರ್ಟ್‌ಮೆಂಟ್‌ಗಳಿಗೆ ಸಿಗಲಿದೆ ಎ ಖಾತಾ!

ಇನ್ನು ಕೆಲವು ರೂ ಹಣ ಮಾತ್ರ ಖಾತೆಯಿಂದ ಡೆಬಿಟ್ ಆಗಿದೆ. ಆದರೆ ಆ ಮೊತ್ತಕ್ಕೆ ಜಿಬಿಎ ಕಡೆಯಿಂದ ಯಾವುದೇ ರಸೀದಿ ಕೂಡ ಇವರಿಗೆ ತಲುಪಿಲ್ಲ. ಇಷ್ಟು ದೊಡ್ಡ ಹೀಗೆ ಒಂದು ವಾರ ಕಳೆದರೂ ಯಾವ ಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುವುದೇ ಪರದಾಡಿದ್ದಾರೆ. ಇನ್ನು ಈ ಸಮಸ್ಯೆಯನ್ನು ಯಾರು ಪರಿಹರಿಸುತ್ತಾರೆ ಎಂಬುವುದು ಕಂಗಾಲಾಗಿದ್ದಾರೆ.

ಇದನ್ನೂ ಓದಿ: BBMP Khata Services: ಎಲ್ಲ ಬಿ ಖಾತಾದಾರರಿಗೆ ಸಿಗಲಿದೆ ಎ ಖಾತಾ ಮಾನ್ಯತೆ: ಆಸ್ತಿ ಅವರಿಗೆ ಸಂಪುಟ ಭರ್ಜರಿ ಗುಡ್ ನ್ಯೂಸ್

ಅವರ ವ್ಯಾಪ್ತಿಯ ಎಆರ್‌ಒ ಹಿಡಿದು, ಜಿಬಿಎ ಕೇಂದ್ರ ಕಚೇರಿ ತನಕ ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಪಾವತಿ ಮಾಡಿರುವ ಮೊತ್ತದ ಬಗ್ಗೆ ಆತಂಕಗೊಂಡಿದ್ದು, ದಯವಿಟ್ಟು ಸಮಸ್ಯೆಗೆ ಪರಿಹಾರ ತಿಳಿಸುವಂತೆ ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *