
ಮೂರು ಅಥವಾ ಐವರು ಮುತ್ತೈದೆಯರಿಗೆ ಈ ದಿನ ಸಂಜೆಯ ವೇಳೆ ಅರಿಶಿನ- ಕುಂಕುಮ, ಕುಪ್ಪಸದ ಕಣಗಳೊಂದಿಗೆ ನೀಡಿ. ಮನೆ ಅಥವಾ ಸೈಟು ಖರೀದಿ ಎಂಬ ಪ್ರಯತ್ನದಲ್ಲಿ ಇದ್ದಲ್ಲಿ, ಸಾಲ ತೀರಿಸುವ ಪ್ರಯತ್ನದಲ್ಲಿ ಶುಭ ಬೆಳವಣಿಗೆಗಳು ಆಗಲಿವೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಜೊತೆ ಕುಟುಂಬ ಸದಸ್ಯರು ಅಥವಾ ಸಹೋದ್ಯೋಗಿಗಳು ಏನು ಆಲೋಚನೆ ಮಾಡುತ್ತಾರೆ ಹಾಗೂ ಆಯಾ ಇರುವ ಸನ್ನಿವೇಶಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಿ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದಲ್ಲಿ ಆದಾಯ ಹೆಚ್ಚಲಿದೆ. ಹೊಸದಾದ ಆದಾಯ ಮೂಲಗಳು ತೆರೆದುಕೊಳ್ಳಲಿವೆ. ಶ್ವಾಸಕೋಶದ ಸಮಸ್ಯೆ ಇರುವವರು ಸೂಕ್ತ ವೈದ್ಯೋಪಚಾರ ಪಡೆಯಲು ಆದ್ಯತೆಯನ್ನು ನೀಡಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಮನೆ ಅಥವಾ ಜಮೀನಿಗೆ ಸಂಬಂಧಿಸಿದ ಕಾಗದಪತ್ರ/ದಾಖಲೆಗಳನ್ನು ಹೊಂದಿಸಿಕೊಳ್ಳುತ್ತಾ ಇದ್ದಲ್ಲಿ ನಿಮಗೆ ಮತ್ತೊಬ್ಬರ ಸಹಾಯದಿಂದ ದೊರೆಯಲಿದೆ. ಹಳೇ ಪರಿಚಯದ ವ್ಯಕ್ತಿಯೊಬ್ಬರು ಈ ಹಿಂದೆ ನೀವು ಮಾಡಿಕೊಟ್ಟ ಕೆಲಸಕ್ಕೆ ಪ್ರತಿಯಾಗಿ ಉಡುಗೊರೆಯಾಗಿ ಅಥವಾ ಹಣವನ್ನು ನೀಡಬಹುದು. ಟೈಲ್ಸ್- ಗ್ರಾನೈಟ್ ಹಾಕುವಂಥ ಕೆಲಸ ಮಾಡುವವರಿಗೆ ದೊಡ್ಡ ಮಟ್ಟದ ಕೆಲಸವೊಂದು ಹುಡುಕಿಕೊಂಡು ಬರುವ ಯೋಗ ಇದ್ದು, ಆದಾಯವೂ ಜಾಸ್ತಿಯಾಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಮನೆಯ ಕಾರ್ಯಕ್ರಮಗಳಿಗೆ ಸ್ವಲ್ಪ ಮುಂಚಿತವಾಗಿಯೇ ಬಂದು ಸಹಾಯ ಮಾಡುವಂತೆ ನಿಮ್ಮನ್ನು ಕೇಳಿಕೊಳ್ಳಬಹುದು. ಇನ್ನು ಮನೆಗೆ ಟೀವಿ, ಸ್ಪೀಕರ್ ಈ ರೀತಿಯಾದದ್ದನ್ನು ಖರೀದಿಸಬೇಕು ಎಂದು ತೀರ್ಮಾನಿಸಲಾಗಿದೆ. ಅಧ್ಯಾತ್ಮ ವಿಚಾರಗಳಲ್ಲಿಯೂ ತೊಡಗಿಕೊಳ್ಳುವ ಯೋಗ ಬರಲಿದೆ. ಅಧ್ಯಾತ್ಮ ಕಾರ್ಯಕ್ರಮಗಳಿಗೆ ದೇಣಿಗೆ ಕೇಳಿಕೊಂಡು ಬಂದಲ್ಲಿ ನಿಮ್ಮಿಂದ ಸಾಧ್ಯವಾದಷ್ಟು/ ನಿಮ್ಮಿಂದ ಸಾಧ್ಯವಾದದ್ದನ್ನು ನೀಡಿ.
ಲೇಖನ- ಸ್ವಾತಿ ಎನ್.ಕೆ.