ಬೆಂಗಳೂರು, ಫೆಬ್ರವರಿ 19: ಅಭಿವೃದ್ಧಿ ಶುಲ್ಕದ ವಿಚಾರವಾಗಿ ಜಿಬಿಎ ಮತ್ತು ಗ್ರಾಮಸ್ಥರ ನಡುವೆ ಉಂಟಾಗಿರುವ ಭಿನ್ನಮತದಿಂದ ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ತಲೆದೂರಿದೆ. ಕೆ.ಆರ್. ಮಾರುಕಟ್ಟೆ ಬಳಿ 25-30ಕ್ಕೂ ಹೆಚ್ಚು ಆಟೋಗಳು ಮತ್ತು ಲಾರಿಗಳು ಕಸ ತುಂಬಿಕೊಂಡು ನಿಂತಲ್ಲೇ ನಿಂತಿವೆ. ನಿನ್ನೆಯಿಂದಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಬೆಂಗಳೂರಿನಿಂದ ಹೊರಟಿರುವ ಕಸ ತುಂಬಿದ ಲಾರಿಗಳನ್ನು ಬೆಳ್ಳಹಳ್ಳಿ ಮತ್ತು ದೊಡ್ಡಬಳ್ಳಾಪುರದಲ್ಲಿ ಡಂಪ್ ಮಾಡಲು ಗ್ರಾಮಸ್ಥರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಅಡ್ಡಿಪಡಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಅಭಿವೃದ್ಧಿ ಶುಲ್ಕ ಬಿಡುಗಡೆ ಮಾಡಿಲ್ಲ ಎಂಬುದು ಅವರ ಆರೋಪ. ದೊಡ್ಡಬಳ್ಳಾಪುರದಲ್ಲಿ ಕಸವೂ ಬೇಡ, ಹಣವೂ ಬೇಡ ಎಂಬ ವಾದವಿದ್ದರೆ, ಇತರೆ ಡ್ಯಾಂಪಿಂಗ್ ಯಾರ್ಡ್‌ಗಳಲ್ಲಿ ಶುಲ್ಕ ಹೆಚ್ಚಿಗೆ ಬೇಡಿಕೆಯಿದೆ. ಹೀಗಾಗಿ ಕಸದ ಲಾರಿಗಳು ಡಂಪಿಂಗ್ ಯಾರ್ಡ್‌ಗಳ ಹೊರಗೆ ನಿಂತಿವೆ. ಹೊಸ ಕಸ ಸಂಗ್ರಹಿಸಲು ಲಾರಿಗಳ ಕೊರತೆ, ಪರಿಸರ ಕಲುಷಿತವಾಗುತ್ತಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.