ಮೊಬೈಲ್ ನೋಡಿ ಕುರುಡಾದ ವಿದ್ಯಾರ್ಥಿನಿ ವಿಡಿಯೋ ಮಾಡಿ ಕ್ಷಮೆ ಕೇಳಿದ ಶಿಕ್ಷಕಿ ವಂದನಾ ರೈ ಕಾರ್ಕಳ!

ಮೊಬೈಲ್ ನೋಡಿ ಕುರುಡಾದ ವಿದ್ಯಾರ್ಥಿನಿ ವಿಡಿಯೋ ಮಾಡಿ ಕ್ಷಮೆ ಕೇಳಿದ ಶಿಕ್ಷಕಿ ವಂದನಾ ರೈ ಕಾರ್ಕಳ!



ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್ ವೀಕ್ಷಣೆ ಗೀಳಿಗೆ ಅಂಟಿಕೊಂಡಿದ್ದಾರೆ. ಅದನ್ನು ಬಿಡಿಸಲು ಹೇಗಾದರೂ ಉಪಾಯದ ಜಾಗೃತಿ ವಿಡಿಯೋ ಮಾಡಬೇಕೆಂದು ಉಪಾಯ ಮಾಡಿದ್ದಾರೆ. ಆಗ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಅತಿಯಾಗಿ ಮೊಬೈಲ್ ವೀಕ್ಷಣೆ ಮಾಡಿದ್ದರಿಂದ ಆಕೆಯ ಕಣ್ಣು ಕುರುಡಾಗಿದೆ ಎಂದು ಬಿಂಬಿಸುವಂತೆ ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿದ ರೀತಿಯಲ್ಲಿ ಬಟ್ಟೆ ಕಟ್ಟಿಕೊಂಡು ಬಂದು ಶಾಲಾ ಮಕ್ಕಳ ಮುಂದೆ ನಿಲ್ಲಿಸಿದ್ದಾರೆ.

ಮಕ್ಕಳು ಮೊಬೈಲ್ ನೋಡಿ ಕಣ್ಣು ಕುರುಡಾಗಿದ್ದಾಳೆ ಎಂಬ ದೃಶ್ಯವನ್ನು ನೋಡಿದ ಕೆಲವು ಮಕ್ಕಳು ಭಯಭೀತರಾಗಿ ಕಣ್ಣೀರಿಟ್ಟಿದ್ದಾರೆ. ಇನ್ನು ಕೆಲವರು ಮೊಬೈಲ್ ಮುಟ್ಟುವುದಿಲ್ಲ ಎಂದು ಅಳುತ್ತಾ ಹೇಳಿದ್ದಾರೆ. ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ, ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಶಿಕ್ಷಕಿಗೆ ಕೆಟ್ಟದಾಗಿ ಕಾಮೆಂಟ್ ಬರಲು ಶುರುವಾದವು. ಆಗ ಮಾನಸಿಕ ತಜ್ಞರಾದ ಭಂಡಾರಿ ಅವರು ಮಕ್ಕಳ ಮೇಲಾಗುವ ಪರಿಣಾಮದ ಬಗ್ಗೆ ಶಿಕ್ಷಕಿಗೆ ತಿಳಿಸಿದ್ದಾರೆ.

ನೆಟ್ಟಿಗರು, ‘ಕೋವಿಡ್ ಅವಧಿ ಸೇರಿದಂತೆ ವಿವಿಧ ತುರ್ತು ಸಮಯದಲ್ಲಿ ಮಕ್ಕಳು ಮೊಬೈಲ್ ಮೂಲಕವೇ ಶಿಕ್ಷಣ ಕಲಿತಿದ್ದಾರೆ. ನಿಮ್ಮ ಸಂದೇಶ ತಪ್ಪಾಗಿ ಹೋಗುತ್ತಿದೆ ಎಂಬ ವಿರೋಧಗಳು ಕೂಡ ಬಂದಿದ್ದವು.  ಇನ್ನು ಕೆಲವರು ನೀವು ಕಾರ್ಕಳ ಶಿಕ್ಷಕಿ ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತಿದೆ ಎಂದೂ ಜರಿದಿದ್ದರು.

ಇದರ ಬೆನ್ನಲ್ಲಿಯೇ ಶಿಕ್ಷಕಿ ವಂದನಾ ರೈ ಅವರು, ನಾನು ಮಕ್ಕಳಿಗೆ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಈ ಪ್ರಯತ್ನ ಮಾಡಲಾಗಿತ್ತು. ಆದರೆ, ಈ ವಿಡಿಯೋ ಮಾಡುವುದಕ್ಕೂ ಮುನ್ನ ಅದರ ಸಾಧಕ ಬಾಧಕ ಅರಿತುಕೊಳ್ಳಬೇಕಿತ್ತು. ಇದೀಗ ನನ್ನ ವಿಡಿಯೋ ಡಿಲೀಟ್ ಮಾಡಿಯಾಗಿದೆ ಎಂದು ಶಿಕ್ಷಕಿ ವಂದನಾ ರೈ ಅವರು ಬರೆದುಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *