ಆನೆಗಳ (ಆನೆಗಳು) ಆಟ ತುಂಟಾಟಗಳನ್ನು ನೋಡಲು ಎರಡು ಕಣ್ಣು ಸಾಲದು. ತನ್ನನ್ನು ಒದಗಿಸುವ ವ್ಯಕ್ತಿಗಳ ಜೊತೆಗೆ ಪ್ರೀತಿಯಿಂದ ಗುದ್ದಾಡುತ್ತವೆ. ಕೆಲವೊಮ್ಮೆ ಅತ್ಯಂತ ಸಲುಗೆಯಿಂದ ವರ್ತಿಸುತ್ತವೆ. ಇದೀಗ ಇಂತಹದ್ದೇ ತಮಾಷೆಯೆನಿಸುವ ವಿಡಿಯೋ ವೈರಲ್ ಆಗಿದೆ. ಆನೆಯೊಂದು ಮಹಿಳೆಯ (ಮಹಿಳೆ) ತಲೆಯಲ್ಲಿದ್ದ ಟೋಪಿಯನ್ನು ಮೆಲ್ಲನೆ ಎಗರಿಸಿದ್ದು, ಆಮೇಲೆ ಆಗಿದ್ದು ನೋಡಿದ್ರೆ ನೀವು ಶಾಕ್ ಆಗ್ತೀರಾ. ಗಜರಾಜನ ಕ್ಯೂಟ್ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಎನಿವೇ ಮನ್ಯವಿ (ಹೇಗಿದ್ದರೂ ಮಾನ್ಯವಿ) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಆನೆಯ ತುಂಟಾಟವನ್ನು ನೋಡಬಹುದು. ಆನೆಯೊಂದು ಮಹಿಳೆಯ ಹಿಂಬದಿಯಲ್ಲಿ ನಿಂತುಕೊಂಡ ಅವಳ ತಲೆಯಲ್ಲಿದ್ದ ಟೋಪಿಯನ್ನು ಸೊಂಡಿಲಿನಿಂದ ಮೆಲ್ಲನೆ ಎಗರಿಸಿದೆ. ಆ ಬಳಿಕ ತಾನು ಏನು ಮಾಡಿಲ್ಲ ಎಂಬಂತೆ ಗಂಭೀರವಾಗಿ ನಿಂತುಕೊಂಡಿದೆ. ಅಲ್ಲೇ ಇದ್ದವರು ಈ ಗಜರಾಜನ ತುಂಟಾಟ ಕಂಡು ನಕ್ಕಿದ್ದಾರೆ. ತನ್ನ ಟೋಪಿಯನ್ನು ಎಗರಿಸಿದ ಆನೆಯ ಬಳಿ ಮಹಿಳೆಯೂ ಟೋಪಿ ಕೊಡುವಂತೆ ಮನವಿ ಮಾಡಿದ್ದಾಳೆ. ಮಹಿಳೆಯ ಮಾತಿಗೆ ಕರಗಿದ ಆನೆಯೂ ಮೆಲ್ಲನೆ ಟೋಪಿಯನ್ನು ಹಿಂದಿರುಗಿಸುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಇದು ಮೂಕ ಜೀವಿಗಳ ಶುದ್ಧ ಗೆಳೆತನ; ತನ್ನ ಸ್ನೇಹಿತ ಡಾಲಿಯೊಂದಿಗೆ ತುಂಟಾಟಕ್ಕೆ ಇಳಿದ ಆನೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಖತರ್ನಾಕ್ ಆನೆ ಎಂದರೆ, ಮತ್ತೊಬ್ಬರು, ತುಂಬಾನೇ ಮುದ್ದಾಗಿದೆ, ಆನೆ ನೋಡಲು ಗಂಭೀರವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಬುದ್ದಿವಂತ ಗಜರಾಜ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ