ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮೊದಲು ಎಲ್ಲಾ ಪಾತ್ರಗಳ ಪರಿಚಯವನ್ನು ತಂಡದವರು ಬಯಸಿದ್ದರು. ಈಗ ಸಿನಿಮಾದ ಟೀಸರ್ ರಿಲೀಸ್ ಮಾಡುವ ಸಮಯ. ಫೆಬ್ರವರಿ 20 ರಂದು ಬೆಳಿಗ್ಗೆ 9.35ಕ್ಕೆ ಟೀಸರ್ ಬಿಡುಗಡೆ ಕಾಣಲಿದೆ. ಈ ಟೀಸರ್ ರಿಲೀಸ್ ಆದ ಬಳಿಕ ಸಿನಿಮಾ ಬಗ್ಗೆ ಇರೋ ಕ್ರೇಜ್ ಮತ್ತಷ್ಟು ಹೆಚ್ಚು ನಿರೀಕ್ಷೆ ಇದೆ.
‘ಟಾಕ್ಸಿಕ್’ ಟ್ರೇಲರ್ ಬಗ್ಗೆ ಇತ್ತೀಚೆಗೆ ಸುದ್ದಿ ಹರಿದಾಡಿದೆ. ಮಾರ್ಚ್ ಮೊದಲ ವಾರದಲ್ಲಿ ಟ್ರೇಲರ್ ಬರಲಿದೆ ಎಂಬ ಮಾಹಿತಿ ಇದೆ. ಅದಕ್ಕೂ ಮೊದಲು ಅಭಿಮಾನಿಗಳಿಗೆ ಸರ್ ಪ್ರೈಸ್ ಸಿಕ್ಕಿದೆ. ‘ಟಾಕ್ಸಿಕ್’ ಟ್ರೇಲರ್ ರಿಲೀಸ್ ಬಗ್ಗೆ ತಂಡ ಮಾಹಿತಿ ನೀಡಿದೆ. ಈ ವಿಷಯ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.
ಈ ಮೊದಲು ‘ಟಾಕ್ಸಿಕ್’ ರಾಯ ಪಾತ್ರವನ್ನು ಪರಿಚಯಿಸೋ ಟೀಸರ್ ರಿಲೀಸ್ ಮಾಡಲಾಗಿದೆ. ಟೀಸರ್ ನಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳು ಇದ್ದವು. ಆ ದೃಶ್ಯಗಳ ಕಾರಣಕ್ಕೆ ಟೀಸರ್ ಸಾಕಷ್ಟು ಸದ್ದು ಮಾಡಿತು. ಈಗ ಹೊಸ ಟೀಸರ್ ಮೂಲಕ ಎದುರು ಬರಲು ಯಶ್ ರೆಡಿ ಆಗಿದ್ದಾರೆ. ಈ ಟೀಸರ್ ನಲ್ಲೂ ಬೋಲ್ಡ್ ದೃಶ್ಯಗಳು ಇರುತ್ತವೆ ಎಂಬುದು ಸದ್ಯದ ಪ್ರಶ್ನೆ.
ವಿಷಕಾರಿ: ಹೊಸ ಪೋಸ್ಟರ್‌ನಲ್ಲಿ ರಕ್ತಸಿಕ್ತ ಯುದ್ಧಭೂಮಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ದೃಢವಾಗಿ ನಿಂತಿದ್ದಾರೆ; ಟೀಸರ್ ಫೆಬ್ರವರಿ 20 ರಂದು ಬೆಳಿಗ್ಗೆ 9:35 ಕ್ಕೆ.#ಟಾಕ್ಸಿಕ್ ಟೀಸರ್#ವಿಷಕಾರಿ 19-03-2026 ರಿಂದ ವಿಶ್ವಾದ್ಯಂತ ಸಿನಿಮಾಗಳಲ್ಲಿ@TheNameIsYash #ನಯನತಾರಾ @ಹುಮಾಸ್ಕುರೇಶಿ @advani_kiara @rukminitweets #ತಾರಾಸುತಾರಿಯಾ #ಗೀತು ಮೋಹನದಾಸ್ @KVNProductions… pic.twitter.com/rOiVSEnPe0
— greatandhra (@greatandhranews) ಫೆಬ್ರವರಿ 19, 2026
‘ಟಾಕ್ಸಿಕ್’ ಸಿನಿಮಾದ ಪ್ರಚಾರ ವೇಗವಾಗಿ ಸಾಗುತ್ತಿಲ್ಲ ಎಂಬ ಬೇಸರ ಅಭಿಮಾನಿಗಳಿಗೆ ಇತ್ತು. ಈಗ ‘ಟೀಸರ್’ ಸಿನಿಮಾ ಪ್ರಚಾರಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ ಮುಂದಕ್ಕೆ ಹೋಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ರಿಲೀಸ್ ಆಗಿರೋ ಪೋಸ್ಟರ್‌ನಲ್ಲಿ ರಿಲೀಸ್ ದಿನಾಂಕದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರೋದು ಖಚಿತವಾಗಿದೆ.
ಇದನ್ನೂ ಓದಿ: ‘ಟಾಕ್ಸಿಕ್‌ಗೆ ಕೇಡು ಬಯಸಿದ ಧುರಂಧರ ಕರ್ಮ ಹಿಂಬಾಲಿಸುತ್ತದೆ’; ಹಿಂದಿ ಯೂಟ್ಯೂಬರ್ ಸೆನ್ಸೇಷನ್ ಹೇಳಿಕೆ
‘ಟಾಕ್ಸಿಕ್’ ಚಿತ್ರಕ್ಕೆ ಯಶ್ ನಾಯಕ. ಗೀತು ಮೋಹನ್‌ದಾಸ್ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಸೇರಿದಂತೆ ಅನೇಕರಿದ್ದಾರೆ. ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಟೀಸರ್ ಮೂಲಕ ಅಭಿಮಾನಿಗಳ ಒಂದಷ್ಟು ಪ್ರಶ್ನೆಗೆ ಉತ್ತರ ಸಿಗೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.