Headlines

ಬಗೆದಷ್ಟು ಬಯಲಾಗ್ತಿದೆ ಪಿಲಿಕುಳದ ಅಕ್ರಮ: ಕಾಳಿಂಗ ಸರ್ಪದ ಹೆಸರಲ್ಲೂ ಭ್ರಷ್ಟಾಚಾರ?

ಬಗೆದಷ್ಟು ಬಯಲಾಗ್ತಿದೆ ಪಿಲಿಕುಳದ ಅಕ್ರಮ: ಕಾಳಿಂಗ ಸರ್ಪದ ಹೆಸರಲ್ಲೂ ಭ್ರಷ್ಟಾಚಾರ?


ಮಂಗಳೂರು, ಫೆಬ್ರವರಿ 19: ಪಿಲಿಕುಳ ಝೂ ಕಳೆದ ಕೆಲ ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿಯ ಸ್ಥಿತಿ ಕಂಡು ಬಂದಿದೆ ಅಧಿಕ ಗರಂ ಆಗುತ್ತಿದೆ. ಆ ಬೆನ್ನಲ್ಲೇ ಕಾಳಿಂಗ ಸರ್ಪದ ಹೆಸರಲ್ಲೂ ಇಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಕಾಳಿಂಗ ಸರ್ಪ ಸಂತಾನಾಭಿವೃದ್ಧಿ ಕೇಂದ್ರ ತೆರೆದು 2 ಕೋಟಿಗೂ ಅಧಿಕ ಅನುದಾನ ಪಡೆದಿದ್ದಾರೆ ಇಲ್ಲಿಯ ಆಡಳಿತ ಅವುಗಳ ಪಾಲನೆ ಮರೆತಿದೆ. ಹೀಗಾಗಿ ಸರಿಯಾಗಿ ಆಹಾರ, ಸಿಗದೆ ಅವು ಸಾವನ್ನಪ್ಪಿವೆ ಎಂದು ದೂರಲಾಗಿದೆ.

2022ರ ಜುಲೈನಲ್ಲಿ ಮೊಟ್ಟೆಯೊಡೆದು 38 ಕಾಳಿಂಗ ಸರ್ಪ ಮರಿಗಳು ಹೊರ ಬಂದಿದ್ದ ವಿಚಾರ ಭಾರಿ ಸದ್ದು ಮಾಡಿತ್ತು. ಆದರೆ ಆ ಮರಿಗಳು ಈಗ ಏನಾಗಿವೆ ಎಂಬುದಕ್ಕೆ ದಾಖಲೆಗಳೇ ಇಲ್ಲ. ಇತ್ತ ಪಿಲುಕುಳದ ಆಡಳಿತ ಮಾತ್ರ ಆ ಮರಿಗಳನ್ನು ಚಾರ್ಮಾಡಿ ಬಳಿ ಬಿಟ್ಟಿದ್ದೇವೆ ಎಂದು ಸಬೂಬು ನೀಡುತ್ತಿದೆ. ಪಶ್ಚಿಮಘಟ್ಟಕ್ಕೆ ಮರಗಳನ್ನು ಬಿಡುವಾಗ ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳಬೇಕು. ಇಲ್ಲಿ ಇವರು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಜೊತೆಗೆ ಮರಿಗಳನ್ನು ಬಿಟ್ಟಿರುವ ಬಗ್ಗೆ ಯಾವುದೇ ದಾಖಲೆಯನ್ನೂ ಇಟ್ಟುಕೊಂಡಿಲ್ಲ ಎಂಬ ವಿಚಾರ ಮಾಹಿತಿ ಹಕ್ಕಿನಡಿ ಬಹಿರಂಗವಾಗಿದೆ.

ಇದನ್ನೂ ಓದಿ: ಪಿಲಿಕುಳ ಝೂ ಅವ್ಯವಸ್ಥೆಗೆ ಎಚ್ಡಿ ಗರಂ; ಆಗದಿದ್ರೆ ತಕ್ಷಣ ಬಂದ್ ಮಾಡಿ ಎಂದ ಪೀಠ

ಈ ನಡುವೆ ಹಾವುಗಳಿಗೆ ಆಹಾರ ನೀಡಿದ ಬಿಲ್ ಸಹ ಪಡೆಯಲಾಗಿದೆ, ಮಾಂಸ ಪೂರೈಸುವ ವ್ಯಾಪಾರಿಯ ಹೆಸರಲ್ಲಿ ಹಣ ಬಂದಿದೆ. ಸ್ನೇಕ್ ಫೀಡ್ ಎಂದು ಹೆಸರಿಟ್ಟು ಕೆರೆ ಹಾವು ಪೂರೈಕೆ ಮಾಡಲಾಗಿತ್ತು, ಈ ಅಕ್ರಮಗಳ ಬಗ್ಗೆ ವೈಲ್ಡ್ ಲೈಫ್ ಕ್ರೈಮ್ ಕಂಟ್ರೋಲ್‌ಗೆ ದೂರು ನೀಡಿರೋದಾಗಿ ವನ್ಯಜೀವಿ ಸಂರಕ್ಷಕ ಭುವನ್.

2022ರಲ್ಲಿ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 38 ಕಾಳಿಂಗ ಸರ್ಪ ಮರಿಗಳು ಮೊಟ್ಟೆಯೊಡೆದು ಹೊರ ಬಂದಿವೆ ಎಂದು ಹೇಳಲಾಗಿದೆ. ಆದರೆ ದಾಖಲೆಯಲ್ಲಿ ಇರುವುದು ಕೇವಲ 22 ಮರಿಗಳ ಉಲ್ಲೇಖ ಮಾತ್ರ. ಅವು ಸಹ ಮೂರು ತಿಂಗಳು ಕಳೆಯುವುದರ ಒಳಗೆ ಪ್ರಕಟವಾಗಿವೆ. ಕಾಳಿಂಗ ಸರ್ಪ ಸಂತಾನೋಭಿವೃದ್ಧಿ ಕೇಂದ್ರದ ಹೆಸರಲ್ಲಿ ಇವರು ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ಸ್ಥಳೀಯ ಕಂಪನಿಯ ಎಸ್‌ಎಸ್‌ಆರ್ ಅನುದಾನದಡಿ ಕೋಟ್ಯಾಂತರ ರೂಪಾಯಿ ಹಣ ಪಡೆದಿದ್ದಾರೆ. ಪಿಲಿಕುಳ ಅವ್ಯವಸ್ಥೆಯ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ, ಈ ವಿಚಾರವನ್ನು ಸಹ ನ್ಯಾಯಾಲಯದ ಗಮನಕ್ಕೆ ತರೋದಾಗಿ ಭುವನ್ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *